ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಇದೀಗ ಕೇಂದ್ರ ಸಚಿವ ಸಂಪುಟ ಕೂಡ ಪುನಾರಚನೆಯಾಗುತ್ತಿದೆ. ನಾಳೆ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಸಂಪುಟ ಪುನಾರಚನೆ ಆಗ್ತಿದೆ.
9 ಸಚಿವರು ಸಂಪುಟದಿಂದ ಔಟ್ ಆಗಲಿದ್ದಾರೆ. ಹೊಸದಾಗಿ ಸುಮಾರು 15 ಮಂದಿ ಸಂಪುಟ ಸೇರುತ್ತಿದ್ದು, 16 ಸಚಿವರ ಖಾತೆ ಬದಲಾಗುತ್ತಿದೆ. 6 ರಾಜ್ಯ ಸಚಿವರಿಗೆ ಬಡ್ತಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಸಂಪುಟದಿಂದ ಕೈಬಿಡುವ ಸಚಿವರ ಜೊತೆ ಅಮಿತ್ ಶಾ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎನ್ನಲಾಗಿದೆ.
Advertisement
ಇದನ್ನೂ ಓದಿ: ಸಿದ್ದು ಸಂಪುಟಕ್ಕೆ ಫೈನಲ್ ಸರ್ಜರಿ: ಮೂವರಿಗೆ ಸಚಿವ ಸ್ಥಾನ ಸಿಗೋದರ ಹಿಂದೆ ಇರೋ ಲೆಕ್ಕಾಚಾರ ಏನು?
Advertisement
ಹಾಗಿದ್ರೆ ಕರ್ನಾಟಕದಿಂದ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಬಹುದು ಅನ್ನೋ ಲೆಕ್ಕಾಚಾರವನ್ನ ನೋಡೋದಾದ್ರೆ ಧಾರವಾಡ ಸಂಸದ ಪ್ರಹ್ಲಾದ್ ಜೋಷಿ,
ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಹಿಂದೆ ಬಳ್ಳಾರಿ ಸಂಸದ ಶ್ರೀರಾಮುಲುಗೆ ಸ್ಥಾನ ಸಿಗಬಹುದು ಎಂದು ಹೇಳಲಾಗಿತ್ತು ಆದ್ರೆ ಈಗ ಶ್ರೀರಾಮುಲು ಹೆಸರಿಲ್ಲ ಎನ್ನಲಾಗ್ತಿದೆ.
Advertisement
ಸಂಪುಟ ವಿಸ್ತರಣೆ ಮಾಡಲು ಮೋದಿ ಬಳಸಿದ್ದಾರೆ `ಪಿ’ ಮತ್ತು `ಎನ್’ ಫಾರ್ಮುಲಾ! https://t.co/z7NWWmzaC0#Modi #Cabinet pic.twitter.com/5hwiO40DFZ
— PublicTV (@publictvnews) September 1, 2017
Advertisement
ರಮಾನಾಥ ರೈಗೆ ಸಿಗಬೇಕಿದ್ದ ಗೃಹ ಇಲಾಖೆ ಕೊನೆಕ್ಷಣದಲ್ಲಿ ರಾಮಲಿಂಗಾ ರೆಡ್ಡಿಗೆ ಸಿಕ್ಕಿದ್ದು ಹೇಗೆ? https://t.co/XTBsqcBrfY #Karnataka #RamalingaReddy pic.twitter.com/N9YQjxfmvb
— PublicTV (@publictvnews) September 1, 2017