ನವದೆಹಲಿ: ಭಾರತೀಯ ಸೇನೆ (Indian Army) ಮತ್ತು ಚೀನಾ (China) ಸೇನಾ ಪಡೆಗಳ ನಡುವೆ ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಎಲ್‌ಎಸಿ (LAC) ಬಳಿ ಡಿಸೆಂಬರ್ 9 ರಂದು ನಡೆದ ಸಂಘರ್ಷ, ಎರಡೂ ದೇಶಗಳ ಗಡಿ ಬಿಕ್ಕಟ್ಟನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಈ ಕುರಿತು ಚರ್ಚೆ ನಡೆಸಬೇಕು ಎನ್ನುವ ವಿಪಕ್ಷಗಳ ಬೇಡಿಕೆಗೆ ಸಂಸತ್ತಿನಲ್ಲಿ ಉಂಟಾದ ಘರ್ಷಣೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಖಂಡಿಸಿದ್ದಾರೆ.
ऐसा प्रतीत होता है कि मोदी सरकार की “लाल आँख” पर चीनी चश्मा लग गया है।
क्या भारतीय संसद में चीन के विरूद्ध बोलने की अनुमति नहीं है ?
— Mallikarjun Kharge (@kharge) December 15, 2022
Advertisement
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಖರ್ಗೆ ಅವರು, `ಮೋದಿ ಸರ್ಕಾರದ (Modi Government) ಕೆಂಗಣ್ಣು ಚೀನಾ ಕನ್ನಡಕದಿಂದ ಮುಚ್ಚಲ್ಪಟ್ಟಿದಂತೆ ತೋರುತ್ತದೆ. ಭಾರತದ ಸಂಸತ್ತಿನಲ್ಲಿ ಚೀನಾದ ವಿರುದ್ಧ ಮಾತನಾಡಲು ಅವಕಾಶವಿಲ್ಲವೇ?’ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ವಿರೋಧ ಪಕ್ಷಗಳು ಗಡಿಯಲ್ಲಿ ಚೀನಾದ ನಡೆಗೆ ಪ್ರತಿಯಾಗಿ ಆಕ್ರಮಣಕಾರಿ ನೀತಿಯನ್ನು ಅನುಸರಿಸಲು ಯೋಜಿಸಿವೆ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?
Advertisement
Advertisement
ಈ ವಾರ ಸಂಸತ್ತಿನಲ್ಲಿ ಉಭಯ ಸದನಗಳು `ಭಾರತ-ಚೀನಾ ಗಡಿ ಪರಿಸ್ಥಿತಿ’ (India China Border Clash) ಕುರಿತು ಚರ್ಚಿಸಬೇಕೆನ್ನುವ ಪ್ರತಿಪಕ್ಷಗಳ ಮನವಿ ತಿರಸ್ಕರಿಸಿದವು. ಸ್ಪೀಕರ್ ಚರ್ಚೆಗೆ ಮನವಿಯನ್ನು ತಿರಸ್ಕರಿದ ನಂತರ ಸೋನಿಯಾಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ (Congress) ಸಂಸದರು ಸಭಾತ್ಯಾಗ ಮಾಡಿದರು. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷ – ಅರುಣಾಚಲ ಪ್ರದೇಶದ ಮೇಲೆ ಡ್ರ್ಯಾಗನ್ ಕಣ್ಣು ಹಾಕಿದ್ದು ಯಾಕೆ?
Advertisement
ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದಲ್ಲಿ ತವಾಂಗ್‌ನ ವಾಸ್ತವಿಕ ನಿಯಂತ್ರಣ ರೇಖೆಯ (LAC) ಬಳಿ ಚೀನಿಯರು ಭೂಸ್ವಾಧೀನಕ್ಕೆ ಯತ್ನಿಸಿದ್ದು, ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದರು. ಭಾರತೀಯ ಸೇನಾ ಕಮಾಂಡರ್‌ಗಳ ಸಮಯೋಚಿತ ಹಸ್ತಕ್ಷೇಪದಿಂದಾಗಿ ಚೀನಾ ಸೈನಿಕರು ತಮ್ಮ ಸ್ಥಾನಕ್ಕೆ ಮರಳಿದರು. ಅಲ್ಲದೇ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಕೇಳಿಕೊಂಡರು.
ಈಗಾಗಲೇ ಗಡಿಯಲ್ಲಿ ಭಾರತೀಯ ಸೇನೆ ಯುದ್ಧದ ಗಸ್ತು ಹೆಚ್ಚಿಸಿದ್ದು, ಫೈಟರ್‌ಜೆಟ್‌ಗಳ ಮೂಲಕ ಪರಿಸ್ಥಿತಿ ವೀಕ್ಷಣೆ ಮಾಡಿದೆ.