ವಿಜಯಪುರ: ಇಂದು ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೋದಿ ಅಭಿಮಾನಿಗಳು ಅನೇಕ ಹರಕೆ ಕಟ್ಟಿಕೊಂಡು ಪೂರೈಸುತ್ತಿದ್ದಾರೆ. ಇದೀಗ ಮದುವೆ ಮನೆಯಲ್ಲೂ ನವಜೋಡಿಗೆ ಫೋಟೋ ಗಿಫ್ಟ್ ನೀಡಲಾಗಿದೆ.
ವರ ಶಿವರಾಜ್ ಹಾಗೂ ವಧು ಸ್ನೇಹಲ್ ಗೆ ಮೋದಿ ಭಾವಚಿತ್ರ ಉಡುಗೊರೆಯಾಗಿ ಬಂದಿದೆ. ವಿಜಯಪುರದ ಸ್ಟೇಶನ್ ರಸ್ತೆಯ 18ನೇ ವಾರ್ಡ್ ವರನ ಸ್ವಗೃಹದಲ್ಲಿ ಇವರ ಮದುವೆ ನಡೆದಿದ್ದು, ಮೋದಿ ಅಭಿಮಾನಿಗಳು ಇಂದು ಮೋದಿ ಪ್ರಮಾಣ ವಚನದ ಹಿನ್ನೆಲೆಯಲ್ಲಿ ನವ ಜೋಡಿಗಳಿಗೆ ಮೋದಿ ಫೋಟೋ ಗಿಫ್ಟ್ ನೀಡಿದ್ದಾರೆ.
ವರ ಶಿವರಾಜ್ ಕಲಬುರಗಿಯರಾಗಿದ್ದು, ಕಟ್ಟಾ ಮೋದಿ ಅಭಿಮಾನಿಯಾಗಿದ್ದಾರೆ. ಹೀಗಾಗಿ ಅವರ ಸ್ನೇಹಿತರು ಮೋದಿ ಫೋಟೋವನ್ನೇ ಉಡುಗೊರೆಯಾಗಿ ನೀಡಿದ್ದಾರೆ. ನಂತರ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದು, ಮದುವೆ ಮಂಟಪದಲ್ಲಿ ಮೋದಿ..ಮೋದಿ ಎಂದು ಜೈಕಾರ ಹಾಕಿದ್ದಾರೆ.