ಮಂಡ್ಯ: ಕಳೆದ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದು, ಲಂಚ ಮುಕ್ತವಾಗಿ ಕಾರ್ಯ ನಿರ್ವಹಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವು ಪಡೆಯಲಿದ್ದು, ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಮಾತನಾಡಿದ ಅವರು, ದೇಶ ಒಬ್ಬ ಸಮರ್ಥ ನಾಯಕನ ಹುಡಕಾಟದಲ್ಲಿತ್ತು. ಈ ವೇಳೆ ಅಧಿಕಾರ ವಹಿಸಿಕೊಂಡ ಪ್ರಧಾನಿ ಮೋದಿ ಅವರು ಶಕ್ತಿಶಾಲಿ ಆಡಳಿತದ ಮೂಲಕ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ಕಳೆದ ಐದು ವರ್ಷದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಆದ್ದರಿಂದ ಮುಂದಿನ ಐದು ವರ್ಷ ಅವರಿಗೆ ಆಡಳಿತ ನೀಡಬೇಕು ಎಂದರು.
Advertisement
Advertisement
ಈಗಾಗಲೇ ಬಿಜೆಪಿ ವಿರುದ್ಧ ಮಹಾಘಟಬಂಧನ್ ಮಾಡುವ ಪ್ರಯತ್ನ ನಡೆದಿದೆ. ಇತ್ತ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಮೂರನೇ ಶಕ್ತಿಯಾಗಿ ಹೊರಹೊಮ್ಮಿದ್ದಾರೆ, ಆದ್ದರಿಂದ ಅಲ್ಲಿ ತ್ರಿಕೋನ ಹೋರಾಟ ನಡೆಯಲಿದೆ. ಆದರೆ ಬಿಜೆಪಿಗೆ ಯುಪಿಯಲ್ಲಿ ತನ್ನದೇ ಗಟ್ಟಿನೆಲೆ ಇರುವುದರಿಂದ ಈ ಘಟಬಂಧನ್‍ಗಳು ರಾಜ್ಯಕ್ಕೆ ಮಾತ್ರ ಸೀಮಿತವಾಗಲಿವೆ. ಇದಕ್ಕೆ ಕಾರಣವೂ ಇದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಘಟಬಂಧನ್‍ಗೆ ಸೇರುವ ಸಾಧ್ಯತೆ ಇಲ್ಲ. ಅಲ್ಲದೇ ದೇಶದಲ್ಲಿ ಎಲ್ಲಾ ಕಡೆ ಮೋದಿ ಹವಾ ಇದೆ ಎಂದು ಸ್ಪಷ್ಟಪಡಿಸಿದರು.
Advertisement
ದೇಶದಲ್ಲಿ ಮೋದಿಯ ಆಡಳಿತ ಕಸಿಯಲು ವಿರೋಧಿ ಪಕ್ಷದಲ್ಲಿ ನಾಯಕತ್ವದ ಕೊರತೆ ಇದ್ದು, ಅವರಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿ ಬಗ್ಗೆಯೇ ಗೊಂದಲವಿದೆ. ಮೋದಿ ವರ್ಸಸ್ ಯಾರೂ ಎಂಬ ಗೊಂದಲದ ಪ್ರಶ್ನೆ ದೇಶದಲ್ಲಿಯೂ ಇದೆ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಜನರಿಗೆ ನಂಬಿಕೆಯಿಲ್ಲ ಇಲ್ಲ. ಮತ್ತೆ ಮೋದಿ ಪ್ರಧಾನಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು. ಇದೇ ವೇಳೆ ರಾಜ್ಯದಲ್ಲೂ ಬಿಜೆಪಿಗೆ ಉತ್ತಮ ಭವಿಷ್ಯ ಇದ್ದು, ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ ಬಂದಿರುವುದೇ ಇದಕ್ಕೆ ಸಾಕ್ಷಿ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv