ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಹಾಗೂ ರಾಜಕಾರಣಿ ಮೊಹಮ್ಮದ್ ಅಜರುದ್ದೀನ್ ಅವರನ್ನು ಎಐಸಿಸಿ ಆಯ್ಕೆ ಮಾಡಿದೆ.
ಕಾಂಗ್ರೆಸ್ ಪಕ್ಷ ಸರಿಯಾಗಿ ನನ್ನನ್ನು ನೋಡಿಕೊಂಡಿರಲಿಲ್ಲ ಎಂದು ಮಾಜಿ ಸಂಸತ್ ಸದಸ್ಯರಾಗಿದ್ದ ಅಜರುದ್ದೀನ್ ಸಹ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಈ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಜರುದ್ದೀನ್ ಅವರನ್ನು ತೆಲಂಗಾಣದ ಕಾಂಗ್ರೆಸ್ ಕಾರ್ಯಾಧಕ್ಷ ಸ್ಥಾನವನ್ನು ನೀಡಿದೆ ಎಂದು ತಿಳಿದು ಬಂದಿದೆ.
Advertisement
INC COMMUNIQUE
Appointment regarding office bearers of Telangana Pradesh Congress Committee. pic.twitter.com/aaGV3uCB8r
— INC Sandesh (@INCSandesh) November 30, 2018
Advertisement
ಇದುವರೆಗೂ 2 ಬಾರಿ ಕಾಂಗ್ರೆಸ್ಸಿನಿಂದ ಟಿಕೆಟ್ ಪಡೆದು ಅಜರುದ್ಧಿನ್ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದರು. 2009ರಲ್ಲಿ ಉತ್ತರಪ್ರದೇಶದಲ್ಲಿ ಜಯ ಸಾಧಿಸಿದ್ದರೆ, 2014ರ ರಾಜಸ್ಥಾನದ ಸವಾಯ್ ಮುಧೋಪುರ್ ಕ್ಷೇತ್ರದಲ್ಲಿ ಸೋಲನ್ನು ಕಂಡಿದ್ದರು.
Advertisement
ಇದಲ್ಲದೇ 2019ರ ಲೋಕಸಭಾ ಚುನಾವಣೆ ಇಲ್ಲವೇ, 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ತೆಲಂಗಾಣ ಕಾಂಗ್ರೆಸ್ ಘಟಕ ಅಜರುದ್ದೀನ್ ಗೆ ಸೂಚಿಸಿತ್ತು. ಹೈದರಾಬಾದ್ ಮೂಲದವರಾದ ಅಜರುದ್ದೀನ್ 2019ರ ಲೋಕಸಭಾ ಚುನಾವಣೆಯಲ್ಲಿ ಸಿಖಂದರಬಾದ್ ನಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Advertisement
ಡಿಸೆಂಬರ್ 7 ರಂದು ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಇದರ ಜೊತೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಿದೆ. ಅಲ್ಲದೇ ಬಿ.ಎಂ. ವಿನೋದ್ ಕುಮಾರ್ ಮತ್ತು ಜಾಫರ್ ಜಾವೇದ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv