ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ತಾಯಿಯನ್ನು ಕಳೆದುಕೊಂಡರೂ ಮತ್ತೆ ಕೆಲಸ ಮಾಡ್ತಿದ್ದಾರೆ. ಇದು ಮೋದಿ ಅವರ ಬದ್ಧತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
Advertisement
ಬೆಂಗಳೂರಿನ (Bengaluru) ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮೋದಿ ಅವರ ತಾಯಿ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ರೆ ಇದೊಂದು ದುಃಖದ ಸಂಗತಿ. ಮೋದಿ ಅವರು ಸಿಎಂ ಆಗಿದ್ದಾಗಿನಿಂದ, ಪಿಎಂ (Prime Minister) ಆಗಿದ್ದಾಗಲೂ ತಮ್ಮ ತಾಯಿಗೆ ತೋರಿಸಿದ ಗೌರವ, ಪ್ರೀತಿ ದೊಡ್ಡದು. ಹಾಗೆಯೇ ತಾಯಿ ತಮ್ಮ ಮಗನಿಗೆ ತೋರಿಸುತ್ತಿದ್ದ ಮಮತೆ, ವಾತ್ಸಲ್ಯ ನೋಡುವ ಭಾಗ್ಯವೂ ನಮಗೆ ಸಿಕ್ಕಿತ್ತು ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಮೋದಿ ಸಹೋದರರು
Advertisement
Advertisement
`ನನ್ನ ತಾಯಿ ಸರಳ, ಆದ್ರೆ ಅಷ್ಟೇ ವಿಶೇಷ’ ಎಂದು ಮೋದಿ ಅನೇಕ ಬಾರಿ ಹೇಳ್ತಿದ್ರು. ಇದು ವಿಶೇಷವಾದ ತಾಯಿ-ಮಗನ ಸಂಬಂಧ. ಮೋದಿ ದೇಶಕ್ಕೆ ಪ್ರಧಾನಿಯಾದರೂ, ತಾಯಿಗೆ ಮಗನಾಗಿಯೇ ಇದ್ದರು. ತಾಯಿಯಿಂದ ದೇಶಭಕ್ತಿ, ಆದರ್ಶ ಎಲ್ಲವನ್ನೂ ಮೈಗೂಡಿಸಿಕೊಂಡು ಬೆಳೆದಿದ್ದಾರೆ. ಆ ಎಲ್ಲಾ ಗುಣಗಳನ್ನು ನಾವು ಮೋದಿ ಅವರನ್ನು ನೋಡಬಹುದಾಗಿದೆ. ಮೋದಿ ಅವರು ತಾಯಿಯನ್ನ ಭೇಟಿಯಾದಾಗ ಊಟ ಮಾಡಿಸಿ ಪ್ರೀತಿ ಕೊಟ್ಡಿದ್ದಾರೆ. ಈ ವಯಸ್ಸಿನಲ್ಲೂ ತಾಯಿ ತಮ್ಮ ಪ್ರೀತಿ ತೋರಿಸಿದ್ದಾರೆ. ಮೋದಿ ತಾಯಿ ಮಡಿಲಲ್ಲಿ ಕೂತು, ಅವರ ಭಾವನೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಸ್ಮರಿಸಿದ್ದಾರೆ.
Advertisement
ಹೀರಾಬೆನ್ (Heeraben Modi) ಮೋದಿ ಅವರನ್ನು ಆದರ್ಶ ವ್ಯಕ್ತಿಯಾಗಿ ಬೆಳೆಸಿದ್ದಾರೆ. ಹೀರಾಬೆನ್ ಅವರೂ ಸಹ ಕರ್ಮ ಯೋಗಿ, ಅದೇ ರೀತಿ ಮೋದಿಯೂ ಹಾಗೇ ಕರ್ಮಯೋಗಿ ಆಗಿದ್ದಾರೆ. ತಾಯಿ ಅಂತ್ಯಕ್ರಿಯೆ ಮಾಡಿ ಮತ್ತೆ ಕೆಲಸ ಮಾಡ್ತಿದ್ದಾರೆ. ಇದು ಅವರ ಕೆಲಸದ ಬದ್ಧತೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯಿಂದ 113 ಬಾರಿ ಭದ್ರತಾ ನಿಯಮ ಉಲ್ಲಂಘನೆ: CRPF
ಮೀಸಲಾತಿ (Reservation) ಮಾಹಿತಿ ಬಿಡುಗಡೆ ಮಾಡ್ತೀನಿ: ಅಮಿತ್ ಶಾ (Amit Shah) ಕಾರ್ಯಕ್ರಮದ ನಂತರ ಎಲ್ಲರ ಸಭೆ ಮಾಡಿ, ಮೀಸಲಾತಿ ಬಗ್ಗೆ ಮಾಹಿತಿ ಸಂಪೂರ್ಣವಾಗಿ ಮಧ್ಯಾಹ್ನ ಬಿಡುಗಡೆ ಮಾಡ್ತೀನಿ. ಹಿಂದುಳಿದ ವರ್ಗಗಳ ಆಯೋಗ ಕೊಟ್ಟಿರುವ ವರದಿ, ಅದರ ಜಾರಿ ಬಗ್ಗೆ ಸಂಬಂಧ ಪಟ್ಟವರ ಬಳಿ ಚರ್ಚೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. ಸಂಪುಟದಲ್ಲಿ ಮೀಸಲಾತಿ ಬಗ್ಗೆ ತೆಗೆದುಕೊಂಡ ಎಲ್ಲಾ ಮಾಹಿತಿಗಳನ್ನ ಮಧ್ಯಾಹ್ನ ಬಿಡುಗಡೆ ಮಾಡ್ತೀನಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.