ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಈಗಲೂ ನಂ.1 ಜನಪ್ರಿಯ ನಾಯಕ(Most Popular World Leader) ಪಟ್ಟದಲ್ಲೇ ಮುಂದುವರಿದಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಜನರು ಮೆಚ್ಚಿದ ಗಣ್ಯರ ಪೈಕಿ ಜಗತ್ತಿನಲ್ಲೇ ನಂ.1 ಎಂಬ ಪಟ್ಟದಲ್ಲಿ ಮುಂದುವರಿಯುವುದರ ಜೊತೆಗೆ ಮೋದಿ ಜನಪ್ರಿಯತೆ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಮಾರ್ನಿಂಗ್ ಕನ್ಸಲ್ಟ್(Morning Consult) ಹೇಳಿದೆ.
Advertisement
Yet again PM Shri @narendramodi tops the global podium.
Approval ratings of PM Modi are the highest among all major world leaders. pic.twitter.com/Y97GCXRmFB
— BJP (@BJP4India) November 24, 2022
Advertisement
22 ದೇಶಗಳ ನಾಯಕರ ಸಾಧನೆ ಆಧರಿಸಿ ಸಂಸ್ಥೆ ಆನ್‌ಲೈನ್ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಶೇ.77ರಷ್ಟು ಅಪ್ರೂವಲ್ ರೇಟಿಂಗ್‌ನೊಂದಿಗೆ ಜಗತ್ತಿನಲ್ಲೇ ಅತಿ ಹೆಚ್ಚು ಅಂಕ ಪಡೆದ ದೇಶದ ನಾಯಕರಾಗಿ ಮೋದಿ ಹೊರಹೊಮ್ಮಿದ್ದಾರೆ.
Advertisement
ಸತತ 8 ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿರುವ ಮೋದಿ ಕಳೆದ ಆಗಸ್ಟ್ ಮತ್ತು ಜನವರಿಯಲ್ಲಿ ಪ್ರಕಟಗೊಂಡಿದ್ದ ವರದಿಯಲ್ಲೂ ಮೊದಲ ಸ್ಥಾನವನ್ನು ಪಡೆದಿದ್ದರು. ಮೋದಿಯವರಿಗೆ ಜನವರಿಯಲ್ಲಿ ಶೇ.72, ಆಗಸ್ಟ್‌ನಲ್ಲಿ ಶೇ.75ರಷ್ಟು ಅಪ್ರೂವಲ್ ರೇಟಿಂಗ್ ಸಿಕ್ಕಿತ್ತು. ಇದನ್ನೂ ಓದಿ: ಬಾವ್ಲಾ ರ‍್ಯಾಲಿ ವೇಳೆ ಮೋದಿಗೆ ಭದ್ರತಾ ಲೋಪ – ನಿಯಮ ಉಲ್ಲಂಘಿಸಿ ಡ್ರೋನ್ ಹಾರಿಸಿದ ಮೂವರು ವಶಕ್ಕೆ
Advertisement
ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೆಜಿಲ್, ಕೆನಡಾ, ಜೆಕ್ ರಿಪಬ್ಲಿಕ್, ಫ್ರಾನ್ಸ್, ಜರ್ಮನಿ, ಭಾರತ, ಐರ್ಲೆಂಡ್, ಇಟಲಿ, ಜಪಾನ್, ಮೆಕ್ಸಿಕೋ, ನೆದರ್‌ಲ್ಯಾಂಡ್, ನಾರ್ವೆ, ಪೋಲೆಂಡ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕ ದೇಶವನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿತ್ತು.
ಟಾಪ್ 5 ಸ್ಥಾನದಲ್ಲಿ ಯಾರಿದ್ದಾರೆ?
ನರೇಂದ್ರ ಮೋದಿ(ಶೇ.77), ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಥೊನಿ ಅಲ್ಬನೀಸೆ (ಶೇ.56), ಅಮೆರಿಕದ ಅಧ್ಯಕ್ಷ ಜೋ ಬೈಡನ್(ಶೇ.41), ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ(ಶೇ.38), ಬ್ರಿಟನ್ ಪ್ರಧಾನಿ ರಿಷಿ ಸುನಕ್(ಶೇ.36), ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ (ಶೇ.23) ಅನಕ್ರಮವಾಗಿ ಮೊದಲ 5 ಸ್ಥಾನವನ್ನು ಪಡೆದಿದ್ದಾರೆ.