ಮೈಸೂರು: ಪ್ರಧಾನಿ ಮೋದಿ ಪದೆ ಪದೆ ನನ್ನ ಹೆಸರು ಹೇಳುತ್ತಿರುವುದಕ್ಕೆ ನನಗೆ ಸಂತೋಷ ಆಗಿದೆ. ಮೋದಿಗೆ ನನ್ನನ್ನ ಕಂಡರೆ ಭಯ ಇದೆ. ಅದಕ್ಕೆ ಅವರು ಯಾವಾಗಲೂ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಈ ಮಟ್ಟಕ್ಕೆ ಇಳಿದಿದ್ದು ಬೇಸರ ತರಿಸಿದೆ. ವಾಚ್ ಬಗ್ಗೆ ಮಾತನಾಡುವ ಮೋದಿ ಸೂಟ್ ಬಗ್ಗೆ ಮಾತನಾಡಲಿ. ಆ ಸೂಟ್ ಎಲ್ಲಿಂದ ಬಂತು ಹೇಗೆ ಬಂತು ಟ್ಯಾಕ್ಸ್ ಕಟ್ಟಿದ್ದಾರಾ ಅಂತ ಹೇಳಲಿ. ಫೋಟೋದಲ್ಲಿ ನಾನೇನು ವಾಚ್ ಕಟ್ಟಿಸಿಕೊಳ್ಳುತ್ತಿದ್ದೀನಾ? ಅದಕ್ಕೆ ದಾಖಲೆ ಇದ್ರೆ ಕೊಡಿ. ಆ ವಾಚ್ ಎಲ್ಲಿಂದ ಬಂತು ಹೇಗೆ ಬಂತು ಅಂತ ಈಗಾಗಲೇ ದಾಖಲೆ ಕೊಟ್ಟಾಗಿದೆ. ಈಗಲೂ ಅದನ್ನೆ ಮಾತನಾಡುತ್ತಾರೆ ಅಂದ್ರೆ ಅವರಿಗೆ ಯಾವುದೇ ವಿಷಯ ಇಲ್ಲ. ಅವರಿಗೆ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಅದಕ್ಕೆ ಅವರು ಹೀಗೆ ಮಾತನಾಡುತ್ತಿದ್ದಾರೆ ಅಂತ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.
Advertisement
Advertisement
ನಾನೇ ಸಿಎಂ: ನಾನೂ ಯುದ್ಧಭೂಮಿಯ ಸೇನಾಧಿಪತಿ ಇದ್ದಂತೆ. ಸೇನಾಧಿಪತಿ ಧೈರ್ಯದಿಂದ ಮುನ್ನುಗ್ಗಿದ್ದರೆ ಹಿಂದೆ ಇರುವವರು ಧೈರ್ಯದಿಂದ ಮುನ್ನುಗುತ್ತಾರೆ. ನಾನೂ ಈ ಚುನಾವಣೆಯ ಕ್ಯಾಪ್ಟನ್. ನನಗೆ ಯಾವುದೇ ಟೆನ್ಷನ್, ಆತಂಕ ಇಲ್ಲ. ಗೆಲ್ಲುವ ಕಾನ್ಫಿಡೆನ್ಸ್ ನನಗಿದೆ. ಕ್ಯಾಪ್ಟನ್ ನರ್ವಸ್ ಆದ್ರೆ, ನನ್ನ ಸೈನಿಕರು ಕೂಡ ನರ್ವಸ್ ಆಗ್ತಾರೆ. ನಾವೂ ಗೆದ್ದೆ ಗೆಲ್ಲುತ್ತೇವೆ. ಮತ್ತೇ ನಾನೂ ಮುಖ್ಯಮಂತ್ರಿ ಆಗುತ್ತೇನೆ ಅಂತ ಭವಿಷ್ಯ ನುಡಿದ್ರು.
Advertisement
ಜೆಡಿಎಸ್ ಪ್ರಣಾಳಿಕೆ ಒಪ್ಪುವ ಪಕ್ಷದೊಂದಿಗೆ ಮೈತ್ರಿ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಹೋ… ಅವರೀಗ ಕಿಂಗ್ ಮೇಕರಾ? ಹಾಗಾದ್ರೆ ಕಿಂಗ್ ಅಲ್ವ? ಅಂತ ವ್ಯಂಗ್ಯವಾಡಿದ ಸಿಎಂ, ಮೊದಲೆಲ್ಲ ಗೆದ್ದೇ ಬಿಡುತ್ತೇವೆ ಅಂತಿದ್ದರು. ಈಗ ಏನಾಯ್ತು ಅಂತ ಪ್ರಶ್ನಿಸಿದ್ರು.