– 5 ದಿನ, 31 ನಾಯಕರ ಭೇಟಿ ಮಾಡಿದ ಪ್ರಧಾನಿ
ನವದೆಹಲಿ: ಗಯಾನಾ (Guyana) ಭೇಟಿ ನೀಡಿದ್ದ ಪ್ರಧಾನಿ ಮೋದಿ (PM Modi) ಅಧ್ಯಕ್ಷ ಇರ್ಫಾನ್ ಅಲಿಗೆ (Mohamed Irfaan Ali) ಚನ್ನಪಟ್ಟಣ ಗೊಂಬೆಯನ್ನು (Channapatna Doll) ಉಡುಗೊರೆಯಾಗಿ ನೀಡಿದ್ದಾರೆ.
5 ದಿನಗಳ ಕಾಲ ಮೂರು ದೇಶಗಳ ಪ್ರವಾಸ ಮುಗಿಸಿ ಶುಕ್ರವಾರ (ನ.22) ಭಾರತಕ್ಕೆ ಮರಳಿದ ಮೋದಿ, ಗಯಾನಾ, ಬೆಜ್ರಿಲ್ ಹಾಗೂ ನೈಜೀರಿಯಾ ಪ್ರವಾಸ ಮಾಡಿದ್ದು, ಒಟ್ಟು 31 ನಾಯಕರನ್ನು ಭೇಟಿ ಮಾಡಿದ್ದಾರೆ.ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ, ಭರತ್ ಬೊಮ್ಮಾಯಿ, ಅನ್ನಪೂರ್ಣ ತುಕಾರಾಂಗೆ ಮುನ್ನಡೆ
ಭೇಟಿಯಾದ ಗಣ್ಯರಿಗೆ ಭಾರತದ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಉಡುಗೊರೆಗಳನ್ನು ನೀಡಿದ್ದಾರೆ. ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರ ಮಗ ಲಿಲನ್ ಅಲಿಗೆ ಗೊಂಬೆಗಳಿಗೆ ಪ್ರಸಿದ್ಧವಾದ ಕರ್ನಾಟಕದ ಚನ್ನಪಟ್ಟಣದ ಮರದ ಆಟಿಕೆ ರೈಲನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕರ್ನಾಟಕದ್ದು ಮಾತ್ರವಲ್ಲದೇ ಮಹಾರಾಷ್ಟ್ರದ 8, ಜಮ್ಮು ಕಾಶ್ಮೀರದಿಂದ 5, ತಮಿಳುನಾಡು, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಲಡಾಖ್‌ನ ತಲಾ ಒಂದೊಂದು ಉಡುಗೊರೆಗಳನ್ನು ಮೋದಿ ವಿವಿಧ ನಾಯಕರಿಗೆ ನೀಡಿದ್ದಾರೆ.ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ, ಭರತ್ ಬೊಮ್ಮಾಯಿ, ಅನ್ನಪೂರ್ಣ ತುಕಾರಾಂಗೆ ಮುನ್ನಡೆ