ನವದೆಹಲಿ: ಎಪ್ರಿಲ್ 30ವರೆಗೂ ಲಾಕ್‍ಡೌನ್ ವಿಸ್ತರಣೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಪ್ರಧಾನಿ ಜೊತೆಗಿನ ಸಭೆ ಬಳಿಕ ಹಲವು ರಾಜ್ಯಗಳು ಲಾಕ್ ಡೌನ್ ವಿಸ್ತರಿಸಿದರೂ ಕೇಂದ್ರ ಸರ್ಕಾರ ಮಾತ್ರ ಅಧಿಕೃತವಾಗಿ ಇನ್ನು ಘೋಷಣೆ ಮಾಡಿಲ್ಲ. ಹಾಗಿದ್ರೆ ಲಾಕ್ ಡೌನ್ ವಿಸ್ತರಣೆ ಘೋಷಣೆ ಯಾವಾಗ? ವಿಸ್ತರಣೆಗೂ ಮುನ್ನ ಪ್ರಧಾನಿ ಮೋದಿ ಮಾಡಿಕೊಳ್ಳುತ್ತಿರುವ ತಯಾರಿ ಏನು ಎಂಬುದರ ಮಾಹಿತಿ ಇಲ್ಲಿದೆ.
Advertisement
ನಿನ್ನೆ ಎಲ್ಲ ರಾಜ್ಯದ ಸಿಎಂಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸುಧೀರ್ಘ ಸಭೆ ನಡೆಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡುವ ಒಮ್ಮತದ ನಿರ್ಧಾರಕ್ಕೆ ಬರಲಾಗಿತ್ತು. ಸಭೆ ಮುಗಿಯುತ್ತಿದ್ದಂತೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಕರ್ನಾಟಕದಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡಲಾಯಿತು.
Advertisement
Advertisement
ರಾಜ್ಯಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಿದರೂ ಈವರೆಗೂ ಕೇಂದ್ರ ಸರ್ಕಾರ ಮಾತ್ರ ಅಧಿಕೃತವಾಗಿ ಲಾಕ್‍ಡೌನ್ ವಿಸ್ತರಿಸಿ ಆದೇಶ ಹೊರಡಿಸಿಲ್ಲ. ಲಾಕ್‍ಡೌನ್ ಆದೇಶ ವಿಸ್ತರಣೆ ಆದೇಶ ಹೊರಡಿಸುವ ಮುನ್ನ ಕೇಂದ್ರ ಸರ್ಕಾರ ಕೆಲ ತಯಾರಿ ಮಾಡಿಕೊಳ್ಳುತ್ತಿದೆ. ಸಿಎಂಗಳ ಸಭೆಯಲ್ಲಿ ಕೆಲವು ರಾಜ್ಯಗಳು ಎರಡನೇ ಹಂತದಲ್ಲಿ ಲಾಕ್‍ಡೌನ್ ನಲ್ಲಿ ಕೃಷಿ, ಕೈಗಾರಿಕೆ, ವಾಣಿಜ್ಯ ಸೇರಿ ಹಲವು ವಲಯಗಳಲ್ಲಿ ಕೆಲವು ವಿನಾಯಿತಿ ನೀಡುವಂತೆ ಮನವಿ ಮಾಡಿಕೊಂಡಿದೆ. ಈ ಹಿನ್ನೆಲೆ ಇದಕ್ಕೆ ಒಪ್ಪಿಕೊಂಡಿರುವ ಪ್ರಧಾನಿ ಮೋದಿ ಕೆಲವು ವಲಯಗಳಿಗೆ ವಿನಾಯಿತಿ ನೀಡುವ ಭರವಸೆ ನೀಡಿದ್ದಾರೆ.
Advertisement
ರಾಜ್ಯಗಳ ಮನವಿ ಹಿನ್ನೆಲೆ ಯಾವ ಕ್ಷೇತ್ರಗಳಿಗೆ ವಿನಾಯಿತಿ ನೀಡಬಹುದು ಎಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳ ಜೊತೆಗೆ ಇಂದು ಸಭೆ ನಡೆಯಲಿದೆ. ಇದಲ್ಲದೆ ವಿವಿಧ ವಲಯಗಳಲ್ಲಿ ಕೇಂದ್ರ ಸರ್ಕಾರ ರಚಿಸಿರುವ 11 ತಂಡಗಳ ಜೊತೆ ಚರ್ಚೆ ನಡೆಯಲಿದೆ. ಮಾಹಿತಿ ಪ್ರಕಾರ ಈ ಕ್ಷೇತ್ರಗಳಿಗೆ ವಿನಾಯತಿ ಸಿಗಬಹುದು ಎನ್ನಲಾಗುತ್ತಿದೆ.
* ಈ ಹಿಂದೆ ಚಿಂತಿಸಲಾಗಿರುವಂತೆ ರೆಡ್, ಯಲ್ಲೋ ಹಾಗೂ ಗ್ರೀನ್ ಝೋನ್ ಗಳನ್ನು ಗುರುತಿಸುವುದು.
* ರೆಡ್ ಝೋನ್ ಗಳಲ್ಲಿ ಲಾಕ್‍ಡೌನ್ ಮುಂದುವರಿಯಲಿದ್ದು, ಯಾವುದೇ ನಿಯಮಗಳ ಬದಲಾವಣೆ ಇಲ್ಲ. ಸೀಲ್‍ಡೌನ್ ನಂತಹ ಮತ್ತಷ್ಟು ಕಠಿಣ ನಿಯಮಗಳನ್ನು ಕೇಂದ್ರ ಘೋಷಣೆ ಮಾಡಬಹುದು.
* ಗ್ರೀನ್ ಝೋನ್ ನಲ್ಲಿ ಕೃಷಿ, ಮೀನುಗಾರಿಕೆ ವಲಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬಹುದು.
* ಕೃಷಿ ಉತ್ಪನ್ನಗಳು ಹಾಗೂ ಮೀನುಗಾರಿಕೆ ಸಾಗಾಟಕ್ಕೆ ಅನುವು ಮಾಡಿಕೊಡುವುದು.
* ಈ ವಲಯಗಳಿಗೆ ಕಾರ್ಮಿಕರನ್ನು ಕರೆ ತರಲು ಸಣ್ಣ ಪ್ರಮಾಣದಲ್ಲಿ ಸಾರಿಗೆ ಆರಂಭಿಸಲು ಅನುವು ಮಾಡಬಹುದು.
* ಮನರೇಗಾ ಯೋಜನೆಯಡಿ ಕೆಲಸಗಳನ್ನು ಆರಂಭಿಸಬಹುದು.
* ಮಹಿಳಾ ಸ್ವ ಸಹಾಯ ಗುಂಪುಗಳ ಕಾರ್ಯಗಳನ್ನು ಪುನಾರಂಭ ಮಾಡಲು ಅವಕಾಶ ನೀಡಬಹುದು.
* ಕೊರೊನಾ ಸೋಂಕು ಕಾಣದ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸೆಲ್ಪ ರಿಸ್ಕ್ ಮೇಲೆ ಕೈಗಾರಿಕೆ, ಕಾರ್ಖಾನೆ ಆರಂಭಿಸಲು ಅವಕಾಶ.
* ಲಘು ವಾಣಿಜ್ಯ ವ್ಯಾಪರಕ್ಕೂ ಅವಕಾಶ ನೀಡಬಹುದು.
* ಆದರೆ ಮೇಲಿನ ಎಲ್ಲ ಅಂಶಗಳಲ್ಲಿ ಸಾಮಾಜಿಕ ಅಂತರದಂತಹ ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸುವುದು ಕಡ್ಡಾಯ ಎಂದು ಷರತ್ತು ವಿಧಿಸಬಹುದು.
* ಯಲ್ಲೋ ಝೋನ್ ನಲ್ಲಿ ಕೊರೊನಾ ಸೋಂಕು ಕಂಡು ಬಂದ ಪ್ರದೇಶ ಹೊರತುಪಡಿಸಿ ಉಳಿದ ಕಡೆ ಲಾಕ್ ಡೌನ್ ಸಡಿಲಿಕೆ ನಿಯಮ ಅನ್ವಯ ಆಗಲಿದೆ ಎಂದು ಸೂಚಿಸಬಹುದು.
* ದೊಡ್ಡ ನಗರ ಪ್ರದೇಶಗಳಲ್ಲಿ ಕೃಷಿ ಕೈಗಾರಿಗಳಿಗೆ ಅನುಮತಿ ಅನುಮಾನ.
* ಎಲ್ಲ ರಾಜ್ಯ ಜಿಲ್ಲಾ ಗಡಿ ಬಂದ್ ಮಾಡಿ ಕೃಷಿ ಕೈಗಾರಿಕೆ ನೆಪದಲ್ಲಿ ಊರು ಖಾಲಿ ಮಾಡದಂತೆ ನೋಡಿಕೊಳ್ಳಲು ಸೂಚನೆ ನೀಡಬಹುದು.
ಪ್ರಧಾನ ಮಂತ್ರಿ ಕಾರ್ಯಲಯ ಹೀಗೆ ಹತ್ತಾರು ಆಯಾಮಗಳಲ್ಲಿ ಯಾವ ಕ್ಷೇತ್ರಕ್ಕೆ ವಿನಾಯತಿ ನೀಡಬಹುದು ಎಂದು ಚಿಂತನೆ ನಡೆಸಿದ್ದು, ಈ ನಿಯಮಗಳು ಅಂತಿಮವಾದ ಬಳಿಕ ಪ್ರಧಾನಿ ಮೋದಿ ದೇಶದ ಜನರ ಉದ್ದೇಶಿಸಿ ಮಾತನಾಡಬಹುದು. ಲಾಕ್‍ಡೌನ್ ಜೊತೆಗೆ ದೇಶ ಜನರ ಹಿತ ದೃಷ್ಟಿಯಿಂದ ತೆಗೆದುಕೊಳ್ಳಲಿರುವ ಕ್ರಮಗಳೇನು ಎನ್ನುವುದು ವಿವರಿಸಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಸಂಜೆ ಅಷ್ಟೊತ್ತಿಗೆ ನಿಯಮಗಳ ಪಟ್ಟಿ ಅಂತಿಮ ಆದ್ರೆ ಇಂದು ರಾತ್ರಿ ಎಂಟು ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.