– ಇಂದೇ ಹೋಳಿಯಲ್ಲಿ ಮುಳುಗೆದ್ದ ಕೇಸರಿ ಕಾರ್ಯಕರ್ತರು
– ಅಮೇಥಿ, ರಾಯಬರೇಲಿಯಲ್ಲಿ ಕಾಂಗ್ರೆಸ್ ಅಲ್ಲೋಲ ಕಲ್ಲೋಲ
– ಪ್ರಾದೇಶಿಕ ಪಕ್ಷಗಳಿಗೆ ಎದುರಾಯ್ತು ಕಷ್ಟಕಾಲ
– ಮಣಿಪುರ, ಗೋವಾ ಅಸೆಂಬ್ಲಿ ಅತಂತ್ರ
ನವದೆಹಲಿ: ದೇಶದ ರಾಜಕೀಯ ದಿಕ್ಸೂಚಿ ಅಂತ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಫಲಿತಾಂಶ ಪ್ರಕಟವಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡ್‍ನಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಉತ್ತರ ಪ್ರದೇಶದಲ್ಲಿ ಮೋದಿ ಸುನಾಮಿಗೆ ಪ್ರತಿಪಕ್ಷಗಳು ತರಗೆಲೆಗಳಂತೆ ತೂರಿ ಹೋಗಿವೆ.
Advertisement
403 ಕ್ಷೇತ್ರಗಳಲ್ಲಿ 300ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಕಮಲ ಅರಳಿದೆ. ಉತ್ತರ ಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಯಲ್ಲಿ ಸಂಪೂರ್ಣ ಕೇಸರೀಮಯವಾಗಿದ್ದು ಒಂದು ರೀತಿ `ಕಮಲೇ ಕಮಲೋತ್ಪತ್ತಿಃ’ ಎನ್ನುವಂತಾಗಿದೆ. ಅಲ್ಲದೆ, ಕಾಂಗ್ರೆಸ್‍ಗೆ ಅಕ್ಷರಶಃ ಭೂಕಂಪನದ ಅನುಭವವಾದ್ರೆ, ಪ್ರಾದೇಶಿಕ ಪಕ್ಷಗಳಾದ ಎಸ್‍ಪಿ, ಬಿಎಸ್‍ಪಿಗಳ ಭವಿಷ್ಯಕ್ಕೆ ಮಂಕುಬಡಿದಂತಾಗಿದೆ.
Advertisement
ಪಂಜಾಬ್‍ನಲ್ಲಿ ಕಾಂಗ್ರೆಸ್‍ನ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಮಾಲ್ ಮಾಡಿದ್ದಾರೆ. ಬಾದಲ್ ಕುಟುಂಬ ರಾಜಕಾರಣ ಹೀನಾಯ ಸೋಲು ಕಂಡಿದೆ. ಇದ್ರಿಂದ ಮೈತ್ರಿ ಬೆಳೆಸಿಕೊಂಡಿದ್ದ ಬಿಜೆಪಿಗೂ ಮುಖಭಂಗವಾಗಿದೆ. ಇದರ ಮಧ್ಯೆ, ಮಣಿಪುರ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೆಕ್ ಟು ನೆಕ್ ಫೈಟ್ ನಡೀತು.
Advertisement
ಪಕ್ಷದ ವಿಜಯಯಾತ್ರೆ ಬಿಜೆಪಿ ನಾಯಕರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ್ರೆ, ಕಾರ್ಯಕರ್ತರು ನಾಳಿನ ಹೋಳಿಯನ್ನ ಇಂದೇ ಆಚರಿಸುವ ಮೂಲಕ ಸಂಭ್ರಮವನ್ನ ಇಮ್ಮಡಿಗೊಳಿಸಿಕೊಂಡ್ರು. ಈ ಮಧ್ಯೆ, ಜನಾದೇಶವನ್ನ ಎಸ್‍ಪಿ, ಕಾಂಗ್ರೆಸ್, ಆಪ್ ಸ್ವಾಗತಿಸಿದ್ರೆ ಬಿಎಸ್‍ಪಿ ಮಾತ್ರ ಮತಯಂತ್ರದಲ್ಲಿ ಏನೋ ಮಸಲತ್ತು ನಡೆದಿದೆ ಗುಮಾನಿ ವ್ಯಕ್ತಪಡಿಸಿದೆ. ಆದ್ರೆ, ಆರೋಪದಲ್ಲಿ ಹುರುಳಿಲ್ಲ ಅಂತ ಚುನಾವಣಾ ಆಯೋಗ ಹೇಳಿದೆ.
Advertisement
ಚುನಾವಣೆಯಲ್ಲಿದ್ದ ಪ್ರಮುಖ ನಾಯಕರ ಭವಿಷ್ಯ ಏನಾಯ್ತು..?
1. ಪಂಕಜ್ ಸಿಂಗ್ – ಬಿಜೆಪಿ – ನೋಯ್ಡಾ – ಗೆಲುವು
2. ರೀಟಾ ಬಹುಗುಣ ಜೋಶಿ – ಬಿಜೆಪಿ – ಲಖನೌ ಕಂಟೋನ್ಮೆಂಟ್ – ಗೆಲುವು
3. ಗರೀಮಾ ಸಿಂಗ್ – ಬಿಜೆಪಿ – ಅಮೇಥಿ – ಗೆಲುವು
4. ಸಿದ್ಧಾರ್ಥ್ ನಾಥ್ ಸಿಂಗ್ – ಬಿಜೆಪಿ – ಅಲಹಾಬಾದ್ ಪಶ್ಚಿಮ – ಗೆಲುವು (ಲಾಲ್‍ಬಹದ್ದೂರ್‍ಶಾಸ್ತ್ರಿ ಮೊಮ್ಮಗ )
5. ಅಪರ್ಣಾ ಯಾದವ್ – ಎಸ್‍ಪಿ – ಲಖನೌ ಕಂಟೋನ್ಮೆಂಟ್ – ಸೋಲು
6. ಶಿವಪಾಲ್ ಸಿಂಗ್ – ಎಸ್‍ಪಿ – ಜಸ್ವಂತ್‍ನಗರ್ – ಗೆಲುವು
7. ಅಜಂ ಖಾನ್ – ಎಸ್‍ಪಿ – ರಾಮ್‍ಪುರ್ – ಗೆಲುವು
8. ಅಂಬಿಕಾ ಚೌಧರಿ – ಬಿಎಸ್‍ಪಿ – ಫೆಫಾನ – ಸೋಲು
9. ಜಿತಿನ್ ಪ್ರಸಾದ್ – ಕಾಂಗ್ರೆಸ್- ತಿಹಾರ್ – ಸೋಲು
ಮುಖ್ಯಮಂತ್ರಿ ಯಾರು ಅನ್ನೋದನ್ನು ಘೊಷಿಸದೇ ಕಣಕ್ಕಿಳಿಯೋದು ಬಿಜೆಪಿ ಜಾಯಮಾನ.. ಅದೇ ರೀತಿ ಉತ್ತರ ಪ್ರದೇಶದಲ್ಲಿ ಕಣಕ್ಕಿಳಿದ ಬಿಜೆಪಿ, ಮೋದಿ ಅಲೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದು ಪ್ರಶ್ನೆ. ರೇಸ್‍ನಲ್ಲಿ ಯಾರ್ಯಾರಿದ್ದಾರೆ..? ಅವರ ಹಿನ್ನೆಲೆ ಏನು ಅನ್ನೋದನ್ನ ನೋಡೋದಾದ್ರೆ..
ಯಾರಾಗ್ತಾರೆ ಮುಖ್ಯಮಂತ್ರಿ..?
1. ರಾಜನಾಥ್ ಸಿಂಗ್
* ಸಿಎಂ ರೇಸ್‍ನಲ್ಲಿ ಕೇಳಿಬರುವ ಮೊದಲ ಹೆಸರು
* ಕೇಂದ್ರ ಗೃಹ ಸಚಿವ. ಆದ್ರೆ, ಮೋದಿ ತಮ್ಮ ಕ್ಯಾಬಿನೆಟ್‍ನಿಂದ ಬಿಡುವ ಬಗ್ಗೆ ಸ್ಪಷ್ಟತೆ ಇಲ್ಲ
2. ಕೇಶವ್ ಪ್ರಸಾದ್ ಮೌರ್ಯ
* ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ
* ಓಬಿಸಿಯ ಎಂಬಿಸಿ ಮುಖಂಡ, ವಿಹೆಚ್‍ಪಿ, ಆರ್‍ಎಸ್‍ಎಸ್ ನಾಯಕ
* ಪೂರ್ವಾಂಚಲದಿಂದ ಸಿಎಂ ಆದ ಮೊದಲಿಗರು ಎಂಬ ಹೆಗ್ಗಳಿಕೆ
3. ಸಂತೋಷ್ ಗಂಗ್ವಾರ್
* ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ
* 1989ರಿಂದಲೂ ಕಮಲದ ಕಟ್ಟಾಳು
* ಕುರ್ಮಿ ಸಮುದಾಯದ ಪ್ರಭಾವಿ, ಮೃದು ಸ್ವಭಾವ
* ರೋಹಿಲ್‍ಖಂಡ್ ಪ್ರಾಂತ್ಯದಲ್ಲಿ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣ
4. ಮಹೇಶ್ ಶರ್ಮಾ
* ಕೇಂದ್ರ ಸಾಂಸ್ಕೃತಿಕ ಖಾತೆ ಸಚಿವ
* ಸಂಘ ಪರಿವಾರದ ಜೊತೆ ಉತ್ತಮ ಸಂಬಂಧ
* ಆದರೆ, ಹಲವು ಆರೋಪಗಳಿವೆ
5. ಮನೋಜ್ ಸಿನ್ಹಾ
* ಕೇಂದ್ರ ಟೆಲಿಕಾಂ ಸಚಿವ
* ಭೂಮಿಹಾರ್ ಸಮುದಾಯದ ನಾಯಕ
* ಬನಾರಸ್ ಹಿಂದೂ ವಿವಿಯ ಪದವೀಧರ
ಇವರ ಜೊತೆ ಯೋಗಿ ಆದಿತ್ಯನಾಥ್, ಉಮಾಭಾರತಿ, ಕಲ್‍ರಾಜ್ ಮಿಶ್ರಾ ಹೆಸರು ಕೂಡ ಕೇಳಿಬರುತ್ತಿದೆ.
============
ಉತ್ತರ ಪ್ರದೇಶದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೆಲ್ಲೋದಿಕ್ಕೆ ಕಾರಣಗಳೇನು..?
* ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ
* ನೋಟ್ ಬ್ಯಾನ್ ಮೂಲಕ ತಾವು ಬಡವರ ಪರ ಎಂದು ನಿರೂಪಿಸಿಕೊಂಡಿದ್ದು
* ಬಿಜೆಪಿಗೆ ವರವಾದ ಎಸ್‍ಪಿ, ಬಿಎಸ್‍ಪಿಯ ತಪ್ಪು ಲೆಕ್ಕಾಚಾರಗಳು
* ಮುಸ್ಲಿಂ, ದಲಿತ, ಜಾಟ್ ಮತಗಳ ಮತಗಳ ವಿಭಜನೆ
(ಎಂಐಎಂ ಸ್ಪರ್ಧೆ, ವರ್ಕ್ ಆಗದ ಮಾಯಾವತಿ ದಲಿತ್ ಕಾರ್ಡ್, ಫಲಿಸದ ಎನ್‍ಆರ್‍ಎಲ್‍ಡಿಯ ಅಜಿತ್ ಸಿಂಗ್ ಲೆಕ್ಕ)
* ಯಾದವೇತರ ಓಬಿಸಿ, ಜಾಟ್‍ವೇತರ ದಲಿತ ವರ್ಗ, ಮೇಲ್ವರ್ಗದ ಸಮುದಾಯಗಳ ಮೇಲೆ ಕಣ್ಣು
(ಈ ಸಮುದಾಯಗಳ ಒಟ್ಟು ಮತ ಪ್ರಮಾಣ ಶೇ. 55-60)
* ಒಬ್ಬ ಮುಸ್ಲಿಂರಿಗೂ ಟಿಕೆಟ್ ಕೊಡದೇ ಬಿಜೆಪಿ `ಧರ್ಮ ರಾಜಕೀಯ’
(ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ದುರ್ಬಲ ಅಭ್ಯರ್ಥಿ ಹಾಕಿ ಬಿಎಸ್‍ಪಿ ಗೆಲ್ಲುವಂತೆ ಮಾಡಿದ್ದು)
* ತಲಾಕ್ ವಿಚಾರದಲ್ಲಿ ಮುಸ್ಲಿಮ್ ಮಹಿಳೆಯರಿಂದ ಬಿಜೆಪಿಗೆ ಮತ
* ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷ ಸಂಘಟನೆ
* ಗೆಲ್ಲುವ ಕುದುರೆಗಳಿಗೆ ಮಾತ್ರ ಟಿಕೆಟ್
* ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಚುನಾವಣಾ ಚಾಣಾಕ್ಯ ಸುನಿಲ್ ಬನ್ಸಾಲ್ ತಂತ್ರ ವರ್ಕೌಟ್
* ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ
============
ಯಾವ ರಾಜ್ಯದಲ್ಲಿ ಈಗ ಯಾರ ಆಳ್ವಿಕೆ?
ಬಿಜೆಪಿ: ಉತ್ತರ ಪ್ರದೇಶ, ಮಧ್ಯ ಪ್ರದೇಶ, ಅರುಣಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಅಸ್ಸಾಂ, ಛತ್ತೀಸ್‍ಘಡ, ಹರಿಯಾಣ, ಜಾರ್ಖಂಡ್, ಉತ್ತರಾಖಂಡ್
ಬಿಜೆಪಿ ಮೈತ್ರಿ : ಜಮ್ಮು ಕಾಶ್ಮೀರ, ಆಂಧ್ರಪ್ರದೇಶ
ಕಾಂಗ್ರೆಸ್: ಪಂಜಾಬ್, ಕರ್ನಾಟಕ, ಹಿಮಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಾಂಡಿಚೆರಿ,
ಇತರೆ: ದೆಹಲಿ, ಬಿಹಾರ್, ಒಡಿಶಾ, ಸಿಕ್ಕಿಂ, ತ್ರಿಪುರಾ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಕೇರಳ, ತೆಲಂಗಾಣ.
ಅತಂತ್ರ – ಮಣಿಪುರ, ಗೋವಾ
============
ಕರ್ನಾಟಕದ ಮೇಲೆ ಏನ್ ಪರಿಣಾಮ ಬೀರುತ್ತೆ?
* ರಾಜ್ಯ ಬಿಜೆಪಿಗೆ ಚೈತನ್ಯ ತಂದಿರುವ ಗೆಲುವು
* ಮೋದಿ, ಅಮಿತ್ ಶಾ ನೆಕ್ಸ್ಟ್ ಟಾರ್ಗೆಟ್ ಕರ್ನಾಟಕ
* ರಾಜ್ಯದಲ್ಲೂ ಚಾಣಕ್ಯರ ತಂತ್ರಗಳ ಶುರುವಾಗಲಿದೆ
* ಮೇನಿಂದ ರಾಜ್ಯದಲ್ಲಿ ಶಾ ಮಾಸ್ಟರ್ ಪ್ಲಾನ್
* ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯ ಮೇಲೂ ಪರಿಣಾಮ
* ಆಡಳಿತರೂಢ ಕಾಂಗ್ರೆಸ್‍ನ ಉತ್ಸಾಹಕ್ಕೆ ಬ್ರೇಕ್
* ರಾಜ್ಯದಲ್ಲಿ ರಾಹುಲ್‍ಗಾಂಧಿ ಸಾಹಸಕ್ಕೆ ಹಿನ್ನಡೆ
* ಚುನಾವಣಾ ಪೂರ್ವದಲ್ಲೇ ಜೆಡಿಎಸ್ ಜತೆ ಮೈತ್ರಿ ಜಪ ಮಾಡಬಹುದು
* ನೋಟ್‍ಬ್ಯಾನ್ ವಿಚಾರವನ್ನೇ ಬಿಜೆಪಿ ಅಸ್ತ್ರವನ್ನಾಗಿ ಬಳಸಬಹುದು
* ಐಟಿದಾಳಿ, ಡೈರಿ ವಿಚಾರಗಳನ್ನೇ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆ
* ಮಹಾದಾಯಿ ವಿವಾದಕ್ಕೆ ಮುಲಾಮು ಹಚ್ಚುವ ಸಾಧ್ಯತೆ
============
ಶಿರೋಮಣಿ ಅಖಾಲಿದಳ, ಬಿಜೆಪಿ ಮೈತ್ರಿಗೆ ಮುಖಭಂಗ:
ಆಡಳಿತರೂಢ ಶಿರೋಮಣಿ ಅಖಾಲಿದಳ ಮತ್ತು ಬಿಜೆಪಿ ಮೈತ್ರಿಗೆ ಭಾರೀ ಮುಖಭಂಗವಾಗಿದೆ. ಬಾದಲ್ ಕುಟುಂಬ ರಾಜಕಾರಣಕ್ಕೆ ರೋಸಿಹೋದ ಜನ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ನಾಯಕತ್ವಕ್ಕೆ ಮಣೆ ಹಾಕಿದೆ. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್-ಆಪ್ ಮಧ್ಯೆ ನೆಕ್ ಟು ನೆಕ್ ಫೈಟ್ ಇರುತ್ತೆ ಅಂತ ಹೇಳಿದ್ವು. ಆದ್ರೆ, ಈಗ ಅದು ಬುಡಮೇಲಾಗಿದೆ. 117 ಕ್ಷೇತ್ರಗಳ ವಿಧಾನಸಭೆಯಲ್ಲಿ ಸರಳ ಬಹುಮತ 59 ಸ್ಥಾನಗಳು ಬೇಕಿದ್ದು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
============
ಪಂಜಾಬ್ ಸಿಎಂ: ಪಂಜಾಬ್‍ನಲ್ಲಿ ಕಾಂಗ್ರೆಸ್ ಗೆದ್ದಿರೋ ಕಾರಣ ಮಾಜಿ ಸಿಎಂ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೇ ಮುಂದಿನ ಸಿಎಂ ಆಗಲಿದ್ದಾರೆ.
1. ಅಮರಿಂದರ್ ಸಿಂಗ್ – ಕಾಂಗ್ರೆಸ್ – ಪಟಿಯಾಲ – ಗೆಲುವು (ಲಂಬಿ -ಸೋಲು)
2. ನವಜೋತ್ ಸಿಂಗ್ ಸಿದು – ಕಾಂಗ್ರೆಸ್ – ಪೂರ್ವ ಅಮೃತಸರ – ಗೆಲುವು
3. ಪ್ರಕಾಶ್ ಸಿಂಗ್ ಬಾದಲ್ – ಎಸ್‍ಎಡಿ – ಲಂಬಿ – ಗೆಲುವು
4. ಸುಖ್‍ಬೀರ್ ಸಿಂಗ್ ಬಾದಲ್ – ಎಸ್‍ಡಿಎ – ಜಲಲಾಬಾದ್ – ಗೆಲುವು
5. ಪರಗತ್ ಸಿಂಗ್ – ಕಾಂಗ್ರೆಸ್ – ಜಲಂಧರ್ – ಗೆಲುವು (ಹಾಕಿ ತಂಡದ ಮಾಜಿ ನಾಯಕ)
6. ಭಗವಂತ್ ಮನ್ – ಎಎಪಿ – ಜಲಲಾಬಾದ್ – ಸೋಲು
============
ಅಮರೀಂದರ್ ಸಿಂಗ್ ಗೆಲುವಿಗೆ ಕಾರಣಗಳು ಏನು?
* ಬಾದಲ್ ಕುಟುಂಬ, ಸ್ವಜನಪಕ್ಷಪಾತ ವಿರೋಧಿ ಅಲೆ
* ಕೃಷಿ ಆಧರಿತ ರೈತರಿಗೆ ನೋಟ್‍ಬ್ಯಾನ್ ನೋವು
* ಕ್ಯಾ.ಅಮರೀಂದರ್ ಸಿಂಗ್ ಸಿಎಂ ಅಭ್ಯರ್ಥಿ ಅಂತ ಘೋಷಣೆ
* ಡ್ರಗ್ಸ್ ಮಾಫಿಯಾ ವಿರೋಧಿ, ರೈತರ ಪರ ಪ್ರಣಾಳಿಕೆ ಹೊರಡಿಸಿದ್ದ ಅಮರೀಂದರ್
* ಬಿಜೆಪಿಯಿಂದ ಕಾಂಗ್ರೆಸ್‍ಗೆ ಜಂಪ್ ಆದ ನವಜೋತ್ ಸಿಂಗ್ ಸಿದು
* ಆಪ್ ಎಂಟ್ರಿಯಿಂದ ಮತಗಳ ವಿಭಜನೆ
============
ಉತ್ತರಾಖಂಡ್‍ನಲ್ಲಿ ಅರಳಿದ ಕಮಲ:
ಉತ್ತರ ಪ್ರದೇಶ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಉತ್ತರಾಖಂಡ್‍ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‍ನ ಹರೀಶ್ ರಾವತ್ ಸರ್ಕಾರ ಬಿದ್ದಿದೆ.
ಉತ್ತರಾಖಂಡ್‍ನಲ್ಲಿ ಮುಂದಿನ ಸಿಎಂ ಯಾರಾಗಬಹುದು?
1. ರಮೇಶ್ ಪೊಖ್ರಿಯಾಲ್, ಮಾಜಿ ಸಿಎಂ
2. ಬಿ.ಸಿ. ಖಂಡೂರಿ, ಮಾಜಿ ಸಿಎಂ
3. ಅಜಯ್ ಭಟ್, ಬಿಜೆಪಿ ರಾಜ್ಯಾಧ್ಯಕ್ಷ
4. ಭಗತ್ ಸಿಂಗ್ ಕೊಸ್ಯಾರಿ, ಪ್ರಮುಖ ನಾಯಕ
5. ವಿಜಯ್ ಬಹುಗುಣ, ಮಾಜಿ ಸಿಎಂ (ಕಾಂಗ್ರೆಸ್‍ನಲ್ಲಿದ್ದಾಗ ಸಿಎಂ ಆಗಿದ್ದರು)
============
ಗೆದ್ದ ಸೋತ ಪ್ರಮುಖ ಅಭ್ಯರ್ಥಿಗಳು
ಹರೀಶ್ ರಾವತ್ – ಕಾಂಗ್ರೆಸ್ – ಹರಿದ್ವಾರ ಗ್ರಾಮೀಣ, ಕಿಚ್ಛ – ಸೋಲು
ಅಜಯ್ ಭಟ್ – ಬಿಜೆಪಿ – ರಾಣಿಕೇಟ್ – ಸೋಲು
ರೀತು ಖಂಡೂರಿ ಭೂಷಣ್ – ಬಿಜೆಪಿ – ಯಮಕೇಶ್ವರ – ಗೆಲುವು
ಸತ್ಪಾಲ್ ಮಹಾರಾಜ್ – ಬಿಜೆಪಿ – ಚೌಬಟ್ಟಖಾಲ್ – ಗೆಲುವು
ಕಿಶೋರ್ ಉಪಾಧ್ಯಾಯ – ಕಾಂಗ್ರೆಸ್ – ಶಹಾಪುರ – ಸೋಲು
============
ಮಣಿಪುರದಲ್ಲಿ ಅತಂತ್ರ ವಿಧಾನಸಭೆ:
ಮಣಿಪುರದಲ್ಲಿ ನೆಕ್ ಟು ನೆಕ್ ಫೈಟ್ ನಡೆದಿದ್ದು, ಕಾಂಗ್ರೆಸ್ ದೊಡ್ಡ ಪಕ್ಷವಾದರೂ ಅತಂತ್ರ ಅಸೆಂಬ್ಲಿ ನಿರ್ಮಾಣವಾಗಿದೆ. ಪಕ್ಷೇತರರು ನಿರ್ಣಾಯಕವಾಗಿದೆ
ಪ್ರಮುಖ ಅಭ್ಯರ್ಥಿಗಳು:
1. ಓಕ್ರಮ್ ಇಬೋಬಿ ಸಿಂಗ್ – ಕಾಂಗ್ರೆಸ್ – ಥೌಬಾಲ್ – ಗೆಲುವು
2. ಇರೋಮ್ ಶರ್ಮಿಳಾ – ಪಿಆರ್‍ಜೆಎ – ಥೌಬಾಲ್ – ಸೋಲು (90 ಮತ ಅಷ್ಟೇ)
3. ಎನ್. ಬಿರೇನ್ – ಬಿಜೆಪಿ – ಹೇನ್‍ಗಂಗ್ – ಗೆಲುವು
ಗೋವಾದಲ್ಲಿ ಅತಂತ್ರ:
ಗೋವಾದಲ್ಲಿ ಜನರು ಯಾರಿಗೂ ಸ್ಪಷ್ಟ ಬಹುಮತ ನೀಡದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಮುಖ ನಾಯಕರ ಭವಿಷ್ಯ ಏನಾಯ್ತು ?
1. ಲಕ್ಷ್ಮಿಕಾಂತ್ ಪರ್ಸೇಕರ್ – ಬಿಜೆಪಿ – ಮಂಡ್ರೇಮ್ – ಸೋಲು
2. ದಿಗಂಬರ್ ಕಾಮತ್ – ಕಾಂಗ್ರೆಸ್ – ಮರ್ಗೋವಾ – ಗೆಲುವು
3. ಎಲ್ವಿಸ್ ಗೋಮ್ಸ್ – ಎಎಪಿ – ಕನ್ಸೊಲಿಮ್ – ಸೋಲು