ನವದೆಹಲಿ: ಭಾರತ ಸರ್ಕಾರ ಪೆಗಾಸಸ್ ಸ್ಪೈವೇರ್ ಖರೀದಿಸಿದ್ದಾಗಿ ವಿದೇಶಿ ವರದಿಗಳು ತಿಳಿಸಿದ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಸರ್ಕಾರ ದೇಶದ್ರೋಹ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಸ್ರೇಲ್ ಜೊತೆಗಿನ ಒಪ್ಪಂದದ ಭಾಗವಾಗಿ ಭಾರತ ಸರ್ಕಾರ 2017ರಲ್ಲಿ ಪೆಗಾಸಸ್ ಗೂಢಾಚಾರಿಕೆ ತಂತ್ರಾಂಶ ಖರೀದಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಈ ಕುರಿತು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 2017ರಲ್ಲಿ ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದದ ವೇಳೆ ಪೆಗಾಸಸ್ ಖರೀದಿ – ನ್ಯೂಯಾರ್ಕ್ ಟೈಮ್ಸ್ ವರದಿ
मोदी सरकार ने हमारे लोकतंत्र की प्राथमिक संस्थाओं, राज नेताओं व जनता की जासूसी करने के लिए पेगासस ख़रीदा था। फ़ोन टैप करके सत्ता पक्ष, विपक्ष, सेना, न्यायपालिका सब को निशाना बनाया है। ये देशद्रोह है।
मोदी सरकार ने देशद्रोह किया है। pic.twitter.com/OnZI9KU1gp
— Rahul Gandhi (@RahulGandhi) January 29, 2022
ರಾಜ್ಯ ನಾಯಕರು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು, ಮೋದಿ ಸರ್ಕಾರ ಪೆಗಾಸಸ್ ಖರೀದಿಸಿದೆ. ಅವರು ಆಡಳಿತ ಪಕ್ಷ, ಪ್ರತಿಪಕ್ಷ ಹಾಗೂ ನ್ಯಾಯಾಲಯಗಳ ಫೋನ್ ಸಂಭಾಷಣೆ ಮಾಹಿತಿಗಳನ್ನು ಕದಿಯಲು ಈ ತಂತ್ರ ರೂಪಿಸಿದ್ದಾರೆ. ಇದು ದೇಶದ್ರೋಹ. ಸರ್ಕಾರ ದೇಶದ್ರೋಹ ಮಾಡಿದೆ ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ. ಇದನ್ನೂ ಓದಿ: ಮತ ಎಣಿಕೆಯವರೆಗೆ ಮಾತ್ರ ಸಮಾಜವಾದಿ, ರಾಷ್ಟ್ರೀಯ ಲೋಕದಳದ ಮೈತ್ರಿ: ಅಮಿತ್ ಶಾ
ಕಾಂಗ್ರೆಸ್‌ನ ಇತರ ನಾಯಕರು ಕೂಡಾ ವರದಿ ಆಧರಿಸಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.