ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ಪಣತೊಟ್ಟಿದ್ದೇವೆ. ಸುನಾಮಿಯನ್ನು ಹೇಗೆ ತಡೆಯಲು ಸಾಧ್ಯವಿಲ್ಲವೋ, ಹಾಗೇ ಮೋದಿ ಅಭಿಮಾನಿಗಳನ್ನ ತಡೆಯಲು ಸಾಧ್ಯವಿಲ್ಲ ಎಂದು ಟೀಂ ಮೋದಿ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಣತೊಟ್ಟಿದ್ದೇವೆ. ಸುನಾಮಿಯನ್ನು ತಡೆಯಲು ಸಾಧ್ಯವಿಲ್ಲವೋ, ಹಾಗೇ ಮೋದಿ ಅಭಿಮಾನಿಗಳನ್ನ ತಡೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಉತ್ತರ ಹಾಗೂ ದಕ್ಷಿಣ ಕರ್ನಾಟಕ ಅಂತ ಎರಡು ವಿಭಾಗ ಮಾಡಲಾಗಿದೆ. ಮೊದಲನೇ ಹಾಗೂ ಎರಡನೇ ಫೇಸ್‍ನಲ್ಲಿ ಚುನಾವಣಾ ಕ್ಯಾಂಪೇನ್ ಮಾಡಲಾಗುತ್ತಿದೆ. ಹಳ್ಳಿ ಹಳ್ಳಿಗೂ ನರೇಂದ್ರ ಮೋದಿ ಪರ ಪ್ರಚಾರ ಮಾಡಲಾಗುತ್ತಿದೆ. ಇಡೀ ಕರ್ನಾಟಕವೇ ಮೋದಿಯವರ ಅಲೆಯಲ್ಲಿದೆ. ವಿದೇಶದಿಂದಲೂ ಸಹ ಟೀಂ ಮೋದಿಗೆ ಅದ್ಭುತ ಬೆಂಬಲ ಸಿಗುತ್ತಿದೆ. ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಈ ಸಲ ಅಚ್ಚರಿ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
`ಭಾರತ ಮಾತಾಕೀ ಜೈ’ ಅಂತ ನಾವು ಹೇಳುತ್ತೇವೆ. `ರಾಹುಲ್ ಗಾಂಧಿ ಕೀ ಜೈ’ ಅಂತ ಕಾಂಗ್ರೆಸ್‍ನವರು ಹೇಳುತ್ತಾರೆ. ಇದು ಕಾಂಗ್ರೆಸ್ ಪಕ್ಷದ ದೇಶ ಭಕ್ತಿ ಎತ್ತಿ ತೋರಿಸುತ್ತಿದೆ. ಮೋದಿ ಮೇಲಿನ ಅಭಿಮಾನದಿಂದಾಗಿ ಜನರು ಹೋದಲ್ಲಿ ಎಲ್ಲ ಕಡೆ ಮೋದಿ ಮೋದಿ ಅನ್ನುತ್ತಿದ್ದಾರೆ. ನೀವು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಬೇಡಿ, ಮೋದಿ ಅಭಿಮಾನಿಗಳಿಗೆ ಸೂಲಿಬೆಲೆ ಕಿವಿಮಾತು ಹೇಳಿದರು.
ನಲ್ಲಿಯಲ್ಲಿ ಬರುವ ನೀರನ್ನು ತಡೆಯಬಹುದು. ಆದ್ರೆ ಸುನಾಮಿಯನ್ನು ಯಾರು ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಯಾರೋ 4 ಮಂದಿ ಮೋದಿ ಮೋದಿ ಎಂದು ಕೂಗಿದರೆ ತಡೆಯಬಹುದು. ಆದ್ರೆ ನೂರಾರು ಮಂದಿ ಮೋದಿ ಮೋದಿ ಎಂದರೆ ತಡೆಯಲು ಆಗಲ್ಲ. ಅಭಿಮಾನವನ್ನು ತಡೆಯಲು ಆಗಲ್ಲ ಎಂದು ಹೇಳಿದರು.
ಖರ್ಗೆ ಮುಖದ ಮೇಲೆ ಆತಂಕದ ಗೇರೆಗಳು ಎದ್ದು ಕಾಣುತ್ತಿವೆ, ಈ ಬಾರಿ ಖರ್ಗೆ ಸೋಲು ಖಚಿತ. ಅದಕ್ಕಾಗಿ ಅವರ ಮಗ ರಾಮನವಮಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಮುಂಬೈ ದಾಳಿಗೆ ಕಾಂಗ್ರೆಸ್ ಕೊಟ್ಟ ಪ್ರತ್ಯುತ್ತರ ಹೇಗಿತ್ತು? ಪುಲ್ವಾಮ ದಾಳಿಗೆ ಮೋದಿ ಕೊಟ್ಟ ಪ್ರತ್ಯುತ್ತರ ಹೇಗಿತ್ತು? ಇದೆಲ್ಲ ದೇಶದ ಜನರು ಮೋದಿ ಆಡಳಿತದಲ್ಲಿ ಅರ್ಥ ಮಾಡಿಕೊಂಡಿದ್ದಾರೆ ಎಂದರು.