ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಯಾತ್ರಾ ಸ್ಥಳ ಧರ್ಮಸ್ಥಳಕ್ಕೆ ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಅಭೂತಪೂರ್ವ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಎಲ್ಲೆಲ್ಲೂ ಪೊಲಿಸ್ ಸರ್ಪಗಾವಲಿದೆ. ಎನ್‍ಎಸ್‍ಜಿ, ಎಸ್‍ಪಿಜಿ.. ಹೀಗೆ ಸ್ಪೆಷಲ್ ಕಮಾಂಡೋಗಳ ಭರಾಟೆ ಇದೆ. ಜೊತೆಗೆ ನಕ್ಸಲ್ ನಿಗ್ರಹ ದಳವೂ ಬೀಡುಬಿಟ್ಟಿದೆ. ಇನ್ನು ಇಂದು ಮಧ್ಯಾಹ್ನ 2 ಗಂಟೆವರೆಗೆ ಸಾಮಾನ್ಯ ಭಕ್ತರಿಗೆ ಮಂಜುನಾಥನ ದರ್ಶನ ಭಾಗ್ಯ ನಿರ್ಬಂಧಿಸಲಾಗಿದೆ.
ಬೆಳಗ್ಗೆ 9ರಿಂದ ಧರ್ಮಸ್ಥಳ-ಉಜಿರೆ-ಕೊಕ್ಕಡ ನಡುವೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಆದ್ರೆ ಚಾರ್ಮಾಡಿ, ಮಂಗಳೂರು ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಇನ್ನು ಉಜಿರೆಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಬೆಳಗ್ಗೆ 9.30ರೊಳಗೆ ಆಗಮಿಸುವಂತೆ ಸಾರ್ವಜನಿಕರಿಗೆ ದೇವಳದ ಆಡಳಿತ ಮಂಡಳಿ ತಿಳಿಸಿದೆ.
ಶನಿವಾರ ಎಸ್‍ಪಿಜಿ ಕಮ್ಯಾಂಡೋಗಳು ಕಾನ್‍ವೇ ಪರಿಶೀಲಿಸಿದರು. ಹೆಲಿಪ್ಯಾಡ್‍ನಿಂದ ದೇವಳದವರೆಗೆ ರಿಹಾರ್ಸಲ್ ನಡೆಸಿದರು. ಮೋದಿ ಬಳಸಲಿರುವ ಲ್ಯಾಂಡ್ ಕ್ರ್ಯೂಸರ್, ಪೈಲಟ್ ಜೀಪ್ ಸೇರಿದಂತೆ 16 ವಾಹನಗಳಲ್ಲಿ ರಿಹರ್ಸಲ್ ನಡೀತು. ಬಳಿಕ ಧಮಸ್ಥಳ- ಉಜಿರೆ ಹಾದಿಯಲ್ಲೂ ಎಸ್‍ಪಿಜಿ ಪರಿಶೀಲನೆ ನಡೀತು. ಪ್ರಧಾನಿಯ ವಾಹನ ಧರ್ಮಸ್ಥಳದಿಂದ ತೆರಳಿ ಅರ್ಧ ಗಂಟೆಯ ನಂತರ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಪೆÇಲೀಸರು ಅವಕಾಶ ಮಾಡಿಕೊಡಲಿದ್ದಾರೆ.
ಹಾಗಿದ್ರೆ ಮೋದಿಯವರ ಇಂದಿನ ದಿನಚರಿ ಧರ್ಮಸ್ಥಳದಲ್ಲಿ ಹೇಗಿರುತ್ತೆ ಅಂತ ನೋಡೋದಾದ್ರೆ..
* ಬೆಳಗ್ಗೆ 10.45 ಗಂಟೆಗೆ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ
* ಬೆಳಗ್ಗೆ 11.00 ಗಂಟೆಗೆ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ
* ಮಂಜುನಾಥನ ಸನ್ನಿಧಿಯಲ್ಲಿ ಮೋದಿ ಪೂಜೆ
* ಸುಮಾರು 10 ನಿಮಿಷ ಮೋದಿ ಧ್ಯಾನ ಸಾಧ್ಯತೆ
* ಅಣ್ಣಪ್ಪ ಸ್ವಾಮಿ ದರ್ಶನ, ಅನ್ನಪೂರ್ಣ ಹಾಲ್‍ಗೆ ಭೇಟಿ ನೀಡಲಿರುವ ಮೋದಿ
* 12.15ಕ್ಕೆ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮೋದಿ ಭಾಷಣ
https://www.youtube.com/watch?v=F-C0cUhjm6c