ದಾವಣಗೆರೆ: ಉಕ್ರೇನ್ ಯುದ್ಧಭೂಮಿಯಿಂದ 572 ಕನ್ನಡಿಗರನ್ನು ಕರೆತರುವ ಮೂಲಕ ವಿಶ್ವದಾದ್ಯಂತ ಪ್ರಧಾನಿ ನರೇಂದ್ರಮೋದಿ ಅವರ ವರ್ಚಸ್ಸು ಎಷ್ಟಿದೆ ಎಂಬುದು ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುದ್ಧಭೂಮಿಯಲ್ಲಿ ಸೈನಿಕರನ್ನು ಕರೆತರುವುದೇ ಕಷ್ಟಸಾಧ್ಯ. ಅಂತಹದ್ದರಲ್ಲಿ ಸಂಬಂಧವಿಲ್ಲದ ದೇಶದಿಂದ 572 ಕನ್ನಡಿಗರನ್ನು ಹೊರತಂದಿರುವುದು ಸಾಮಾನ್ಯ ಕೆಲಸವಲ್ಲ. ಜೊತೆಗೆ ಇದು ಮೋದಿ ಅವರ ವರ್ಷಸ್ಸು ಹಾಗೂ ಅಂತಾರಾಷ್ಟ್ರೀಯ ಸಂಬಂಧವನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.
Advertisement
Hon’ble @narendramodi ji with your efforts the mortal remains of Naveen Shekharappa Gyangoudar is reaching Bengaluru at 2:45 am on Monday.
Myself and people of Karantaka are grateful to your deep concern. pic.twitter.com/ULq8iQMnU4
— Basavaraj S Bommai (@BSBommai) March 20, 2022
ಅಮೇರಿಕಾ ಕೂಡಾ ತನ್ನ ನಾಗರಿಕರನ್ನು ಕೈ ಬಿಟ್ಟಿದೆ. ಆದರೆ, ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ 572 ಕನ್ನಡಿಗರನ್ನು ವಾಪಾಸ್ ತರಲಾಗಿದೆ. ದುರ್ದೈವ ನವೀನ್ ಒಬ್ಬರು ಮೃತಪಟ್ಟಿದ್ದಾರೆ. ಇದು ಮೋದಿಯವರ ಭಗೀರಥ ಪ್ರಯತ್ನ. ಉಕ್ರೇನ್‍ನಿಂದ ಕರೆತರುವಾಗ ಭಾರತೀಯರಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಇಂಡಿಯನ್ ಫ್ಲ್ಯಾಗ್ ಹಿಡಿದರೆ ಸಾಕು ಸುರಕ್ಷಿತವಾಗಿ ಕಳುಹಿಸಿಕೊಡುತ್ತಿದ್ದರು. ನಾವು ವಿದೇಶಾಂಗ ಸಚಿವರೊಂದಿಗೆ, ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೆವು ಎಂದು ತಿಳಿಸಿದರು. ಇದನ್ನೂ ಓದಿ: ಉಕ್ರೇನ್‍ನಿಂದ 22,500 ವಿದ್ಯಾರ್ಥಿಗಳು ವಾಪಸ್- ಆಪರೇಷನ್ ಗಂಗಾ ಪೂರ್ಣ
Advertisement
ನವೀನ್ ಮೃತಪಟ್ಟಾಗ ಘಟನೆ ನಡೆದಿದ್ದೇ ಒಂದು ಕಡೆ, ನವೀನ್ ಮೃತದೇಹ ಸಂರಕ್ಷಿಸಿ ಇಟ್ಟಿದ್ದೇ ಮತ್ತೊಂದು ಕಡೆ. ಇನ್ನೂ ಶೆಲ್ಲಿಂಗ್ ದಾಳಿ ನಡೆಯುತ್ತಿದ್ದರೂ ಈ ನಡುವೆ ನವೀನ್ ಪಾರ್ಥೀವ ಶರೀರವನ್ನು ತರಲಾಗಿದೆ. ಈಗ ನವೀನ್ ಬಾಡಿ ಹುಟ್ಟೂರು ತಲುಪಿದೆ ಎಂದ ಸಿಎಂ ನವೀನ್ ಸಾವು ನೆನೆದು ಭಾವುಕರಾದರು. ಇದನ್ನೂ ಓದಿ: ಸ್ವಂತ ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ ಲೀಲಾವತಿ