ಇಸ್ಲಾಮಾಬಾದ್: ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ (Bilawal Bhutto) ಹಾಗೂ ಪೀಪಲ್ಸ್ ಪಾರ್ಟಿಯ ನಾಯಕಿ ಶಾಜಿಯಾ ಮಾರಿ (Shazia Marri) ಅವರ ಹೇಳಿಕೆಯಿಂದ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಹಣಕಾಸು ಸಚಿವ ಮೋದಿ (Narendra Modi) ಸರ್ಕಾರದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
Advertisement
ಪಾಕ್ ಹಣಕಾಸು ಸಚಿವ ಮೊಹಮ್ಮದ್ ಇಶಾಕ್ ದಾರ್ (Muhammad Ishaq Dar) ಪ್ರತಿಕ್ರಿಯಿಸಿರುವುದಾಗಿ ಹೇಳಿಕೆಯೊಂದನ್ನು ಶಾಜಿಯಾ ಮಾರಿ ತಮ್ಮ ಟ್ವೀಟ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ. `ಪಾಕಿಸ್ತಾನವು (Pakistan) ಜವಾಬ್ದಾರಿಯುತ ಪರಮಾಣು ರಾಷ್ಟ್ರವಾಗಿದೆ. ಆದರೆ ಭಾರತೀಯ ಮಾಧ್ಯಮಗಳಲ್ಲಿನ ಕೆಲವು ಅಂಶಗಳು ಆತಂಕ ಸೃಷ್ಟಿಸುತ್ತಿವೆ. ಭಯೋತ್ಪಾದನೆ (Terrorism) ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವು ಭಾರತಕ್ಕಿಂತ ಹೆಚ್ಚು ತ್ಯಾಗ ಮಾಡಿದೆ. ಮೋದಿ ಸರ್ಕಾರವು ಉಗ್ರವಾದ ಮತ್ತು ಫ್ಯಾಸಿಸಂ ಅನ್ನು ಉತ್ತೇಜಿಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಪರಮಾಣು ಬಾಂಬ್ ಯುದ್ಧದ ಬೆದರಿಕೆ ಹಾಕಿದ ಪಾಕ್ ಸಚಿವೆ
Advertisement
Pakistan is a responsible nuclear state. Some elements in Indian media trying to create panic. Pakistan’s FM responded to inciting comments by Indian Minister. Pakistan has sacrificed far more than India in the fight against terrorism.Modi Sarkar is promoting extremism & fascism. https://t.co/3v4psXRfWk
— Shazia Atta Marri (@ShaziaAttaMarri) December 17, 2022
Advertisement
ಪಾಕ್ ಸಚಿವ ಬಿಲಾವಲ್ ಭುಟ್ಟೋ `ಬಿನ್ ಲ್ಯಾಡೆನ್ ಸತ್ತುಹೋದ, ಆದ್ರೆ ಗುಜರಾತಿನ ಕಟುಕ ಇನ್ನೂ ಬದುಕಿದ್ದಾನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಳಿಕ, ಶಾಜಿಯಾ ಮಾರಿ, ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದರು. ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಎಂಬುದನ್ನು ಭಾರತ ಮರೆಯಬಾರದು. ನಮ್ಮ ಪರಮಾಣು ಸ್ಥಿತಿಯು ಮೌನವಾಗಿರಲು ಅಲ್ಲ. ಅಗತ್ಯ ಬಿದ್ದರೆ ನಾವು ಹಿಂದೆ ಸರಿಯುವುದಿಲ್ಲ. ಮೋದಿ ಸರ್ಕಾರ ಹೋರಾಡಿದರೆ ಉತ್ತರ ಸಿಗುತ್ತದೆ, ಪಾಕಿಸ್ತಾನಕ್ಕೆ ಪರಮಾಣು ರಾಷ್ಟ್ರದ ಸ್ಥಾನಮಾನ ನೀಡಿ ಸುಮ್ಮನಿರಲು ಆಗಿಲ್ಲ. ಪಾಕಿಸ್ತಾನಕ್ಕೂ ಹೇಗೆ ಉತ್ತರಿಸಬೇಕು ಎಂಬುದು ಗೊತ್ತಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ : ಸಿಂಗಂ ಖ್ಯಾತಿಯ ಅಧಿಕಾರಿ ರಾಜೇಶ್ ಕೆಲಸಕ್ಕೆ ಮೆಚ್ಚುಗೆ