ನವದೆಹಲಿ: ಕ್ರಿಕಟ್ ಟೀಂ ಇಂಡಿಯಾದ ಬೌಲರ್ ಮೊಹಮ್ಮದ್ ಶಮಿ ಮನೆಗೆ ಪುಟ್ಟ ದೇವತೆಯ ಆಗಮನವಾಗಿದೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪುಟ್ಟ ದೇವತೆಯ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಶಮಿ ಅವರ ಕಿರಿಯ ಸೋದರ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ತಮ್ಮನ ಮುದ್ದು ಮಗಳ ಫೋಟೋವನ್ನು ಹಂಚಿಕೊಂಡಿರುವ ತಮ್ಮನಿಗೆ ಶುಭ ಹಾರೈಸಿದ್ದಾರೆ. ನನ್ನ ಕುಟುಂಬದಲ್ಲಿ ಮತ್ತೊಂದು ಹೆಣ್ಣು ಮಗುವಿನ ಆಗಮನವಾಗಿದೆ. ಪ್ರೀತಿಯ ರಾಜಕುಮಾರಿಗೆ ನಿನಗೆ ಶುಭಾಶಯಗಳು. ಅತಿ ಹೆಚ್ಚು ಪ್ರೀತಿ ನಿನ್ನದಾಗಲಿ. ಈ ಜಗತ್ತಿಗೆ ನಿನಗೆ ಸ್ವಾಗತ. ಸೋದರನ ಕುಟುಂಬಕ್ಕೂ ಶುಭಾಶಯ ಎಂದು ಶಮಿ ಬರೆದುಕೊಂಡಿದ್ದಾರೆ.
https://www.instagram.com/p/B8GoYcwpBkm/
29 ವರ್ಷದ ಶಮಿ ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಪುತ್ರಿ ಸೀರೆ ಧರಿಸಿ ಪೂಜೆಯಲ್ಲಿ ಭಾಗಿಯಾಗಿದ್ದ ಫೋಟೋ ಹಂಚಿಕೊಂಡಿದ್ದರು. ತುಂಬಾ ಮುದ್ದಾಗಿ ಕಾಣಿಸ್ತಾ ಇದ್ದೀಯಾ ಮಗಳೇ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ದೇವರು ನಿನಗೆ ಒಳ್ಳೆಯದು ಮಾಡಲಿ, ಆದಷ್ಟು ಬೇಗ ಭೇಟಿಯಾಗೋಣ ಎಂದು ಬರೆದುಕೊಳ್ಳುವ ಮೂಲಕ ಪುತ್ರಿಯ ಮೇಲಿನ ಪ್ರೇಮವನ್ನು ವ್ಯಕ್ತಪಡಿಸಿದ್ದರು.
https://www.instagram.com/p/B78Px6bp_Cf/