ಪಾಟ್ನಾ: ಆಗಸ್ಟ್ ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರ ಪತನವಾಗಲಿದೆ ಎಂದು ರಾಷ್ಟ್ರೀಯ ಜನತಾ ದಳ (RJD) ವರಿಷ್ಠ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ (Lalu Prasad Yadav) ಭವಿಷ್ಯ ನುಡಿದಿದ್ದಾರೆ.
ಪಕ್ಷದ 28ನೇ ಸಂಸ್ಥಾಪನಾ ದಿನದ ಆಚರಣೆಯ ವೇಳೆ ಪಾಟ್ನಾದ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಕಾರ್ಯವೈಖರಿ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಪಕ್ಷ ಇನ್ನಷ್ಟು ಎತ್ತರಕ್ಕೆ ಬೆಳೆಯುವ ವಿಶ್ವಾಸವಿದೆ ಎಂದರು. ಜೊತೆಗೆ ಕೇಂದ್ರದ ಮೋದಿ (Narendra Modi) ಸರ್ಕಾರ ಅತ್ಯಂತ ದುರ್ಬಲವಾಗಿದ್ದು, ಆಗಸ್ಟ್‌ನಲ್ಲಿ ಮೋದಿ ಸರ್ಕಾರ ಪತನವಾಗಲಿದೆ ಎಂದು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
Advertisement
Advertisement
ಇದೇ ವೇಳೆ ಆರ್‌ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejaswi Yadav), ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದರು. ನಮ್ಮ ಪಕ್ಷಕ್ಕೆ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಇದ್ದವು. ನಮ್ಮ ಸಿದ್ಧಾಂತದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ನಮ್ಮ ಹೋರಾಟವನ್ನು ಮುಂದುವರಿಸಿದೆವು. ಕೆಲವೊಮ್ಮೆ ನಾವು ಯಶಸ್ವಿಯಾಗಿದ್ದೇವೆ ಮತ್ತು ಕೆಲವೊಮ್ಮೆ ನಾವು ವಿಫಲರಾಗಿದ್ದೇವೆ. ಆದರೆ ನಮ್ಮ ಕಾರ್ಯಕರ್ತರು ದೃಢವಾಗಿ ಉಳಿದರು ಎಂದು ಹೇಳಿದರು.
Advertisement
ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೊದಲು ನಾವು ಜನತಾದಳದ ಭಾಗವಾಗಿದ್ದೆವು. ಈಗ ನಾವು ಬೇರ್ಪಟ್ಟಿದ್ದೇವೆ. ನಮ್ಮ ಪಕ್ಷ ಅಪ್ಪನ ಪಕ್ಷ. ಆರ್‌ಜೆಡಿ ಮತಗಳಲ್ಲಿ 9%ರಷ್ಟು ಏರಿಕೆ ದಾಖಲಾಗಿದ್ದರೆ, ಎನ್‌ಡಿಎ ಪಾಲು ಕಡಿಮೆಯಾಗಿದೆ ಎಂದರು. ಇದನ್ನೂ ಓದಿ: 15 ದಿನಗಳಲ್ಲಿ 10 ಸೇತುವೆ ಕುಸಿತ – ಜಲಸಂಪನ್ಮೂಲ ಇಲಾಖೆಯ 11 ಎಂಜಿನಿಯರ್‌ಗಳು ಅಮಾನತು