ಧಾರವಾಡ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬುದ್ಧಿ ಮತ್ತೆ ಯಾವ ರೀತಿ ಇದೆ ಅನ್ನೋದರ ಬಗ್ಗೆ ಮೋದಿ ಹೇಳಿದ್ದಾರೆ. ಆದ್ರೆ ಬುದ್ಧಿಮಾಂದ್ಯರಿಗೆ ಅವರು ಅವಮಾನ ಮಾಡುವ ವಿಚಾರ ಹೇಳಿಲ್ಲ ಎಂದು ಸಂಸದ ಪ್ರಹ್ಲಾದ್ ಜೋಶಿ ಸಮಜಾಯಿಷಿ ನೀಡಿದ್ದಾರೆ.
ರಾಹುಲ್ ಗಾಂಧಿಯನ್ನು ಟೀಕಿಸುವ ಭರದಲ್ಲಿ ಪ್ರಧಾನಿ ಮೋದಿ ಬುದ್ಧಿಮಾಂದ್ಯರಿಗೆ ಅವಹೇಳನ ಮಾಡಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಸಮುದಾಯದ ಬಗ್ಗೆ ಟೀಕೆ ಮಾಡಿಲ್ಲ. ಯಾವ ರೀತಿ ಬುದ್ಧಿ ಮತ್ತೆ ಇರುತ್ತೆ ಎಂದು ಪ್ರಧಾನಿ ಹೇಳಿದ್ದಾರೆ ಅಷ್ಟೆ ಅಂದ್ರು.
Advertisement
Advertisement
ಬರ ಪರಿಹಾರಕ್ಕೆ ಕೇಂದ್ರದಿಂದ ಕಡಿಮೆ ಹಣ ಮಂಜೂರು ಮಾಡಿದ ವಿಚಾರವಾಗಿ ಮಾತನಾಡಿ, ಐದು ವರ್ಷದಲ್ಲಿ ಕೇಂದ್ರ 12 ಸಾವಿರ ಕೋಟಿ ಕೊಟ್ಟಿದೆ. ಉಮೇಶ್ ಜಾಧವ್ ರಾಜೀನಾಮೆ ಕೊಟ್ಟಿದ್ದಾರೆ. ಈಗ ಅವರ ಬಗ್ಗೆ ಕಾಂಗ್ರೆಸ್ ಕೈಗೆಟುಕದ ದ್ರಾಕ್ಷಿ, ಹುಳಿ ಅನ್ನುವಂತೆ ಮಾಡುತ್ತಿದೆ ಎಂದ ಜೋಶಿ, ಕಾಂಗ್ರೆಸ್ ತನ್ನ ಮನೆ ಮೊದಲು ಚೆನ್ನಾಗಿ ಇಟ್ಟುಕೊಳ್ಳಲಿ. ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ ಎಂದು ಟಿಕಿಸಿದರು.
Advertisement
ವಾಯುದಾಳಿ ಬಗ್ಗೆ ಸಾಕ್ಷಿ ಕೇಳೋದಾದ್ರೆ ಪಾಕಿಸ್ತಾನಕ್ಕೆ ಹೋಗಿ ನೋಡಕೊಂಡು ಬರಲಿ ಎಂದ ಅವರು, ಕುಟುಂಬ ರಾಜಕಾರಣ ವಿಚಾರವಾಗಿ ಶೆಟ್ಟರ್ ಮತ್ತು ಯಡಿಯೂರಪ್ಪ ಮಕ್ಕಳು ದಶಕಗಳ ನಂತರ ತಾವು ತಾವಾಗಿಯೇ ರಾಜಕೀಯಕ್ಕೆ ಬಂದಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಹಾಗೆ ಮಾಡುತ್ತಿಲ್ಲ ಹೀಗಾಗಿ ಅವರ ಕುಟುಂಬ ರಾಜಕಾರಣಕ್ಕೂ ನಮಗೂ ಹೋಲಿಕೆ ಸರಿಯಲ್ಲ ಎಂದು ಹೇಳಿದರು.
Advertisement
ಇದೇ ವೇಳೆ ಎಲ್ಲದರಲ್ಲಿ ರಾಜಕಾರಣ ಮಾಡಲ್ಲ ಎಂದ ಜೋಶಿಗೆ ಯಡಿಯೂರಪ್ಪ ಸೈನಿಕರ ದಾಳಿಯ ನಂತರ ಬಿಜೆಪಿಗೆ ಚುನಾವಣಾ ಲಾಭ ಆಗುವ ಪ್ರಶ್ನೆಗೆ ಕೇಳಿದ್ದಕ್ಕೆ, ಬಿಎಸ್‍ವೈ ಹೇಳಿಕೆಗೆ ಈಗಾಗಲೇ ವಿವರಣೆ ನೀಡಲಾಗಿದೆ ಎಂದು ಹೇಳಿ ಹೊರಟು ಹೋದರು.
https://www.youtube.com/watch?v=DElJEJanlxc
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv