ʻವಿಶ್ವʼ ವಿಜಯಯಾತ್ರೆಗೆ ಕ್ಷಣಗಣನೆ – ಕ್ರಿಕೆಟ್‌ ಅಭಿಮಾನಿಗಳಿಂದ ʻಮೋದಿ ಮೋದಿʼ ಘೋಷಣೆ!

Public TV
2 Min Read
Team India Mumbai

ಮುಂಬೈ: ಟಿ20 ವಿಶ್ವಕಪ್ (T20 World Cup) ವಿಜೇತ ಟೀಂ ಇಂಡಿಯಾದ (Team India) ವಿಕ್ಟರಿ ಪರೇಡ್‌ಗೆ ಕ್ಷಣಗಣನೆ ಶುರುವಾಗಿದೆ. ವಿಶ್ವ ವಿಜೇತರನ್ನು ಅಭಿನಂದಿಸಲು (Team India victory parade) ಮುಂಬೈ ನಗರಿ ಸಿದ್ಧವಾಗಿ ನಿಂತಿದೆ. ಈ ನಡುವೆ ಕ್ರಿಕೆಟ್‌ ಆಟಗಾರರನ್ನು ಸ್ವಾಗತಿಸಲು ನಿಂತಿದ್ದ ಕೆಲ ಅಭಿಮಾನಿಗಳು ʻಮೋದಿ ಮೋದಿʼ ಘೋಷಣೆ ಕೂಗಿದ್ದಾರೆ.

Mumbai Airport

ಮುಂಬೈನ ನಾರೀಮನ್ ಪಾಯಿಂಟ್‌ನಿಂದ ಪರೇಡ್‌ ಆರಂಭವಾಗಲಿದ್ದು, ಸುಮಾರು 2 ಕಿಮೀ ವಿಜಯಯಾತ್ರೆ ನಡೆಯಲಿದೆ. ಬಳಿಕ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರನ್ನು ಮತ್ತು ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ. ಇದಾದ ಬಳಿಕ ಬಿಸಿಸಿಐ ಘೋಷಿಸಿರುವ 125 ಕೋಟಿ ರೂ. ಬಹುಮಾನ ಮೊತ್ತವನ್ನೂ ಪ್ರದಾನ ಮಾಡಲಾಗುತ್ತದೆ. ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್‌ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ನಡುವೆ ಮೆರವಣಿಗೆಯಲ್ಲಿ ಕಾದು ನಿಂತಿರುವ ಕೆಲ ಅಭಿಮಾನಿಗಳು ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್‌ ಗೆಲುವಿನ ಸಂಭ್ರಮ – ಬಿಸಿಸಿಐನಿಂದ ಮೋದಿಗೆ ʻನಮೋ ನಂ.1ʼ ಟೀ ಶರ್ಟ್‌ ಗಿಫ್ಟ್‌!

ತೆರೆದ ಬಸ್​ನಲ್ಲಿ ರೋಡ್ ಶೋ:
ಈಗಾಗಲೇ ಟೀಂ ಇಂಡಿಯಾದ ಆಟಗಾರರು ವಿಶೇಷ ವಿಮಾನದಲ್ಲಿ ಮುಂಬೈ ತಲುಪಿಸಿದ್ದಾರೆ. ಏರ್‌ ಇಂಡಿಯಾದ ವಿಮಾನ ಮುಂಬೈ ತಲುಪುತ್ತಿದ್ದಂತೆ ವಿಶೇಷ ರೀತಿಯಲ್ಲಿ ವಾಟರ್‌ ಜೆಟ್‌ಗಳ ಮೂಲಕ ಸ್ವಾಗತ ಕೋರಲಾಗಿದೆ. ವಿಜಯಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದು, ‘ಮುಂಬೈನ ನಾರೀಮನ್ ಪಾಯಿಂಟ್‌ನಿಂದ ರೋಡ್‌ ಶೋ ಆರಂಭವಾಗಲಿದೆ. ಇದನ್ನೂ ಓದಿ: ʻವಿಶ್ವʼವಿಜಯಯಾತ್ರೆಗೆ ವರುಣ ಅಡ್ಡಿ – ಮಳೆಯಲ್ಲೂ ಕುಗ್ಗದ ಟೀಂ ಇಂಡಿಯಾ ಅಭಿಮಾನಿಗಳ ಉತ್ಸಾಹ

ಮುಂಬೈಗೆ ತೆರಳುವ ಮುನ್ನ ಟೀಮ್​ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ (Team India Arrival) ಭೇಟಿ ನೀಡಿ ವಿಶ್ವಕಪ್​ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್​ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ (PM Modi) ನಮೋ ನಂ.1 ಎಂದು ಬರೆದ ಟೀಂ​ ಇಂಡಿಯಾ ಜೆರ್ಸಿಯನ್ನು (Indian Cricket Jersey) ಉಡುಗೊರೆಯಾಗಿ ನೀಡಲಾಯಿತು. ಇದನ್ನೂ ಓದಿ: ತವರಿಗೆ ಮರಳಿದ ʼವಿಶ್ವʼ ಚಾಂಪಿಯನ್ಸ್‌! – ಇಂದು ಸಂಜೆ ಮುಂಬೈನಲ್ಲಿ ರೋಡ್‌ ಶೋ

Share This Article