ಬೆಂಗಳೂರು: ಮೋದಿ ಹತ್ತಿರ ಮಾತನಾಡಲು ವಿಷಯವಿಲ್ಲ. ಸುಮ್ಮನೆ ಬುರುಡೆ ಬಿಡ್ತಾರೆ ಎಂದು ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಜೆಪಿ ನಗರ ನಿವಾಸದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಗೆದ್ದಿದ್ದೇಯಾ? ಮೋದಿ ಹತ್ತಿರ ಮಾತನಾಡಲು ವಿಷಯವಿಲ್ಲ. ಸುಮ್ಮನೆ ಬುರುಡೆ ಬಿಡುತ್ತಾರೆ. ನಮ್ಮ ಸರ್ಕಾರ ಸಾಲ ಮನ್ನಾ ಮಾಡಿಲ್ವಾ? ಮಳವಳ್ಳಿ ರೈತನ ಪತ್ನಿ ಕಣ್ಣೀರು ಹಾಕಿಸಿದಕ್ಕೆ ನಾವು ಕಣ್ಣೀರು ಹಾಕಿದ್ದೇವೆ. ಕುಮಾರಸ್ವಾಮಿ ಬದುಕಿರೋದು, ಬಾಳುತ್ತಿರುವುದು ಕರ್ನಾಟಕದಲ್ಲಿ. ನಾವು ಮೋದಿಯಿಂದ ಹೇಳಿಸಿಕೊಳ್ಳಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ಬಾಲಕೋಟ್‍ನಲ್ಲಿ ಏರ್ ಸ್ಟ್ರೈಕ್ ಮಾಡಿದ್ದಕ್ಕೆ ಜೆಡಿಎಸ್, ಕಾಂಗ್ರೆಸ್‍ಗೆ ನೋವಾಗಿದೆ: ಮೋದಿ
Advertisement
Advertisement
ಪಾಕ್ ಉಗ್ರರ ವಿರುದ್ಧ ನಡೆಸಿದ ಏರ್‌ಸ್ಟ್ರೈಕ್ ಬಗ್ಗೆ ಮೋದಿ ಮಾತ್ರ ಬೆನ್ನು ತಟ್ಟಿಕೊಳ್ಳಬೇಕು. ಮೋದಿಗೆ ಉತ್ತರ ಕೋಡೋಕೆ ವಿಷಯವೇ ಎಲ್ಲ. ಈಗಲೂ ಅವರು ಬುರುಡೆ ಭಾಷಣ ಮಾಡಿ ಹೋಗಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದರು.
Advertisement
ಮೋದಿ ಹೇಳಿದ್ದು ಏನು?
ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಬಾಲಕೋಟ್ ಮೇಲಿನ ವಾಯು ದಾಳಿಯಿಂದ ಪಾಕಿಸ್ತಾನಕ್ಕೆ ನೋವು ಆಗಿದೆಯೋ ಗೊತ್ತಿಲ್ಲ. ಆದರೆ ಇಲ್ಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ಸಿಗೆ ತುಂಬಾನೇ ನೋವಾಗಿದೆ. ಇಲ್ಲಿಯ ಮುಖ್ಯಮಂತ್ರಿ ದೇಶದ ಪರಾಕ್ರಮದ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತಾರೆ. ತಮ್ಮ ಮತಗಳ ಎಲ್ಲಿ ಕಳೆದು ಹೋಗುತ್ತೆ ಎಂಬ ಭಯದಿಂದ ಭಾರತವನ್ನೇ ವಿರೋಧ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದರು.