ಬೆಂಗಳೂರು: ಕೊರೊನಾ 4ನೇ ಅಲೆ ನಿಯಂತ್ರಣಕ್ಕೆ ಮತ್ತೆ ಟಿ3 ಸೂತ್ರಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮೊರೆ ಹೋಗಿದ್ದಾರೆ. ಕೊರೊನಾ ನಿಯಂತ್ರಣ ಸಂಬಂಧ ಎಲ್ಲಾ ರಾಜ್ಯಗಳ ಜೊತೆ ನಡೆದ ಸಭೆಯಲ್ಲಿ ಎಲ್ಲಾ ರಾಜ್ಯಗಳು 3ಟಿ ಸೂತ್ರ ಅಳವಡಿಸಿ ಅಂತ ಸಲಹೆ ನೀಡಿದ್ದಾರೆ.
Advertisement
ಕೊರೊನಾ 3ನೇ ಅಲೆಗಳ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ ಮೆಂಟ್ ಸೂತ್ರ ಪ್ರಸ್ತಾಪ ಮಾಡಿ ಯಶಸ್ವಿಯಾಗಿ ಕೊರೊನಾ ನಿಯಂತ್ರಣ ಮಾಡಿದ್ದರು. ಶೀಘ್ರವೇ ಟೆಸ್ಟ್ ಮಾಡುವುದು, ಟೆಸ್ಟ್ ಮಾಡಿದ ಬಳಿಕ ಸೋಂಕಿತರನ್ನು ಟ್ರೇಸ್ ಮಾಡುವುದು ಮತ್ತು ಸೋಂಕಿತರಿಗೆ ಶೀಘ್ರವೇ ಚಿಕಿತ್ಸೆ ಕೊಡಲು ಕ್ರಮವಹಿಸುವುದು 3ಟಿ ಸೂತ್ರ. ಇದನ್ನು ಎಲ್ಲಾ ರಾಜ್ಯಗಳು ಮತ್ತೊಮ್ಮೆ ಅನುಷ್ಠಾನ ಮಾಡುವಂತೆ ಪ್ರಧಾನಿಗಳು ಸಲಹೆ ನೀಡಿದರು. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ: ಸಂಜಯ್ ರಾವತ್
Advertisement
Advertisement
ಪ್ರಧಾನಿಗಳ ಸಲಹೆಗಳನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲೂ 3ಟಿ ಸೂತ್ರ ಅನುಷ್ಠಾನಕ್ಕೆ ಮುಂದಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡುವುದಿಲ್ಲ. ಆದರೆ ಪ್ರಧಾನಿಗಳು ನೀಡಿದ 3ಟಿ ಸೂತ್ರ ಅನುಷ್ಠಾನ ಮಾಡುತ್ತೇವೆ. ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ ಮೆಂಟ್ ಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ತಿಳಿಸಿದರು. ಇದನ್ನೂ ಓದಿ: ನಡು ರಸ್ತೆಯಲ್ಲಿ ಜಡೆ ಜಗಳ – ಎರಡು ಗುಂಪಿನ ವಿದ್ಯಾರ್ಥಿನಿಯರ ಜಗಳ ಬಿಡಿಸಲು ಜನ ಹರಸಾಹಸ
Advertisement