ಬೆಂಗಳೂರು: ಬಿಜೆಪಿ ಪಕ್ಷದವರಿಗೆ ಮಾಡುವುದಕ್ಕೆ ಕೆಲಸವಿಲ್ಲ. ಅದಕ್ಕಾಗಿ ಬಾಯಿಂಗೆ ಬಂದ ಹಾಗೆ ಮಾತಾನಾಡುತ್ತಾರೆ. ಯತ್ನಾಳ್ ಈಗಾಗಲೇ ಸತ್ತಿದ್ದು ಅವರ ಶವಯಾತ್ರೆಯನ್ನು ಯುತ್ ಕಾಂಗ್ರೆಸ್ ಮಾಡಿದೆ ಎಂದು ಯುತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.
ಇಂದು ಮೌರ್ಯ ಸರ್ಕಲ್‍ನಲ್ಲಿ ಯುತ್ ಕಾಂಗ್ರೆಸ್ ವತಿಯಿಂದ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಪ್ರತಿಭಟನೆ ಮಾಡಿದರು. ನಿನ್ನೆ ಯತ್ನಾಳ್ ಅವರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಪಾಕಿಸ್ತಾನದ ಎಜೆಂಟ್ ಅಂತ ಕರೆದಿದ್ದಾರೆ. ಯಾವ ಆಧಾರದ ಮೇಲೆ ಅವರು ಹೀಗೆ ಕರೆಯುತ್ತಾರೆ. ಅವರಿಗೆ ನೈತಿಕತೆ ಇಲ್ಲ. ಯತ್ನಾಳ್ ಅಫ್ಘಾನಿಸ್ತಾನದ ಎಜೆಂಟ್ ಅಂತ ನಾನು ಹೇಳುತ್ತೇನೆ. ಅವರು ಈಗಾಗಲೇ ಸತ್ತಿದ್ದಾರೆ. ಅದಕ್ಕಾಗಿ ನಾವೂ ಶವಯಾತ್ರೆ ಮಾಡುತ್ತಿದ್ದೇವೆ. ಇದು ಕೊಳಕು ಬಿಜೆಪಿ ಪಕ್ಷ ಜನ ಇದನ್ನು ಕಿತ್ತು ಹಾಕಬೇಕು ಎಂದಿದ್ದಾರೆ. ಇದನ್ನೂ ಓದಿ: ಸೈನ್ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ರಚಿಸಿದ 20 ವರ್ಷದ ಯುವತಿ
ಬಿಜೆಪಿಗೆ ಧಿಕ್ಕಾರ ಕೂಗಿ ಶವಯಾತ್ರೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಯತ್ನಾಳ್ ಭಾವಚಿತ್ರವನ್ನು ಚಟ್ಟದ ಮೇಲೆ ಹಾಕಿ ಶವಯಾತ್ರೆ ಮಾಡಿ ಚಿತೆಗೆ ಬೆಂಕಿ ಹಚ್ಚಿ ಸಂಸ್ಕಾರ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಯತ್ನಾಳ್ ದೇಶದ್ರೋಹಿ ಕೋಮುವಾದಿ ಅಂತ ಕೂಗಿ ಬಾಯಿ ಬಡೆದುಕೊಂಡು ಅಂತ್ಯಸಂಸ್ಕಾರ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಹಾಕಿಸೋಕೆ ಅಥವಾ ತೆಗಿಸೋಕೆ ಯಾರೇ ಬಂದ್ರು ಒದ್ದು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ