ಬೆಂಗಳೂರು: ಬಿಜೆಪಿ ರಾಜ್ಯ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ವ್ಯಾಪಕವಾಗಿ ಬೆಳೆಯುತ್ತಿದೆ. ಮೋದಿ ರಾಜ್ಯಕ್ಕೆ ಬಂದಾಗಲೂ 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಿಲ್ಲ. ಅದನ್ನು ಬಿಟ್ಟು ಸರ್ಕಾರಕ್ಕೆ ಸರ್ಟಿಫಿಕೇಟ್ ಕೊಡುವ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ 40 ಪರ್ಸೆಂಟ್ ಕಮಿಷನ್ ಸರ್ಕಾರಕ್ಕೆ ರಸ್ತೆ ಕಳಪೆ ಕಾಮಗಾರಿಯೇ ತಾಜಾ ಉದಾಹರಣೆಯಾಗಿದೆ. ಆದರೂ ಮೋದಿ ಅವರು ಮೈಸೂರಿಗೆ ಬಂದಾಗ ಇದರ ಬಗ್ಗೆ ಮಾತನಾಡಿಲ್ಲ. ಸರ್ಕಾರಕ್ಕೆ ಸರ್ಟಿಫಿಕೇಟ್ ಕೊಡುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ಆಕ್ಸಿಜನ್ ಜನರೇಟರ್ಸ್ ಸ್ಥಾಪನೆ
ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಕೆಂಪಣ್ಣ ಅವರ ಬಳಿ ದಾಖಲೆ ಕೇಳಲು ಗೃಹ ಇಲಾಖೆ ಬಿಟ್ಟಿದ್ದಾರೆ. ಗೃಹ ಇಲಾಖೆ ಪ್ರವೇಶ ಮಾಡಿದೆ ಅಂದ್ರೆ ಇದು ಬೆದರಿಕೆಯ ತಂತ್ರವೇ ಆಗಿದೆ. ಬಿಜೆಪಿ ಶಾಸಕರೇ ಪರ್ಸೆಂಟೇಜ್ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಸಚಿವರ ಮೇಲೂ ಆರೋಪ ಇದೆ. ಪೊಲೀಸ್, ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಒಳ ಹೊಕ್ಕಿ ನೋಡಿದ್ರೆ ಗೊತ್ತಾಗುತ್ತೆ. ಕೇಂದ್ರ ಸರ್ಕಾರ ಗೃಹ ಇಲಾಖೆ ಬದಲು ಇಡಿ, ಸಿಬಿಐ ಮೂಲಕ ತನಿಖೆ ಮಾಡಿಸಿದ್ದರೆ ಯಾರ್ಯಾರ ಬಣ್ಣ ಹೇಗೆ? ಅನ್ನೋದು ಬಯಲಾಗುತ್ತಿತ್ತು ಎಂದು ಕುಟುಕಿದ್ದಾರೆ.
40% ಕಮಿಷನ್ ಆರೋಪದ ಬಗ್ಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಅಥವಾ ಹಾಲಿ ನ್ಯಾಯಧೀಶರ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯುವತಿ ಸ್ನೇಹಿತೆಯಾದ ಮಾತ್ರಕ್ಕೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆಯಿದೆ ಎಂದರ್ಥವಲ್ಲ – ಹೈಕೋರ್ಟ್
ಇದೇ ವೇಳೆ ಬಿಬಿಎಂಪಿ ವಾರ್ಡ್ ವಿಂಗಡಣೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಅಮಿಬಾ ಮಾದರಿಯಲ್ಲಿ ಬಿಬಿಎಂಪಿ ವಾರ್ಡ್ ವಿಂಗಡಣೆ ಮಾಡಿದೆ. ತನಗೆ ಬೇಕಾದಂತೆ ವಾರ್ಡ್ ರಚನೆ ಮಾಡಿದೆ. ವಾರ್ಡ್ಗೆ ಚಾಣಕ್ಯ, ವೀರ ಮದಕರಿನಾಯಕರ ಹೆಸರಿಡುವ ಮೂಲಕ ಸ್ಥಳೀಯರ ಭಾವನೆ ಕೆರಳಿಸಿದ್ದಾರೆ. ಬಿಬಿಎಂಪಿ ಚುನಾವಣೆ ಮಾಡೋದಕ್ಕೂ ಸರ್ಕಾರಕ್ಕೆ ಆಸಕ್ತಿಯಿಲ್ಲ. ಆದ್ರೆ ನಮ್ಮ ಒತ್ತಾಯ ಚುನಾವಣೆ ಮಾಡಬೇಕು, ಸ್ಥಳೀಯ ನಾಯಕತ್ವ ಬೆಳೆಸಬೇಕು ಎಂದು ಆಗ್ರಹಿಸಿದ್ದಾರೆ.