ಧಾರವಾಡ: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದರೆ ನಮಗೆ ಏನು ಅಭ್ಯಂತರವಿಲ್ಲ. ಹಲವು ಸುಳ್ಳು ಹೇಳಿ ಅವರು ಪ್ರಧಾನಿಯಾಗಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಅವರು ಪೆಟ್ರೋಲ್ ಹಾಗೂ ಡೀಸೆಲ್ ಬಗ್ಗೆ ಮಾತಾಡಿಯೇ ಪ್ರಧಾನಿಯಾದ್ರು. ಜನರು ಇದನ್ನು ಗಮನಿಸುತ್ತಿದ್ದಾರೆ. 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಎಲ್ಲಿ ಉದ್ಯೋಗ ಕೊಟ್ಟರು ಎಂದು ಪ್ರಶ್ನಿಸಿ ಎಂದು ವಾಗ್ದಾಳಿ ನಡೆಸಿದರು.
Advertisement
ಮಾಧ್ಯಮಗಳ ಸಮೀಕ್ಷೆ ಪ್ರಕಾರ ಮೋದಿ ಸರ್ಕಾರದಲ್ಲಿ 1 ಲಕ್ಷದ 86 ಸಾವಿರ ಜನರಿಗೆ ಮಾತ್ರ ಉದ್ಯೋಗ ಸಿಕ್ಕಿದೆ. ಸಣ್ಣ ಕೈಗಾರಿಕೆಗಳು ಬಂದ್ ಆಗುತ್ತಿವೆ. ಹಿಂದೆ ಮನಮೋಹನ್‍ಸಿಂಗ್ ಅವರು ಪ್ರಧಾನಿಯಾಗಿದ್ದಾಗ 74 ಸಾವಿರ ಕೋಟಿ ರೂ. ರೈತ ಸಾಲ ಮನ್ನಾ ಮಾಡಿದ್ದಾರೆ. ಸದ್ಯ 40 ಸಾವಿರ ಕೋಟಿ ರೂ. ಸಾಲ ಇದೆ ಅದನ್ನ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
Advertisement
ಯಡಿಯೂರಪ್ಪ ಅವರು ರೈತರ ಸಾಲಮನ್ನಾ ಮಾಡದೇ ಇದ್ರೆ ವಿಧಾನ ಸಭೆ ಮುತ್ತಿಗೆ ಹಾಕುತ್ತೇನೆ ಅಂತಾ ಹೇಳಿದ್ದರು. ಈಗ ಎಲ್ಲಿ ಅವರ ಧ್ವನಿ ಎಲ್ಲಿ ಹೋಗಿದೆ ಎಂದು ಅವರು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
Advertisement
ರಾಷ್ಟ್ರೀಯ ಬಸವ ಸೇನೆ ಮಾಡಲು ಜನರ ಆಗ್ರಹ ಇದೆ. ಬಸವಣ್ಣನವರ ಹೆಸರು ಬಂದಲ್ಲಿ ಎಲ್ಲ ವರ್ಗದವರನ್ನ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಇದು ಒಂದೇ ವರ್ಗಕ್ಕೆ ಸೀಮಿತವಲ್ಲ. ಇದನ್ನ ಇನ್ನು ಆರಂಭ ಮಾಡಿಲ್ಲ. ಆದ ಮೇಲೆ ಅದರ ರೂಪುರೇಷೆ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.