ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಐತಿಹಾಸಿಕ ಗೆಲವು ಸಾಧಿಸಿದ್ದಾರೆ. ಭಾರೀ ಬಹುಮತ ಪಡೆದಿರುವ ಮೋದಿ ಮತ್ತೊಮ್ಮೆ ಪ್ರಮಾಣ ವಚನ ಸ್ವಿಕರಿಸುವುದು ಯಾವಾಗ ಅನ್ನೋದು ಸದ್ಯದ ಕುತೂಹಲವಾಗಿದೆ. ಇಂದು 16ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು ಮಾಡಲಿರುವ ಪ್ರಧಾನಿ ಮೋದಿ ಹೊಸ ಸರ್ಕಾರ ರಚನೆಗೆ ಮುನ್ನುಡಿ ಬರೆಯಲಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಬಳಿಕ ಇತಿಹಾಸ ಸೃಷ್ಟಿಸಿರುವ ಪ್ರಧಾನಿ ಮೋದಿ, ಮತ್ತೊಮ್ಮೆ ಗದ್ದುಗೆ ಹಿಡಿಯಲಿದ್ದಾರೆ. ಪ್ರಚಂಡ ಬಹುಮತ ಪಡೆದ ಮೋದಿ ಪ್ರಮಾಣ ವಚನ ಸ್ವೀಕರಿಸುವುದು ಯಾವಾಗ ಎನ್ನುವ ಕುತೂಹಲ ಸದ್ಯ ದೇಶದ ಜನರಲ್ಲಿ ಮೂಡಿದೆ.
ಅದಕ್ಕೆ ಮುನ್ನಡಿ ಎಂಬಂತೆ ಇಂದು ಪ್ರಧಾನಿ ಮೋದಿ 16 ಲೋಕಸಭೆ ವಿಸರ್ಜನೆ ಶಿಫಾರಸು ಮಾಡಲಿದ್ದಾರೆ. ಇಂದು ಸಂಜೆ ಸಚಿವ ಸಂಪುಟ ಸಭೆ ಕರೆದಿರುವ ಮೋದಿ, ತಮ್ಮ ಸಂಪುಟ ಸಚಿವರೊಂದಿಗೆ ಚರ್ಚಿಸಿ ಲೋಕಸಭೆಯನ್ನು ವಿಸರ್ಜನೆಗೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಿದ್ದಾರೆ. ಜೂನ್ 3 ರವರಗೆ 16 ನೇ ಲೋಕಸಭೆ ಅವಧಿ ಇದ್ದು ಪ್ರಧಾನಿ ಶಿಫಾರಸು ಪರಿಗಣಿಸಿ ಲೋಕಸಭೆ ವಿಸರ್ಜನೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಲಿದ್ದಾರೆ. ಇದನ್ನೂ ಓದಿ: ಚೌಕಿದಾರನಿಗೆ ಪ್ರಜೆಗಳ ಪ್ರೀತಿ – ದೇಶಾದ್ಯಂತ ಈ ಬಾರಿಯೂ ನಮೋ ಸುನಾಮಿ
ರಾಷ್ಟ್ರಪತಿಗಳ ಅಂಕಿತ ಬಳಿಕ ಲೋಕಸಭೆ ವಿಸರ್ಜನೆ ಆಗಲಿದ್ದು ಬಳಿಕ ಕೇಂದ್ರ ಚುನಾವಣಾ ಆಯೋಗದ ಮೂವರು ಆಯುಕ್ತರು 17 ನೇ ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ ಹಾಗೂ ಅಂಕಿ ಅಂಶಗಳ ಮಾಹಿತಿ ನೀಡಲಿದ್ದಾರೆ. ಇದಾದ ಬಳಿಕ ಹೊಸ ಸರ್ಕಾರದ ರಚನೆಗೆ ಚಾಲನೆ ಸಿಗಲಿದೆ.
ಇತಿಹಾಸ ಮರುಸೃಷ್ಠಿಸಲು ಪ್ಲಾನ್!:
ಪ್ರಧಾನಿ ಮೋದಿ ಇದೇ ಮೇ 26 ಕ್ಕೆ ಪ್ರಮಾಣ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಅಂದು ಈ ಅವಧಿಯ ಮೊದಲ ಮನ್ ಕೀ ಬಾತ್ ಪ್ರಸಾರವಾಗಲಿದೆಯಂತೆ. ಮನ್ ಕೀ ಬಾತ್ ಮೂಲಕ ಅಂದೇ ದೇಶನ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ದೇಶದ ಮಧ್ಯಮ ವರ್ಗ, ಯುವ ಜನಾಂಗವನ್ನ ಮೋದಿ ಆಕರ್ಷಿಸಿದ್ದು ಹೇಗೆ?
ಅಷ್ಟಕ್ಕೂ ಮೋದಿ ಮೇ 26 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿಕ್ಕೂ ಕಾರಣ ಇದೆ. ಕಳೆದ ಅವಧಿಯಲ್ಲಿ ಬಹಮತ ಪಡೆದಿದ್ದ ಮೋದಿ ಮೇ 26, 2014 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಹಾಗಾಗೀ ಈ ಬಾರಿಯೂ ಅಂದೇ ಪ್ರಮಾಣ ವಚನ ಸ್ವೀಕರಿಸಬೇಕು ಎಂಬುದು ಮೋದಿ ಅಭಿಲಾಷೆ ಎನ್ನಲಾಗಿದ್ದು ಅಂತರಾಷ್ಟ್ರೀಯ ಗಣ್ಯರ ಬರುವ ನೀರಿಕ್ಷೆಗಳಿದ್ದು ದಿನಾಂಕಗಳು ಹೊಂದಾಣಿಕೆಯಾದಲ್ಲಿ ಮೇ 26 ರಂದು ಎರಡನೇ ಅವಧಿಗೆ ಮೋದಿ ಪ್ರಧಾನಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
https://www.youtube.com/watch?v=GAofgO5Sti8