– ಮೋದಿ ಸಂಚರಿಸುವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ
ಮೈಸೂರು: ಕರ್ನಾಟಕ ಕುರುಕ್ಷೇತ್ರದ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಧುಮುಕುತ್ತಿದ್ದಾರೆ. ಇಂದು (ಏ.14) ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ (Mysuru) ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಯೂ ನಡೆಸಲಿದ್ದಾರೆ. ಬಳಿಕ ಸಂಜೆ 7:45ರ ವೇಳೆಗೆ ಮಂಗಳೂರಿನಲ್ಲಿ ಅದ್ಧೂರಿ ರೋಡ್ ಶೋ ನಡೆಸಲಿದ್ದು, ಬಿಜೆಪಿ-ಜೆಡಿಎಸ್ (BJP JDS) ನಾಯಕರೂ ಸಾಥ್ ನೀಡಲಿದ್ದಾರೆ.
Advertisement
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನಿ ಸಾರ್ವಜನಿಕ ಸಭೆ ಹಿನ್ನೆಲೆ, ಮೋದಿ ಸಂಚರಿಸುವ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಹಾರಾಜ ಕಾಲೇಜು ಮೈದಾನದ ಸುತ್ತಲಿನ ಕೆಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಹುಣಸೂರು ರಸ್ತೆ ಮಾರ್ಗವಾಗಿ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಿಕೊಡಲಾಗಿದೆ.
Advertisement
Advertisement
ಕೆಎಸ್‌ಆರ್‌ಟಿಸಿ ರೂಟ್ ಬಸ್ಸುಗಳು ಸಂಚರಿಸಬೇಕಾದ ಮಾರ್ಗ
Advertisement
1. ಹುಣಸೂರು ಮಾರ್ಗದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮಾರ್ಗ:
ಮಡಿಕೇರಿ, ಹುಣಸೂರು, ಹಾಸನ ಕಡೆಯಿಂದ ಹುಣಸೂರು ರಸ್ತೆ ಮಾರ್ಗವಾಗಿ ಮೈಸೂರು ನಗರಕ್ಕೆ ಬರುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಹಿನಕಲ್ ಫ್ಲೈಓವರ್ ಜಂಕ್ಷನ್- ಎಡತಿರುವು- ರಿಂಗ್‌ರಸ್ತೆ- ರಾಯಲ್‌ಇನ್‌ಜಂಕ್ಷನ್- ಬಲ ತಿರುವು- ಕೆ.ಆರ್.ಎಸ್. ರಸ್ತೆ- ವಿ.ವಿ.ಪುರಂ ವೃತ್ತ- ಆಕಾಶವಾಣಿ ವೃತ್ತ- ದಾಸಪ್ಪ ವೃತ್ತ- ಬಲ ತಿರುವು- ಮೆಟ್ರೋಪೋಲ್ ವೃತ್ತ- ಮೂಡಾ ವೃತ್ತ- ಎಡತಿರುವು- ರಮಾವಿಲಾಸ ರಸ್ತೆ- ಬನುಮಯ್ಯಜಂಕ್ಷನ್- ಬಲ ತಿರುವು- ಬಿ.ರಾಚಯ್ಯ ವೃತ್ತ- ಎಡತಿರುವು- ಪುರಂದರರಸ್ತೆ- ಕುಸ್ತಿ ಅಖಾಡ ಜಂಕ್ಷನ್- ಹಾರ್ಡಿಂಜ್ ವೃತ್ತ- ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪುವುದು.
2. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹುಣಸೂರು ರಸ್ತೆಗೆ ಮಾರ್ಗ:
ಕೆಎಸ್‌ಆರ್‌ಟಿಸಿ ಬಸ್ಸುಗಳು ಬಸ್ ನಿಲ್ದಾಣದ ಬಳಿ ಎಡ ತಿರುವು ಪಡೆದು ಇರ್ವಿನ್ ರಸ್ತೆ- ನೆಹರು ವೃತ್ತ- ಆಯುರ್ವೇದಿಕ್ ವೃತ್ತ- ರೈಲ್ವೇ ನಿಲ್ದಾಣ ವೃತ್ತ- ದಾಸಪ್ಪ ವೃತ್ತ- ಬಲ ತಿರುವು- ಕೆ.ಆರ್.ಎಸ್ ರಸ್ತೆ- ವಿ.ವಿ.ಪುರಂ ವೃತ್ತ- ರಾಯಲ್‌ಇನ್‌ಜಂಕ್ಷನ್- ಎಡತಿರುವು- ರಿಂಗ್‌ರಸ್ತೆ- ಹಿನಕಲ್ ಫ್ಲೈಓವರ್ ಜಂಕ್ಷನ್- ಬಲ ತಿರುವು ಪಡೆದು ಹುಣಸೂರು ರಸ್ತೆಯಲ್ಲಿ ಮುಂದುವರಿಯುವುದು.
3. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರು ರಸ್ತೆಗೆ ಮಾರ್ಗ:-
ಕೆಎಸ್‌ಆರ್‌ಟಿಸಿ ಬಸ್ಸುಗಳು ಬಸ್ ನಿಲ್ದಾಣದ ಬಳಿ ಎಡತಿರುವು- ಫೈವ್ ಲೈಟ್ ವೃತ್ತ- ಡಾ.ರಾಜಕುಮಾರ್ ವೃತ್ತ- ಟಿಪ್ಪು ವೃತ್ತ- ಬಲ ತಿರುವು- ದಂಡಿನ ಮಾರಮ್ಮ ದೇವಸ್ಥಾನ ಜಂಕ್ಷನ್- ಕೆಂಪೇಗೌಡ ಜಂಕ್ಷನ್ ಮೂಲಕ ಮುಂದುವರಿಯುವುದು.
4. ನಂಜನಗೂಡುರಸ್ತೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಂಚರಿಸುವ ಮಾರ್ಗ:-
ನಂಜನಗೂಡು ರಿಂಗ್‌ರಸ್ತೆ ಜಂಕ್ಷನ್- ಬಲತಿರುವು- ರಿಂಗ್‌ರಸ್ತೆ- ಸಾವಿತ್ರಿ ಬಾಯಿಪುಲೆ ವೃತ್ತ- ಟಿ.ಎನ್ ಪುರರಸ್ತೆಟಿ-ಜಂಕ್ಷನ್- ಲಲಿತ ಮಹಲ್‌ರಸ್ತೆ- ಸಂಗೊಳ್ಳಿ ರಾಯಣ್ಣ ವೃತ್ತ- ಬುಲೆವಾರ್ಡ್ ವೃತ್ತ- ಟ್ಯಾಂಕ್ ಬಂಡ್‌ರಸ್ತೆ- ಲೋಕರಂಜನ್‌ರಸ್ತೆ- ಹಾರ್ಡಿಂಜ್ ವೃತ್ತ- ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪುವುದು.
ಎಲ್ಲೆಲ್ಲಿ ವಾಹನ ಸಂಚಾರ ನಿರ್ಬಂಧ? (ಮಧ್ಯಾಹ್ನ 1 ರಿಂದ ರಾತ್ರಿ 7 ಗಂಟೆ ವರೆಗೆ)
1. ಡಿ.ಸಿ ಕಚೇರಿ ಆರ್ಚ್ ಜಂಕ್ಷನ್‌ನಿಂದ ಕೋರ್ಟ್ ಜಂಕ್ಷನ್‌ವರೆಗಿನ ಕೆ.ಆರ್.ಬಿ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧ.
2. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆ ನಿರ್ಬಂಧ.
3. ನಗರಕ್ಕೆ ಆಗಮಿಸುವ ವಾಹನಗಳು ಪಡುವಾರಹಳ್ಳಿ ವೃತ್ತದ ಬಳಿ ಬಲ ತಿರುವು ಪಡೆದು ಬಯಲುರಂಗ ಮಂದಿರ ರಸ್ತೆಯಲ್ಲಿ ಸಂಚರಿಸುವುದು.
4. ಮೆಟ್ರೋಪೋಲ್ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗಿನ ಜೆ.ಎಲ್.ಬಿ ರಸ್ತೆ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧ.
5. ಸಾರ್ವಜನಿಕ ವಾಹನಗಳು ಸಂಚರಿಸುವ ಬದಲಿ ಮಾರ್ಗಗಳು: ನಗರಕ್ಕೆ ಆಗಮಿಸುವ ವಾಹನಗಳು ಮೆಟ್ರೋಪೋಲ್ ವೃತ್ತದಿಂದ ವಿನೋಬ ರಸ್ತೆ- ಚಿಕ್ಕಗಡಿಯಾರ ವೃತ್ತ- ಕೆ.ಆರ್ ವೃತ್ತದ ಮೂಲಕ ಸಂಚರಿಸುವುದು.
* ನಗರಕ್ಕೆ ಆಗಮಿಸುವ ವಾಹನಗಳು ಮೆಟ್ರೋಪೋಲ್ ವೃತ್ತ- ದಾಸಪ್ಪ ವೃತ್ತ- ಜೆ.ಕೆ.ಗ್ರೌಂಡ್ ಜಂಕ್ಷನ್- ಆಯುರ್ವೇದಿಕ್ ವೃತ್ತದ ಮೂಲಕ ಸಂಚರಿಸುವುದು.
* ಹುಣಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ದಾಸಪ್ಪ ವೃತ್ತ- ಕೆ.ಆರ್.ಎಸ್‌ರಸ್ತೆ- ವಿ.ವಿ.ಪುರಂ ವೃತ್ತದ ಮೂಲಕ ಮುಂದೆ ಸಾಗುವುದು.
ಸೆಂಟ್ ಜೋಸೆಫ್ ಜಂಕ್ಷನ್ ನಿಂದ ಮೆಟ್ರೋಪೋಲ್ ವೃತ್ತದವರೆಗಿನ ಹುಣಸೂರು ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧ.
ಸಾರ್ವಜನಿಕ ವಾಹನಗಳು ಸಂಚರಿಸುವ ಬದಲಿ ಮಾರ್ಗಗಳು:
* ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಸೆಂಟ್ ಜೋಸೆಫ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಟೆಂಪಲ್‌ರಸ್ತೆ- ಬಿ.ಸಿ ಲಿಂಗಯ್ಯ ವೃತ್ತ- ಕೆ.ಆರ್.ಎಸ್‌ರಸ್ತೆ ಮೂಲಕ ಮುಂದೆ ಸಾಗುವುದು.
* ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಚದುರಂಗ ವೃತ್ತದ ಬಳಿ ಬಲ ತಿರುವು ಪಡೆದು ಚದರಂಗ ರಸ್ತೆ ಮೂಲಕ ಮುಂದೆ ಸಾಗುವುದು.
* ನಗರಕ್ಕೆ ಆಗಮಿಸುವ ವಾಹನಗಳು ವಾಲ್ಮೀಕಿ ರಸ್ತೆಯಲ್ಲಿ ಎಡತಿರುವು ಪಡೆದು ಆಕಾಶವಾಣಿ ವೃತ್ತದ ಮೂಲಕ ಸಂಚರಿಸುವುದು.
* ನಗರದಿಂದ ಹುಣಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ದಾಸಪ್ಪ ವೃತ್ತ- ಕೆ.ಆರ್.ಎಸ್‌ರಸ್ತೆ- ವಿ.ವಿ.ಪುರಂ ವೃತ್ತದ ಮೂಲಕ ಮುಂದೆ ಸಾಗುವುದು.
* ಮೂಡಾ ಜಂಕ್ಷನ್ ನಿಂದ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಪ್ರತಿಮೆ ಜಂಕ್ಷನ್‌ವರೆಗೆ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. ಬೋಗಾದಿ ರಸ್ತೆಕಡೆಗೆ ಸಂಚರಿಸುವ ವಾಹನಗಳು ಆರ್‌ಟಿಒ ವೃತ್ತ- ಬಲ್ಲಾಳ್ ವೃತ್ತ- ಕೆ.ಜಿ.ಕೊಪ್ಪಲು ರಸ್ತೆ- ವಿಜಯ ಬ್ಯಾಂಕ್‌ರಸ್ತೆ ಮೂಲಕ ಸಂಚರಿಸುವುದು.
* ಹುಣಸೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ತಿಪ್ಪೇಸ್ವಾಮಿ ವೃತ್ತ- ಬಯಲು ರಂಗಮಂದಿರ ರಸ್ತೆ- ಪಡುವಾರಹಳ್ಳಿ ಜಂಕ್ಷನ್- ಹುಣಸೂರು ರಸ್ತೆ ಮೂಲಕ ಸಂಚರಿಸುವುದು.
* ಬೋಗಾದಿ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ವಿ.ಎಂ.ಡಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಮುಂದೆ ಸಾಗುವುದು.