World Cup 2023: ಲಂಕಾಗೆ ಬೆಂಕಿ ಹಚ್ಚಿ ನಂ.1 ಪಟ್ಟಕ್ಕೇರಿದ ಶಮಿ

Public TV
2 Min Read
Shami

ಮುಂಬೈ: 2023ರ ಐಸಿಸಿ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯಲ್ಲಿ ಮೊದಲ ತಂಡವಾಗಿ ಟೀಂ ಇಂಡಿಯಾ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ. ಕೇವಲ 55 ರನ್‌ಗಳಿಗೆ ಶ್ರೀಲಂಕಾ ತಂಡವನ್ನು ಧೂಳಿಪಟ ಮಾಡಿದ ಭಾರತ, 302 ರನ್​​ಗಳ ವಿಶ್ವದಾಖಲೆಯ ಜಯ ಸಾಧಿಸಿತು. ಅದರಲ್ಲೂ ಲಂಕಾ ವಿರುದ್ಧ ಬೆಂಕಿ ಬೌಲಿಂಗ್‌ ದಾಳಿ ಮಾಡಿದ ಮೊಹಮ್ಮದ್ ಶಮಿ (Mohammed Shami) 5 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ವಿಶ್ವಕಪ್​​ನಲ್ಲಿ ದಾಖಲೆಯೊಂದನ್ನು ನಿರ್ಮಿಸಿದರು.

ಲಂಕಾ (Sri Lanka) ವಿರುದ್ಧ ಕೇವಲ 5 ಓವರ್‌ ಬೌಲಿಂಗ್‌ ಮಾಡಿದ ಶಮಿ, 18 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರು. ಇದರೊಂದಿಗೆ ಟೀಂ ಇಂಡಿಯಾ ಪರ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್​ ಕಿತ್ತ ಮೊದಲ ಬೌಲರ್​ ಎಂಬ ಖ್ಯಾತಿ ಗಳಿಸಿದ್ರು. ಪ್ರಸ್ತುತ ಟೂರ್ನಿಯಲ್ಲಿ ತಾನು ಆಡಿದ ಮೂರೇ ಪಂದ್ಯಗಳಲ್ಲಿ 14 ವಿಕೆಟ್ ಪಡೆದ ಶಮಿ, ಆ ಮೂಲಕ ವಿಶ್ವಕಪ್​​ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಅತಿಹೆಚ್ಚು ವಿಕೆಟ್​ ಪಡೆದ ಜಹೀರ್​ ಖಾನ್ ಮತ್ತು ಜಾವಗಲ್ ಶ್ರೀನಾಥ್ (Zaheer Khan And Javagal Srinath) ಅವರ 44 ವಿಕೆಟ್​ಗಳ ಜಂಟಿ ದಾಖಲೆಯನ್ನ ನುಚ್ಚು ನೂರು ಮಾಡಿದ್ರು. ಇದನ್ನೂ ಓದಿ: World Cup 2023: ಗಿಲ್‌ ಕೈ ತಪ್ಪಿದ ಶತಕ – ಸಾರಾಗೆ ಬೇಸರ 

ಸದ್ಯ 14 ವಿಶ್ವಕಪ್​ ಪಂದ್ಯಗಳನ್ನಾಡಿರುವ ಶಮಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 45 ವಿಕೆಟ್‌ ಪಡೆದು ನಂ.1 ಸ್ಥಾನದಲ್ಲಿದ್ದರೆ, 44 ವಿಕೆಟ್​ ಪಡೆದ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ಕ್ರಮವಾಗಿ 2-3ನೇ ಸ್ಥಾನದಲ್ಲಿದ್ದಾರೆ. 33 ವಿಕೆಟ್​ ಜಸ್ಪ್ರೀತ್ ಬುಮ್ರಾ 4ನೇ ಸ್ಥಾನ ಮತ್ತು 31 ವಿಕೆಟ್​ ಪಡೆದಿರುವ ಅನಿಲ್ ಕುಂಬ್ಳೆ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 48 ವರ್ಷಗಳಲ್ಲೇ ಮೊದಲು! ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ

ಇದೇ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್, ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಉಡೀಸ್‌ ಮಾಡಿದ್ದ ಶಮಿ ಶ್ರೀಲಂಕಾ ವಿರುದ್ಧವೂ ಪ್ರಮುಖ 5 ವಿಕೆಟ್‌ಗಳನ್ನ ಪಡೆಯುವ ಮೂಲಕ ಲಂಕಾ ದಹನಕ್ಕೆ ಕಾರಣವಾದರು. ಇದರೊಂದಿಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 45 ವಿಕೆಟ್​​ ಪಡೆದ ಸಾಧನೆ ಮಾಡಿದರು. ಜೊತೆಗೆ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಸತತ 2 ಬಾರಿ 4ಕ್ಕೂ ಹೆಚ್ಚು ವಿಕೆಟ್‌ ಪಡೆದ ವಿಶ್ವದ 2ನೇ ಬೌಲರ್ ಎಂಬ ವಿಶೇಷ ಸಾಧನೆಗೂ ಪಾತ್ರರಾದರು. ಇದನ್ನೂ ಓದಿ: ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಆಫ್ರಿದಿ – ಟಾಪ್ 10 ರಲ್ಲಿ ಇಬ್ಬರು ಟೀಂ ಇಂಡಿಯಾ ಆಟಗಾರರು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article