ಉಡುಪಿ: ಏಪ್ರಿಲ್ 14ರ ಸಂಜೆ 4ಕ್ಕೆ ಮಂಗಳೂರಿನ (Mangaluru) ಗೋಲ್ಡ್ ಫಿಂಚ್ (Gold Finch) ಮೈದಾನದಲ್ಲಿ ಪ್ರಧಾನಿ ಮೋದಿ (Narendra Modi) ಸಮಾವೇಶ ಉದ್ದೇಶಿಸಿ ಮಾತನಾಡುತ್ತಾರೆ. ಲಕ್ಷ ಸಂಖ್ಯೆಯಲ್ಲಿ ಕಾರ್ಯಕರ್ತರು, ಮತದಾರರು ಭಾಗಿಯಾಗಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದರು.
ಈ ಕುರಿತು ಉಡುಪಿಯಲ್ಲಿ (Udupi) ಮಾತನಾಡಿದ ಅವರು, ಪ್ರಧಾನಿ ಕಾರ್ಯಕ್ರಮದಿಂದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬರಲಿದೆ. ಪ್ರಧಾನಿ ಎಲ್ಲಾ ಜಿಲ್ಲೆಗೆ ಬಂದು ಮತದಾರರಿಂದ ಆಶೀರ್ವಾದ ಪಡೆಯಬೇಕು ಎಂಬ ಆಕಾಂಕ್ಷೆ ಕಾರ್ಯಕರ್ತರಲ್ಲಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ವಿಶ್ವದಿಂದ ಸಹಾಯ ಕೇಳಿತ್ತು, ಈಗ ಭಾರತ ವಿಶ್ವಕ್ಕೆ ಸಹಾಯ ಮಾಡುತ್ತಿದೆ: ಮೋದಿ
Advertisement
Advertisement
ಈಶ್ವರಪ್ಪ (KS Eshwarappa) ನಮ್ಮ ಕಟ್ಟಾಳು ಇಡೀ ರಾಜ್ಯದಲ್ಲಿ ಬಿಜೆಪಿ (BJP) ಬೆಳವಣಿಗೆಗೆ ಅವರೂ ಕಾರಣರಾದವರು. ಸಹಜವಾಗಿಯೇ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹಿರಿಯರು ಅವರ ಜೊತೆ ಮಾತನಾಡುತ್ತಾರೆ. ಇದು ವಿಚಾರಧಾರೆಗಳ ನಡುವಿನ ಚುನಾವಣೆ. ಇಲ್ಲಿ ಜಾತಿ ರಾಜಕೀಯ ಇಲ್ಲ. ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಎಂದು ಹೇಳಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಫೈನಲ್
Advertisement
ದಿಂಗಾಲೇಶ್ವರ ಶ್ರೀ ವಿವಾದದ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ ಬಂದಾಗ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ದಿಂಗಾಲೇಶ್ವರ ಸ್ವಾಮಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಇದರ ಲಾಭ ಪಡೆಯುತ್ತಿದೆ ಎಂದರೆ ಆ ಪಕ್ಷದ ವೈಫಲ್ಯತೆ ಕಾಣುತ್ತದೆ. ಅಭ್ಯರ್ಥಿ ಇಲ್ಲದ ಕಾರಣ ಇದ್ದಬದ್ದವರ ಕೈಕಾಲು ಹಿಡಿಯುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯವಾದ ಸ್ಥಿತಿಯಲ್ಲಿದೆ. ಅಧಿಕಾರ ಇದ್ದರೂ ಲೋಕಸಭಾ ಚುನಾವಣೆ ಗೆಲ್ಲಲು ಆಗುತ್ತಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ಗೆ ʻZ’ ಕೆಟಗರಿ ಭದ್ರತೆ
Advertisement
ರಾಜ್ಯದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲುತ್ತದೆ. ಕಾಂಗ್ರೆಸ್ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಉಡುಪಿ ಚಿಕ್ಕಮಗಳೂರಿನಲ್ಲಿ ಬಿಜೆಪಿಯಲ್ಲಿ ಇದ್ದ ಹೆಗಡೆಯನ್ನು ತೆಗೆದುಕೊಂಡರು. ರಾಜ್ಯದಲ್ಲಿ ಆಡಳಿತ ವೈಫಲ್ಯ ಆಗಿದೆ. ಅಭಿವೃದ್ಧಿ ಯೋಜನೆ ಇಲ್ಲದ ಭ್ರಷ್ಟಾಚಾರದ ಆಡಳಿತ ರಾಜ್ಯದಲ್ಲಿದೆ. ಯಾವ ಗುಂಪಿಗೆ ಎಷ್ಟು ಪಾಲು ಹಂಚಿಕೊಳ್ಳಬೇಕು ಎಂಬ ತಕರಾರು ಇದೆ. ಡಿಕೆಶಿಗೆ ಎಷ್ಟು ಸೀಟು ಸಿದ್ದರಾಮಯ್ಯನಿಗೆ ಎಷ್ಟು ಸೀಟು ಎಂದು ಚರ್ಚೆ ನಡೆಯುತ್ತಿದೆ. ಯಾವ ಗುಂಪಿಗೆ ಎಷ್ಟು ಕೊಡಬೇಕು ಎಂಬ ಚರ್ಚೆ ಇದೆ. ಮುಳುಗುವವನಿಗೆ ಹುಲ್ಲು ಕಡ್ಡಿ ಸಾಕು ಎಂಬಂತೆ ಕಾಂಗ್ರೆಸ್‌ನ ಸ್ಥಿತಿಯಾಗಿದೆ. ಬೆಂಗಳೂರು ಉತ್ತರ ಕ್ಷೇತ್ರವನ್ನು ಅತಿ ಹೆಚ್ಚು ಮತದಲ್ಲಿ ಬಿಜೆಪಿ ಗೆಲ್ಲುತ್ತದೆ. ಎಲ್ಲಾ ನಾಯಕರು ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್-ಸೌದಿ ಸಭೆಯಲ್ಲಿ ಕಾಶ್ಮೀರ ಗಡಿ ಸಮಸ್ಯೆ ಪ್ರಸ್ತಾಪ – ಪಾಕ್‌ಗೆ ಭಾರತ ನೀಡಿದ ಎಚ್ಚರಿಕೆ ಏನು?