ನವದೆಹಲಿ: 100 ಕೋಟಿ ಲಸಿಕೆ ಕೇವಲ ಅಂಕಿಯಲ್ಲ. ಇದೊಂದು ಇತಿಹಾಸ ಪುಟದಲ್ಲಿ ದಾಖಲಾದ ಹೊಸ ಅಧ್ಯಾಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
100 ಕೋಟಿ ಲಸಿಕೆ ವಿತರಿಸಿ ಐತಿಹಾಸಿಕಾ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಇಷ್ಟೊಂದು ಲಸಿಕೆ ಖರೀದಿಸಲು ಎಲ್ಲಿಂದ ದುಡ್ಡು ತರುತ್ತೆ ಎಂಬ ಚರ್ಚೆಯಿತ್ತು. ಇಷ್ಟು ಜನಕ್ಕೆ ಭಾರತ ಲಸಿಕೆ ಕೊಡುತ್ತಾ ಎಂಬ ಚರ್ಚೆ ಕೂಡ ಇತ್ತು. ಆದರೆ ಈಗ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ ಎಂದರು. ಇದನ್ನೂ ಓದಿ: ನಮ್ಮ ಜಗತ್ತು.. ನಮ್ಮ ವಿಶ್ವ.. ಐ ಲವ್ ಯೂ ಕಂದ
Advertisement
Advertisement
ನಾವು ಅಸಾಧಾರಣ ಗುರಿ ತಲುಪಿದ್ದೇವೆ. ಇದು ಭಾರತದ ಪ್ರತಿಯೊಬ್ಬ ನಾಗರಿಕನ ಸಾಧನೆ. ಕೆಲವರು ಭಾರತವನ್ನು ಬೇರೆ ರಾಷ್ಟ್ರದೊಂದಿಗೆ ಹೋಲಿಸುತ್ತಿದ್ದಾರೆ. ನಾವು ಯಾವಾಗ ಲಸಿಕೆ ಆರಂಭಿಸಿದ್ದೇವೆ ಎನ್ನುವುದು ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ Vs ಪಾಕಿಸ್ತಾನ ಮ್ಯಾಚ್ – 10 ಸೆಕೆಂಡ್ ಜಾಹೀರಾತಿಗೆ ಲಕ್ಷ ಲಕ್ಷ ರೇಟ್
Advertisement
ಲಸಿಕೆ ಹಾಕಿಸಿಕೊಳ್ಳಲು ಜನ ಬರುವುದಿಲ್ಲ ಎಂಬ ಮಾತು ಇತ್ತು. ಆದರೆ 100 ಕೋಟಿ ಲಸಿಕೆ ವಿತರಿಸುವ ಮೂಲಕ ಜನ ಉತ್ತರ ನೀಡಿದ್ದಾರೆ. ಜನರ ಸಹಭಾಗಿತ್ವದಲ್ಲಿ ಮೊದಲ ಯಶಸ್ಸು ಸಿಕ್ಕಿದೆ. ದೀಪ ಬೆಳಗುವುದರಿಂದ ಘಂಟೆ ಬಾರಿಸುವುದರಿಂದ ಕೊರೊನಾ ಹೋಗುತ್ತದೆಯೇ ಎಂದು ಪ್ರಶ್ನಿಸಿದ್ದರು. ಆದರೆ ಇದು ಜನ ಜಾಗೃತಿ ಮೂಡಿಸಿತು. ತಂತ್ರಜ್ಞಾನದ ಅದ್ಭುತ ಬಳಕೆ ಆಗಿದೆ. ದೇಶ 100 ಕೋಟಿ ಲಸಿಕೆ ವಿರಣೆಗೆ ಗರ್ವ ಪಡುತ್ತಿದೆ ಎಂದರು.
Advertisement
ಈ ದೀಪಾವಳಿಯಲ್ಲಿ 100 ಕೋಟಿ ಲಸಿಕೆ ವಿತರಣೆಯ ಸಂಭ್ರಮ ಇದೆ. ಭಾರತದಲ್ಲಿಯೇ ಉತ್ಪಾದಿಸಿದ ವಸ್ತು ಖರೀದಿಸಿ ಹಬ್ಬವನ್ನು ವಿಶೇಷಗೊಳಿಸಿ. ಈ ಸಫಲತೆ ನಮಗೆ ಹೊಸ ವಿಶ್ವಾಸ ಮೂಡಿಸಿದೆ. ಕೋವಿಡ್ ಲಸಿಕೆಯಿಂದ ದೇಶದ ಸುರಕ್ಷತವಾಗಿದೆ. ನಮ್ಮ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸೋಣ ಎಂದರು. ಇದನ್ನೂ ಓದಿ: ಚಲಿಸುವ ವಾಹನಗಳಿಂದ ಹತ್ತಿ ಕಳ್ಳತನ – ಪ್ರಾಣವನ್ನೇ ಪಣಕ್ಕಿಟ್ಟು ಓಡುತ್ತಿದ್ದಾರೆ ಮಕ್ಕಳು
ಭಾಷಣದ ಕೊನೆಯಲ್ಲಿ ಯಾರು ಇದುವರೆಗೂ ಲಸಿಕೆ ಪಡೆದಿಲ್ಲ ದಯವಿಟ್ಟು ಲಸಿಕೆಯನ್ನು ಪಡೆದುಕೊಳ್ಳಿ ಎಂದು ವಿನಂತಿ ಮಾಡಿದರು. ಇದನ್ನೂ ಓದಿ: ಉಗ್ರರಿಗೆ ಸಹಕಾರ – ಪಾಕಿಸ್ತಾನದ ಜೊತೆ ಬೂದುಪಟ್ಟಿಗೆ ಸ್ನೇಹಿತ ಟರ್ಕಿಯೂ ಸೇರ್ಪಡೆ