ಟೆಕ್ಸಾಸ್: ಅಮೆರಿಕದಲ್ಲಿ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ಹೋಸ್ಟನ್‍ನ ಐತಿಹಾಸಿಕ ಎನ್‍ಆರ್‍ಜಿ ಕ್ರೀಡಾಂಗಣದಲ್ಲಿ ಸೆ.22 ರಂದು ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕೆ ‘ಹೌಡಿ ಮೋದಿ’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮವನ್ನು ಅಮೆರಿಕದ ಟೆಕ್ಸಾಸ್ ಇಂಡಿಯಾ ಫೋರಂ ಮತ್ತು ಇಂಡಿಯನ್ ಡೈಸ್ಪೋರಾ ಎಂಬ ಸಂಸ್ಥೆಗಳು ಹೋಸ್ಟ್ ಮಾಡುತ್ತಿವೆ.
Advertisement
Advertisement
ಎನ್‍ಆರ್‍ಜಿ ಕ್ರೀಡಾಂಗಣದಲ್ಲಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲು ಉತ್ಸುಕರಾಗಿದ್ದೇವೆ. ಇದು ಭಾರತ-ಅಮೆರಿಕದ ಅತಿ ದೊಡ್ಡ ಕಾರ್ಯಕ್ರಮವಾಗಿದೆ. ದೇಶದ ಸಂಸ್ಕೃತಿ ಹಾಗೂ ವೈವಿಧ್ಯತೆಯ ಪ್ರಾತಿನಿಧಿಕವಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ‘ಹೌಡಿ ಮೋದಿ’ ಕಾರ್ಯಕ್ರಮ ಆಯೋಜನಾ ಸಮಿತಿಯ ಕನ್ವೀನರ್ ಜುಗಲ್ ಮಲಾನಿ ತಿಳಿಸಿದ್ದಾರೆ.
Advertisement
‘ಶೇರ್ಡ್ ಡ್ರೀಮ್ಸ್, ಬ್ರೈಟ್ ಫ್ಯೂಚರ್’ ಎಂಬ ಅಡಿ ಬರಹದೊಂದಿಗೆ ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಮೆರಿಕ ಮತ್ತು ಭಾರತದ ಬೃಹತ್ ಪ್ರಜಾಪ್ರಭುತ್ವವನ್ನು ಒಗ್ಗೂಡಿಸುವ ಉದ್ದೇಶವನ್ನು ಕಾರ್ಯಕ್ರಮ ಪ್ರತಿಬಿಂಬಿಸಲಿದೆ ಎಂದು ಕಾರ್ಯಕ್ರಮದ ಆಯೋಜಕರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
Advertisement
ದಿ ಟೆಕ್ಸಾಸ್ ಇಂಡಿಯಾ ಫೋರಂ(ಟಿಐಎಫ್) ಲಾಭಕ್ಕಾಗಿ ಇರುವ ಸಂಸ್ಥೆಯಲ್ಲ. ಇದು ಭಾರತಹಾಗೂ ಅಮೆರಿಕದ ಸಹಕಾರವನ್ನು ಪ್ರೋತ್ಸಾಹಿಸುವ ಸಂಸ್ಥೆಯಾಗಿದೆ. ಟಿಐಎಫ್ ಭಾರತ-ಅಮೆರಿಕದ ಸಂಘಟನೆ ಹಾಗೂ ಸಂಸ್ಥೆಗಳ ಜೊತೆಗೆ ಕಾರ್ಯನಿರ್ವಹಿಸಿ ನಮ್ಮ ಪ್ರಾದೇಶಿಕತೆಯನ್ನು ಉತ್ತೇಜಿಸುವುದು ಹಾಗೂ ಅವಕಾಶಗಳನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.