ಬೆಂಗಳೂರು: ಯುಬಿ ಸಿಟಿಯ ಫರ್ಜಿ ರೆಸ್ಟೋರೆಂಟ್‍ನಲ್ಲಿ ಗೂಂಡಾಗಿರಿ ಮಾಡಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ಶಾಸಕ ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ನ ಪುಂಡಾಟ ಜೈಲಿನಲ್ಲೂ ಮುಂದುವರಿದಿದೆ.ಇದನ್ನೂ ಓದಿ: ಫರ್ಜಿ ಕೆಫೆಯಲ್ಲಿ ನಲಪಾಡ್ ಗುಂಡಾಗಿರಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್
Advertisement
ಸ್ನೇಹಿತನ ಮೇಲೆಯೇ ರೌಡಿ ನಲಪಾಡ್ ಕೈ ಮಾಡಿದ್ದಾನೆ. ಸಹ ಅರೋಪಿ ಅಬ್ರಾಸ್ ಜೊತೆ ಮಹಮ್ಮದ್ ನಲಪಾಡ್ ಹೊಡೆದಾಡಿಕೊಂಡಿದ್ದಾನೆ. ನಿನ್ನಿಂದಲೇ ನಮಗೂ ಈ ಗತಿ ಬಂತು. ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದು ಎ5 ಅರೋಪಿ ಅಬ್ರಾಸ್ ಹೇಳಿದ್ದಾನೆ. ಇದರಿಂದ ಕೆರಳಿದ ಮಹಮ್ಮದ್ ನಲಪಾಡ್, ಅಬ್ರಾಸ್ ಮೇಲೆ ಮುಗಿಬಿದ್ದು ಹಲ್ಲೆ ಮಾಡಿದ್ದಾನೆ. ತಾವಿದ್ದ ಕೊಠಡಿಯಲ್ಲೇ ಅಬ್ರಾಸ್ ಮತ್ತು ನಲಪಾಡ್ ಬಾಡಿದಾಡಿಕೊಂಡಿದ್ದಾರೆ. ನಂತರ ಜೈಲು ಸಿಬ್ಬಂದಿ ಅಬ್ರಾಸ್‍ನನ್ನ ಬೇರೆ ಸೆಲ್‍ಗೆ ವರ್ಗಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶಾಂತಿನಗರದ ಪ್ರಿನ್ಸ್ ರೌಡಿ ನಲಪಾಡ್ ಈಗ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!
Advertisement
Advertisement
ನಲಪಾಡ್ ರಾತ್ರಿ ಕಣ್ಣಿರು ಹಾಕುತ್ತಾ ಊಟ ಮಾಡಿದ್ದಾನೆ ಎನ್ನಲಾಗಿದೆ. ಪಬ್, ರೆಸ್ಟೋರೆಂಟ್ ನಲ್ಲಿ ಶೋಕಿ ಜೀವನ ನಡೆಸುತ್ತಿದ್ದ ನಲಪಾಡ್ ರಾತ್ರಿ ಜೈಲಿನಲ್ಲಿ ಅನ್ನ ಸಂಬಾರ್ ತಿಂದಿದ್ದಾನೆ. ಬೆಳಗಿನ 4ರ ತನಕ ನಲಪಾಡ್ ಎದ್ದಿದ್ದ ಎಂದು ಹೇಳಲಾಗಿದೆ. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!
Advertisement
ಮೊಹಮ್ಮದ್ ನಲಪಾಡ್ ನಿಂದ ತೀವ್ರ ಹಲ್ಲೆಗೊಳಗಾಗಿ ಅಸ್ಪತ್ರೆ ಸೇರಿರುವ ವಿದ್ವತ್‍ಗೆ ಮಲ್ಯ ಅಸ್ಪತ್ರೆಯಲ್ಲಿ ನಾಲ್ಕನೇ ದಿನವೂ ಚಿಕಿತ್ಸೆ ಮುಂದುವರೆದಿದೆ. ತೀವ್ರ ನಿಗಾ ಘಟಕದಲ್ಲಿ ವಿದ್ವತ್‍ಗೆ ಚಿಕಿತ್ಸೆ ನೀಡುತ್ತಿದ್ದು ಮುಖದ ಊತ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಗಾಯದ ನೋವು ಜಾಸ್ತಿ ಇರುವುದರಿಂದ ವಿದ್ವತ್‍ಗೆ 102 ಡಿಗ್ರಿ ಜ್ವರ ಇತ್ತು. ಇದೀಗ 101 ಡಿಗ್ರಿಗೆ ಜ್ವರ ಇಳಿಮುಖವಾಗಿದ್ದು, ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡ್ತಿದ್ದಾರೆ. ಇದನ್ನೂ ಓದಿ: ನನ್ನ ಸೋದರನಿಗೆ ನೋವಾದ್ರೆ, ನನಗೂ ನೋವಾಗುತ್ತೆ- ವಿದ್ವತ್‍ಗೆ ನ್ಯಾಯ ದೊರಕಬೇಕೆಂದು ಒತ್ತಾಯಿಸಿದ ಗುರು ರಾಜ್‍ಕುಮಾರ್
ಇನ್ನೂ ಮೂರ್ನಾಲ್ಕು ದಿನ ವಿದ್ವತ್‍ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. ವಿದ್ವತ್ ಮುಖ, ಕಣ್ಣು, ಮೂಗು, ಹಾಗೂ ಪಕ್ಕೆಲುಬುಗಳ ಮೂಳೆ ಮುರಿದಿದ್ದರಿಂದ ವಿದ್ವತ್ ಮೊದಲಿನಂತಾಗಲು ತಿಂಗಳಿಗೂ ಹೆಚ್ಚು ಕಾಲ ಬೇಕಾಗುತ್ತೆ ಎನ್ನಲಾಗಿದೆ.
ವಿದ್ವತ್ ಅರೋಗ್ಯ ವಿಚಾರಿಸಲು ರಾಘವೇಂದ್ರ ರಾಜ್‍ಕುಮಾರ್ ಅವರ ಮಗ ಗುರುರಾಜ್ ಕುಮಾರ್ ಅಗಮಿಸಿದ್ದರು. ಇದೇ ವೇಳೆ ರಾಘವೇಂದ್ರ ರಾಜ್‍ಕುಮಾರ್ ಮನೆಯಿಂದ ಊಟ ಸಹ ತಂದು ಕೊಟ್ಟಿದ್ದು, ವಿದ್ವತ್ ಶೀಘ್ರ ಗುಣವಾಗಲೀ ಅಂತ ಹಾರೈಸಿದ್ರು.
https://www.youtube.com/watch?v=p8o_3v5-ZYs
https://www.youtube.com/watch?v=XE5CFfnOvx0
https://www.youtube.com/watch?v=RtMFKdQtfME