ಮುಂಬೈ: ಪ್ರಧಾನಿ ಮೋದಿ ಅವರ ಹವಾ ದೇಶದಲ್ಲಿ ಮರೆಯಾಗಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದೇಶವನ್ನು ಮುನ್ನಡೆಸಲು ಸಿದ್ಧರಿದ್ದಾರೆ ಎಂದು ಮಹಾರಾಷ್ಟ್ರ ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ.
ನೋಟ್ ನಿಷೇಧ ಮತ್ತು ಜಿಎಸ್‍ಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಗೊಳಿಸಿದ ನಂತರ ಗುಜರಾತ್ ಜನರು ಕೇಂದ್ರ ಸರಕಾರದ ಮೇಲೆ ಸಿಡಿದೆದ್ದಿದ್ದು, ಡಿಸೆಂಬರ್‍ನಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾವತ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
Advertisement
ರಾಹುಲ್ ಗಾಂಧಿ ದೇಶವನ್ನು ಮುನ್ನಡೆಸಲು ಸಮರ್ಥರಾಗಿದ್ದು, ಇನ್ನು ಅವರನ್ನು ಪಪ್ಪು ಎಂದು ಕರೆಯುವಲ್ಲಿ ಅರ್ಥವಿಲ್ಲ ಎಂದು ಹೇಳಿದ ರಾವತ್, ಜನರು ಯಾರನ್ನು ಬೇಕಾದರು ಪಪ್ಪು ಮಾಡಲು ಸಾಧ್ಯವಿದೆ ಎಂದರು.
Advertisement
ಶಿವಸೇನೆ ಕೇಂದ್ರ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪ್ರಮುಖ ಅಂಗ ಪಕ್ಷವಾಗಿದ್ದು, ಸಂಸದರ ಈ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರವನ್ನು ಉಂಟುಮಾಡಿದೆ. ಶಿವಸೇನೆ ನಾಯಕರು ಬಿಜೆಪಿ, ಮೋದಿ ವಿರುದ್ಧ ಟೀಕಿಸುವುದು ಇದೇ ಮೊದಲೆನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಶಿವಸೇನೆ ಕೇಂದ್ರ ಸರ್ಕಾರವನ್ನು ಟೀಕಿಸಿತ್ತು.