CricketLatestMain PostSports

ತನ್ನದೇ ದೇಶದ ಧ್ವಜವನ್ನು ಕಾಲಿನಿಂದ ಎತ್ತಿದ ಪಾಕ್ ಕ್ರಿಕೆಟಿಗ – ಅಭಿಮಾನಿಗಳಿಂದಲೂ ಆಕ್ರೋಶ

ಇಸ್ಲಾಮಾಬಾದ್: ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಪಾಕಿಸ್ತಾನದಲ್ಲಿ (Pakistan) ಅಪಾರ ಅಭಿಮಾನಿಗಳ ಮನಗೆದ್ದಿದ್ದ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮೊಹಮದ್ ರಿಜ್ವಾನ್ (Mohammad Rizwan) ಇದೀಗ ಭಾರೀ ಟೀಕೆಗಳಿಗೆ ಗುರಿಯಾಗಿದ್ದಾರೆ.

ಮೊಹಮದ್ ರಿಜ್ವಾನ್ ತನ್ನದೇ ದೇಶದ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಪಂದ್ಯ ಮುಗಿದ ಬಳಿಕ ಪಾಕಿಸ್ತಾನದ ಅಭಿಮಾನಿಗಳಿಗೆ ರಿಜ್ವಾನ್ ಹಸ್ತಾಕ್ಷರ ನೀಡುತ್ತಿದ್ದರು. ಈ ವೇಳೆ ನೆಲಕ್ಕೆ ಬಿದ್ದ ಪಾಕಿಸ್ತಾನದ ಧ್ವಜವನ್ನು (Pakistan Flag) ಕಾಲಿನಿಂದ ಎತ್ತಿದ್ದಾರೆ. ಇದನ್ನೂ ಓದಿ: ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಿಜ್ವಾನ್ ಅವರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಿಜ್ವಾನ್ ಅವರ ವರ್ತನೆಗೆ ಪಾಕಿಸ್ತಾನದ ಜನ ಸೋಶಿಯಲ್ ಮೀಡಿಯಾ (Social Media)ದಲ್ಲಿ ಕಿಡಿಕಾರಿದ್ದು, ದೇಶದ ಧ್ವಜಕ್ಕೆ ಮರ್ಯಾದೆ ಕೊಡಿ. ಇಂಥ ಅಹಂಕಾರದ ವರ್ತನೆಯನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಟೆಸ್ಟ್ ಸರಣಿ ನಮ್ಮಲ್ಲಿ ಆಡಿಸಿ ಎಂದ ಇಂಗ್ಲೆಂಡ್ – ಅವಶ್ಯಕತೆ ಇಲ್ಲ ಎಂದ BCCI

ಇತ್ತೀಚೆಗೆ ಏಷ್ಯಾಕಪ್ (AisaCup) ಟೂರ್ನಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಆಡಿದ್ದ ರಿಜ್ವಾನ್ ಟೀಂ ಇಂಡಿಯಾ ವಿರುದ್ಧ ನಡೆದಿದ್ದ 2ನೇ ಪಂದ್ಯದಲ್ಲಿ ಅರ್ಧ ಶತಕ ಗಳಿಸುವ ಮೂಲಕ ತಮ್ಮ ಪಾಕಿಸ್ತಾನ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅಲ್ಲದೇ ಇಂದು ನಡೆದ ಇಂಗ್ಲೆಂಡ್ ವಿರುದ್ಧದ ಟಿ20 (T20) ಪಂದ್ಯದಲ್ಲೂ 46 ಎಸೆತಗಳಲ್ಲಿ 63 ರನ್ (3 ಸಿಕ್ಸರ್, 2 ಬೌಂಡರಿ) ಸಿಡಿಸಿದ್ದಾರೆ. ಇದೀಗ ತನ್ನದೇ ದೇಶದ ಧ್ವಜವನ್ನು ಕಾಲಿನಲ್ಲಿ ಎತ್ತುವ ಮೂಲಕ ಅಪಮಾನ ಮಾಡಿದ್ದು, ಟೀಕೆಗಳಿಗೆ ಗುರಿಯಾಗಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button