ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನವದೆಹಲಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ರಫೇಲ್ ಡೀಲ್ ಸಂಬಂಧ ಹೊಸದೊಂದು ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ.
ರಫೇಲ್ ಒಪ್ಪಂದಕ್ಕೂ ಹತ್ತು ದಿನಗಳ ಮೊದಲೇ ಅನಿಲ್ ಅಂಬಾನಿ ಫ್ರಾನ್ಸ್ ರಕ್ಷಣಾ ಇಲಾಖೆಯ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ರಫೇಲ್ ಡೀಲ್‍ಗೆ ಸಹಿ ಹಾಕುವಂತೆ ಮನವಿ ಮಾಡಿದ್ದರು. ಮೋದಿ ಫ್ರಾನ್ಸ್ ಗೆ ಬಂದಾಗ ರಫೇಲ್ ಒಪ್ಪಂದಕ್ಕೆ ಸಹಿ ಹಾಕಲಿದ್ದು, ತಮ್ಮ ಪರ ತಿಳುವಳಿಕೆ ಒಪ್ಪಂದ(ಎಂಒಯು)ಮಾಡುವಂತೆ ಅನಿಲ್ ಅಂಬಾನಿ ಮನವಿ ಮಾಡಿಕೊಂಡಿದ್ದರು ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
Advertisement
Advertisement
ರಫೇಲ್ ಒಪ್ಪಂದ ನಡೆದಿದ್ದು, ರಕ್ಷಣಾ ಸಚಿವರು ಮತ್ತು ಇಲಾಖೆ ಕಾರ್ಯದರ್ಶಿಗೂ ಗೊತ್ತಿಲ್ಲ. ಹೆಚ್‍ಎಎಲ್ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಸಚಿವರು ಹೇಳುತ್ತಾರೆ. ಹಾಗಾದಾರೆ ರಕ್ಷಣಾ ಇಲಾಖೆ ಒಪ್ಪಂದ ವ್ಯವಹಾರ ಅನಿಲ್ ಅಂಬಾನಿಗೆ ತಿಳಿದಿದ್ದು ಹೇಗೆ? ಒಪ್ಪಂದಕ್ಕೂ ಮೊದಲೇ ಅನಿಲ್ ಅಂಬಾನಿ ಫ್ರಾನ್ಸ್ ತೆರಳಿದ್ದು ಹೇಗೆ? ಈ ಸಂಬಂಧ ಇಮೇಲ್ ದಾಖಲೆಯನ್ನು ರಾಹುಲ್ ಗಾಂಧಿ ಬಿಡುಗಡೆ ಮಾಡಿದರು.
Advertisement
ಮೋದಿ ದಲ್ಲಾಳಿ:
ರಫೇಲ್ ಹಗರಣದಲ್ಲಿ ಅನಿಲ್ ಅಂಬಾನಿ ಮತ್ತು ಫ್ರಾನ್ಸ್ ನಡುವೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರಫೇಲ್ ಒಪ್ಪಂದದ ಮಾಹಿತಿಯನ್ನು ಅನಿಲ್ ಅಂಬಾನಿ ನೀಡಿದ್ಯಾರು? ಈ ಮೂಲಕ ಪ್ರಧಾನಿ ಮೋದಿ ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ ಈ ಸಂಬಂಧ ಕೂಡಲೇ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv