ಲಕ್ನೋ: ಉತ್ತರ ಪ್ರದೇಶ (Uttar Pradesh) ಮಾಧ್ಯಮಿಕ ಸಂಸ್ಕೃತ (Sanskrit) ಶಿಕ್ಷಾ ಪರಿಷತ್ತು ಮಂಡಳಿ ನಡೆಸಿದ ಪರೀಕ್ಷೆಯಲ್ಲಿ 13,738 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಮೊಹಮ್ಮದ್ ಇರ್ಫಾನ್ ಅಗ್ರ ಸ್ಥಾನ ಪಡೆದು ಅಭೂತಪೂರ್ವ ಸಾಧನೆ (Achievement) ಮಾಡಿದ್ದಾನೆ.
ಈತ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯವನಾಗಿದ್ದು, ಸಂಪೂರ್ಣಾನಂದ ಸಂಸ್ಕೃತ ಸರ್ಕಾರಿ ಶಾಲೆಯಲ್ಲಿ (Sampoornananda Sanskrit Government School) ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಸಂಸ್ಕೃತ ಪರೀಕ್ಷೆಯಲ್ಲಿ 82.71% ಅಂಕ ಪಡೆದು ಮೊದಲನೇ ಸ್ಥಾನ ಪಡೆದಿದ್ದಾನೆ. ಈತ ಇಸ್ಲಾಂ (Islam) ಧರ್ಮಕ್ಕೆ ಸೇರಿದವನಾಗಿದ್ದು, ತಂದೆ ಸಲಾಲುದ್ದೀನ್ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಮಗನ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಜ್ಜಿ ಗೆದ್ದಿದ್ದ ತೆಲಂಗಾಣದ ಮೇದಕ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಲೋಕಸಭೆಗೆ ಸ್ಪರ್ಧೆ?
Advertisement
Advertisement
ಪುತ್ರನ ಸಾಧನೆ ಬಗ್ಗೆ ಮಾತನಾಡಿದ ಅವರು, ಮಗನ ಸಾಧನೆ ತುಂಬಾ ಸಂತೋಷ ತಂದಿದೆ. ನಾನು ದಿನಗೂಲಿ ಕಾರ್ಮಿಕನಾಗಿರುವುದರಿಂದ ಮಗನನ್ನು ಉನ್ನತ ಶಾಲೆಯಲ್ಲಿ ಕಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸಂಪೂರ್ಣಾನಂದ ಸಂಸ್ಕೃತ ಶಾಲೆಗೆ ಸೇರಿಸಿದ್ದೆ. ಆ ಶಾಲೆಯಲ್ಲಿ ಸಂಸ್ಕೃತ ಕಡ್ಡಾಯ ವಿಷಯವಾಗಿದ್ದರಿಂದ ನನ್ನ ಮಗ ಅದನ್ನು ಇಷ್ಟಪಟ್ಟು ಕಲಿತ. ಈಗ ಅವನಿಗೆ ಸಂಸ್ಕೃತದಲ್ಲಿ ಬರೆಯಲು ಹಾಗೂ ಮಾತನಾಡಲು ಬರುತ್ತದೆ. ಅವನ ಮುಂದಿನ ಆಸೆಯಂತೆ ಸಂಸ್ಕೃತದಲ್ಲಿ ಶಾಸ್ತ್ರಿ (ಬಿಎ ಸಮಾನ) ಹಾಗೂ ಆಚಾರ್ಯ (ಎಂಎ ಸಮಾನ) ಓದಿಸುತ್ತೇನೆ. ಮುಂದೆ ಅವನು ಸಂಸ್ಕೃತ ಉಪನ್ಯಾಸಕನಾಗಬೇಕು ಎಂಬ ಆಸೆ ಹೊಂದಿದ್ದಾನೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿದ್ಯುತ್ ಕಡಿತ : ಮಂದ ಬೆಳಕಿನಲ್ಲೇ ಭಾಷಣ ಮಾಡಿದ ರಾಷ್ಟ್ರಪತಿ ಮುರ್ಮು