ಕೋಲ್ಕತ್ತಾ: ಮೋದಿ ಸರ್ಕಾರವು ತನ್ನ ಬಹುಮತದ ಅಜೆಂಡಾವನ್ನು ಮುಂದುವರಿಸಲು ಕ್ರಿಶ್ಚಿಯನ್ನರನ್ನು ಗುರಿಯಾಗಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.
Advertisement
ಕೋಲ್ಕತ್ತಾದಲ್ಲಿ ಮಿಷನರೀಸ್ ಆಫ್ ಚಾರಿಟಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ವಿಚಾರವಾಗಿ ಪಿ.ಚಿದಂಬರಂ ಗೃಹ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಮಿಷನರೀಸ್ ಆಫ್ ಚಾರಿಟಿಗೆ ಭವಿಷ್ಯದ ದೃಷ್ಟಿಯಿಂದ ನೀಡುತ್ತಿರುವ ವಿದೇಶಿ ಕೊಡುಗೆಗಳನ್ನು ನಿರಾಕರಿಸುತ್ತಿರುದಕ್ಕಿಂತ ಆಘಾತಕಾರಿ ವಿಚಾರ ಮತ್ತೊಂದಿಲ್ಲ. ಭಾರತದಲ್ಲಿರುವ ಬಡವರು ಮತ್ತು ದಲಿತರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮದರ್ ತೆರೇಸಾ ಅವರ ಸ್ಮರಣೆಗೆ ಅತ್ಯಂತ ದೊಡ್ಡ ಅವಮಾನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ
Advertisement
Nothing can be more shocking than denying future foreign contributions to the Missionaries of Charity in Kolkata, West Bengal
This is the greatest insult to the memory of Mother Teresa who devoted her life to care for the ‘poor and wretched’ of India
— P. Chidambaram (@PChidambaram_IN) December 28, 2021
Advertisement
ಎಫ್‌ಸಿಆರ್‌ಎ ನೋಂದಣಿಯ ನವೀಕರಣಕ್ಕಾಗಿ ಮಿಷನರೀಸ್ ಆಫ್ ಚಾರಿಟಿಯು ನೀಡಿದ್ದ ಅರ್ಜಿಯನ್ನು ಡಿಸೆಂಬರ್ 25ರಂದು ಗೃಹ ಸಚಿವಾಲಯ ನಿರಾಕರಿಸಿತ್ತು. ಈ ಬಗ್ಗೆ ಚಿದಂಬರಂ ಟ್ವೀಟ್ ಮಾಡಿ, ಎಂಎಚ್‍ಎ ತನ್ನ ಕೌಶಲಗಳನ್ನು ಕೋಮು ಹಿಂಸಾಚಾರ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಬಳಸಬೇಕೇ ಹೊರತು ಕ್ರಿಶ್ಚಿಯನ್ ಧರ್ಮಾರ್ಥ ಮತ್ತು ಮಾನವೀಯ ಕಾರ್ಯಗಳನ್ನು ನಿಗ್ರಹಿಸಲು ಅಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ
Advertisement
2021ನೇ ವರ್ಷ ಕೊನೆಗೊಳ್ಳುತ್ತಿದ್ದಂತೆ, ಮೋದಿ ಸರ್ಕಾರ ಕ್ರಿಶ್ಚಿಯನ್ನರನ್ನು ಮತ್ತೊಮ್ಮೆ ಗುರಿಯಾಗಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಬಿಜೆಪಿ ತಮ್ಮ ಬಹುಮತದ ಅಜೆಂಡಾವನ್ನು ಮುಂದುವರೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.