ನವದೆಹಲಿ: ಶ್ರೀಲಂಕಾ ವಿರುದ್ಧದ ಶುಕ್ರವಾರ ನಡೆದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸುತ್ತಾರೆ ಎಂದು ನಾನು ಪಂದ್ಯದ ಮೊದಲೇ ಹೇಳಿದ್ದೆ ಎಂದು ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಮೊಹಮ್ಮದ್ ಕೈಫ್ ತಮ್ಮ ಮೇಸೆಜ್ ನ ಸ್ಕ್ರಿನ್ ಶಾಟ್ ತೆಗೆದು ಪೋಸ್ಟ್ ಮಾಡಿ ಇಂದು ನಾನು ರೋಹಿತ್ ಶತಕ ಸಿಡಿಸುತ್ತಾರೆ ಎಂದು ನನ್ನ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದೆ. ಇದು ನಿಜವಾಗಿದೆ. ರೋಹಿತ್ ಈ ವಾರದಲ್ಲಿ ಎಂತಹ ಸಾಧನೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
Advertisement
ರಾತ್ರಿ 7.21ಕ್ಕೆ ಕೈಫ್ ಮೆಸೇಜ್ ಮಾಡಿದ್ದ ಈ ಸಂದೇಶ ಇರುವ ಸ್ಕ್ರೀನ್ ಶಾಟ್ ಅನ್ನು 8.26ಕ್ಕೆ ಕೈಫ್ ಟ್ವೀಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಕ್ರಿಕೆಟ್ ಅಭಿಮಾನಿಗಳು ಈ ಕುರಿತು ರಿ ಟ್ವೀಟ್ ಮಾಡಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
Advertisement
Advertisement
Advertisement
ಅಭಿಮಾನಿಗಳ ಟ್ವೀಟ್:
ಗುಜರಾತ್ ಚುನಾವಣೆ ಫಲಿತಾಂಶ ಕುರಿತು ಮೊದಲೇ ಏಕೆ ಹೇಳಿಲ್ಲ? -ಇಮ್ರಾನ್
ನಿಮ್ಮ ಫೋಟೋ ಶಾಪ್ ಕೌಶಲ್ಯಕ್ಕೆ ಶುಭವಾಗಲಿ – ಅದರ್ಶ್ ಸೆಜ್ವಾಲ್
ಮುಂದಿನ ಪ್ರಧಾನಿ ಯಾರು ಎಂದು ತಿಳಿಸಿ – ರಾಘವನ್
ರೋಹಿತ್ ಈ ಪಂದ್ಯದಲ್ಲಿ 43 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರೆವಿನಿಂದ 118 ರನ್ ಸಿಡಿಸಿದ್ದರು. ಟೀಂ ಇಂಡಿಯಾ 88 ರನ್ ಗಳ ಭಾರಿ ಗೆಲುವು ಪಡೆಯುವ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೊದಲ ಟಿ-20 ಸರಣಿಯನ್ನು ತನ್ನದಾಗಿಸಿಕೊಂಡಿತು. ಇದನ್ನೂ ಓದಿ: ರೋಹಿತ್ ಶರ್ಮಾ ಬ್ಯಾಟಿಂಗ್ ವೈಭವ ಹೀಗಿತ್ತು
ಕರ್ನಾಟಕದ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಜೋಡಿ ಟಿ20 165 ರನ್ ಗಳ ಜೊತೆಯಾಟವಾಡಿದ್ದು, ಇದು ಭಾರತದಲ್ಲಿ ಮೊದಲ ವಿಕೆಟ್ ಗೆ ದಾಖಲಾದ ದೊಡ್ಡ ಜೊತೆಯಾಟವಾಗಿದ್ದು, ವಿಶ್ವದಲ್ಲಿ ನಾಲ್ಕನೇಯ ದೊಡ್ಡ ಜೊತೆಯಾಟವಾಗಿದೆ. ಇದನ್ನೂ ಓದಿ: 23 ಎಸೆತಕ್ಕೆ 50 ರನ್, 35 ಎಸೆತಕ್ಕೆ 100 ರನ್: ಟಿ20ಯಲ್ಲೂ ರೋ’ಹಿಟ್’ ದಾಖಲೆಯ ಶತಕ