ಉಡುಪಿ: ರಮ್ಯಾ ಇಷ್ಟು ದಿನ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ. ಇಷ್ಟು ತಿಂಗಳು ಇಷ್ಟು ವರ್ಷ ರಮ್ಯಾ ಎಲ್ಲಿದ್ದರು? ಎಲ್ಲಿಯೂ ಇಲ್ಲದ ರಮ್ಯಾ ಹಠಾತ್ ಯಾಕೆ ಬಂದರು? ಯಾವ ಕುರ್ಚಿಯ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರೆ ಎಂದು ಮೊಹಮ್ಮದ್ ಹಾರೀಸ್ ನಲಪಾಡ್ ಉಡುಪಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.
Advertisement
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಂಸದೆ ನಟಿ ರಮ್ಯಾ ನಡುವೆ ಟ್ವೀಟ್ ವಾರ್ ನಡೆಯುತ್ತಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಮ್ಯಾ ತನ್ನ ಅಸ್ತಿತ್ವ ತೋರಿಸಲು ಬಂದಿದ್ದಾರಾ? ನಾನು ಒಬ್ಬಳು ಇದ್ದೀನಿ ಅಂತ ತೋರಿಸಿಕೊಳ್ಳುತ್ತಿದ್ದಾರಾ? ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ? ರಮ್ಯಾ ಬಂದದ್ದು ಯಾಕೆ? ಹೀಗೆಲ್ಲ ಮಾಡುತ್ತಿರುವುದು ಯಾವುದಕ್ಕೆ ಅಂತ ನಾವು ಅರ್ಥಮಾಡಿಕೊಳ್ಳಬೇಕು ಎಂದರು. ಇದನ್ನೂ ಓದಿ: ಪಿಎಸ್‌ಐ ಅಕ್ರಮ ಪ್ರಕರಣ – ಒಎಂಆರ್ ತಿದ್ದಲು ನೆರವಾಗಿದ್ದ ಡಿವೈಎಸ್‌ಪಿ ಶಾಂತಕುಮಾರ್ ಬಂಧನ
Advertisement
Advertisement
ಎಂಬಿ ಪಾಟೀಲ್ ಅಶ್ವಥ್ ನಾರಾಯಣ್ ಭೇಟಿ ವಿಚಾರವಾಗಿ ಮಾತನಾಡಿ, ಶಿವಕುಮಾರ್ ಅವರು ಬಹಳ ಕ್ಲೀಯರ್ ಆಗಿ ಇವತ್ತು ಸ್ಪಷ್ಟಪಡಿಸಿದ್ದಾರೆ. ಎಂಬಿ ಪಾಟೀಲ್, ಅವರು ಅಶ್ವತ್ ನಾರಾಯಣ್ ಹತ್ತಿರ ಹೋಗಿದ್ದಾರೆ ಎಂದು ಎಲ್ಲಿಯೂ ಅವರು ಹೇಳಿಲ್ಲ. ಕಾಂಗ್ರೆಸ್‍ನಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ. ಡಿಕೆಶಿ ಎಂಬಿ ಪಾಟೀಲ್ ಸಿದ್ದರಾಮಯ್ಯ ನಾವೆಲ್ಲ ಜೊತೆಗಿದ್ದೇವೆ. ಸುಮ್ಮನೆ ನಮ್ಮ ಪಕ್ಷಕ್ಕೆ ತೊಂದರೆ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಇನ್ನು ಮುಂದೆ ಬಲವಂತದ ಮತಾಂತರ ಅಪರಾಧ: ಕಾಯ್ದೆಯಲ್ಲಿ ಏನಿದೆ?
Advertisement
ರಮ್ಯಾಗೆ ಎನೋ ಗಮನ ಸೆಳೆಯುತ್ತಿದೆ ಅನ್ನಿಸುತ್ತಿದೆ. ನಾನು ಇನ್ನೂ ಇದ್ದೀನಿ ಎಂದು ತೋರಿಸಿ ಕೊಳ್ಳುತ್ತಿರಬಹುದು. ನನಗೂ ಒಂದು ಕುರ್ಚಿ ಕೊಡಿ ಎಂದು ಟವಲ್ ಹಾಕುತ್ತಿರಬಹುದು. ಈ ವಿಚಾರಕ್ಕೂ ರಮ್ಯಾಗೂ ಏನು ಸಂಬಂಧ? ರಮ್ಯಾ ಅವರ ಹಳೆಯ ಟ್ವೀಟ್‍ಗಳನ್ನು ತೆಗೆದುಕೊಂಡು ನೋಡಿ. ಯಾವುದೋ ಸಿನಿಮಾಗಳ ಬಗ್ಗೆ ಮಾತ್ರ ಟ್ವೀಟ್ ಮಾಡಿಕೊಂಡಿದ್ದರು. ಇತ್ತೀಚಿಗೆ ಅವರು ಯಾವುದೇ ರಾಜಕೀಯ ಟ್ವೀಟ್‍ಗಳನ್ನು ಮಾಡಿಲ್ಲ ಎಂದು ಕುಟುಕಿದರು.
ರಮ್ಯಾ ಹಠಾತ್ ಆಗಿ ಯಾಕೆ ನಮ್ಮ ನಾಯಕರ ಮೇಲೆ ಬಿದ್ದಿದ್ದಾರೆ? ಇದರಲ್ಲಿ ಯಾವುದೋ ಒಳ ಉದ್ದೇಶ ಇದೆ. ನಟಿ ರಮ್ಯಾಗೆ ಯಾರು ಹೆಚ್ಚು ಪ್ರಾಮುಖ್ಯತೆ ಕೊಡಬಾರದು ಅಂತ ಕೈಮುಗಿದು ಕೇಳಿಕೊಂಡರು. ರಮ್ಯಾ ಅವರು ಒಳ್ಳೆಯವರೇ. ಚಿಕ್ಕ ವಯಸ್ಸಿನಲ್ಲಿ ಸಂಸದರಾದವರು. ರಮ್ಯ ಈಗಾಗಲೇ ಒಳ್ಳೆಯ ಸಾಧನೆಗಳನ್ನು ಮಾಡಿದ್ದಾರೆ. ನಾನು ರಮ್ಯಾ ಅವರ ವಿರುದ್ಧ ಇಲ್ಲ. ನಟಿ ರಮ್ಯಾ ಇಂತಹ ಚೀಪ್ ಪಾಲಿಟಿಕ್ಸ್ ಮಾಡಬಾರದು. ನಟಿ ರಮ್ಯಾ ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಸಲಹೆ ನೀಡಿದರು.