2ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಶುಕ್ರವಾರ ಪ್ರಮಾಣ ವಚನ

Public TV
1 Min Read
Modi Oath

ನವದೆಹಲಿ: ಮೋದಿ ಎರಡನೇ ಬಾರಿ ಪ್ರಧಾನಿಯಾಗುವ ಕ್ಷಣಕ್ಕೆ ಸಾಕ್ಷಿಯಾಗಲು ರಾಷ್ಟ್ರಪತಿ ಭವನ ಸಜ್ಜಾಗಿದೆ. ರಾಷ್ಟ್ರಪತಿ ಭವನದ ಹೊರಾಂಗಣದಲ್ಲಿ ಮೋದಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ರೀತಿ ಹೊರಾಂಗಣದಲ್ಲಿ ಪ್ರಮಾಣ ಸ್ವೀಕರಿಸುತ್ತಿರುವ ಮೂರನೇ ಪ್ರಧಾನಿ ಎಂಬ ಗರಿಮೆಗೆ ಮೋದಿ ಪಾತ್ರರಾಗುತ್ತಿದ್ದಾರೆ.

ಮೊದಲು ನೆಹರು, ಚಂದ್ರಶೇಖರ್ ರಾಷ್ಟ್ರಪತಿ ಭವನದ ಹೊರಾಂಗಣದಲ್ಲಿ ಪ್ರಮಾಣ ಸ್ವೀಕರಿಸಿದ್ದರು. ಸಾಮಾನ್ಯವಾಗಿ ಪ್ರಧಾನಮಂತ್ರಿಗಳ ಪ್ರಮಾಣ ವಚನ ದರ್ಬಾರ್ ಹಾಲ್‍ನಲ್ಲಿ ನಡೆಯುತ್ತದೆ. ರೈಸಿನಾ ಹಿಲ್‍ನ ಪ್ರಥಮ ಪ್ರಜೆಯ ನಿವಾಸದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ 6 ಸಾವಿರ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.

modi 3

ಬಾಂಗ್ಲಾ ಅಧ್ಯಕ್ಷ ಅಬ್ದುಲ್ ಹಮೀದ್, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಕಿಗಿಸ್ಥಾನದ ಅಧ್ಯಕ್ಷ ಸೂರ್ನ್‍ಬೇ ಜೀನ್ ಬೆಕಾವ್, ಮಯನ್ಮಾರ್ ಅಧ್ಯಕ್ಷ ಯೂ ವಿನ್ ಮಿಂಟ್, ಮಾರಿಷಸ್ ಪ್ರಧಾನಿ ಪರವಿಂದ್ ಕುಮಾರ್ ಜಗನ್ನಾಥ್, ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ, ಭೂತಾನ್ ಪ್ರಧಾನಿ ಲೊಟೇ ತ್ಸೆರಿಂಗ್, ಥೈಲ್ಯಾಂಡ್ ಕೃಷಿ ಸಚಿವ ಬೂನ್‍ರಾಚ್ ಆಗಮಿಸಲಿದ್ದಾರೆ.

ಇವರಲ್ಲದೇ ಹಲವು ದೇಶಗಳ ರಾಜತಾಂತ್ರಿಕರು, ಮಾಜಿ ಪ್ರಧಾನಿಗಳು, ಮುಖ್ಯಮಮಂತ್ರಿಗಳು, ಸಾಹಿತಿಗಳು, ಚಿತ್ರರಂಗ ಮತ್ತು ಕ್ರೀಡಾಲೋಕದ ಗಣ್ಯರು ಮೋದಿ ಪ್ರಮಾಣಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಬಾರಿ ಪಾಕ್ ಪ್ರಧಾನಿಗೆ ಮೋದಿ ಆಹ್ವಾನ ನೀಡಿಲ್ಲ. ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟೀ ಪಾರ್ಟಿ ಆಯೋಜಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *