– ವಿಆರ್ ಸಹಾಯದಿಂದ ಈಗ ವರ್ಚುವಲ್ ಪ್ರವಾಸೋದ್ಯಮ ಕೈಗೊಳ್ಳಬಹುದು
ನವದೆಹಲಿ: ಸೈಬರ್ ಕ್ರೈಂ ವಂಚನೆ, ಡಿಜಿಟಲ್ ಅರೆಸ್ಟ್ ಇನ್ನಿತರ ನೆಪದಲ್ಲಿ ಬರುವ ಕರೆಗಳಿಂದ ದೂರವಿರಿ ಎಂದು ಕರ್ನಾಟಕದ ಪ್ರಕರಣವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ (PM Narendra Modi) ಜಾಗೃತಿ ಮೂಡಿಸಿದ್ದಾರೆ.
Advertisement
ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಇಂದು (ಅ.27ರಂದು) ಮನ್ ಕಿ ಬಾತ್ (Mann Ki Baat) ರೇಡಿಯೋ ಕಾರ್ಯಕ್ರಮದ 115 ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.
Advertisement
ದೇಶದಲ್ಲಿ ನಡೆಯುತ್ತಿರುವ ಸೈಬರ್ ಕ್ರೈಂ ವಂಚನೆಯ ಕುರಿತು ಮಾತನಾಡಿದ ಅವರು, ಸೈಬರ್ ಕ್ರೈಂ ವಂಚನೆ, ಡಿಜಿಟಲ್ ಅರೆಸ್ಟ್, ಪೊಲೀಸ್ ತನಿಖೆ ನೆಪದಲ್ಲಿ ವಿಡಿಯೋ ಕಾಲ್, ಪೊಲೀಸ್, ಸಿಬಿಐ, ಇಡಿ ಹೀಗೆ ಇನ್ನಿತರ ನೆಪಗಳನ್ನಿಟ್ಟುಕೊಂಡು ಕಾಲ್ ಮಾಡುತ್ತಾರೆ. ಕರ್ನಾಟಕದ ಪ್ರಕರಣ ಉಲ್ಲೇಖಿಸಿ, ನಿಮ್ಮ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ. ಭಯದ ವಾತಾವರಣ ನಿರ್ಮಾಣ ಮಾಡಿ, ನಿಮ್ಮನ್ನು ಹೆದರಿಸುತ್ತಾರೆ. ಜೊತೆಗೆ ಸಮಯದ ಒತ್ತಡ ಹಾಕಿ ಬಂಧನದ ಆತಂಕ ನಿರ್ಮಿಸುತ್ತಾರೆ ಎಂದು ತಿಳಿಸಿದರು.ಇದನ್ನೂ ಓದಿ: ದೀಪಾವಳಿ ಕೊಡುಗೆ – 699 ರೂ.ಗೆ ಸಿಗಲಿದೆ ಜಿಯೋಭಾರತ್ 4ಜಿ ಫೋನ್
Advertisement
Advertisement
ಡಿಜಿಟಲ್ ಅರೆಸ್ಟ್ ವಂಚನೆಗೆ ಎಲ್ಲ ವಯಸ್ಸಿನ ಜನರಿದ್ದಾರೆ. ಈ ಮೂಲಕ ತಮ್ಮ ದುಡಿಮೆಯ ಹಣವನ್ನು ಕಳೆದುಕೊಳ್ಳುತ್ತಾರೆ. ಇಂತಹ ಕಾಲ್ ಬಂದರೆ ಆತಂಕಗೊಳ್ಳಬೇಡಿ. ನಿಮ್ಮ ಯಾವುದೇ ಮಾಹಿತಿಯನ್ನು ನೀಡಬೇಡಿ. ಅಂತಹ ಸಮಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಳ್ಳಿ. ಸರ್ಕಾರಿ ತನಿಖಾ ಸಂಸ್ಥೆಗಳು ಹೀಗೆ ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕುವುದಿಲ್ಲ. ಇಂತಹ ಘಟನೆ ನಡೆದರೆ ರಾಷ್ಟ್ರೀಯ ಸೈಬರ್ ಕ್ರೈಂಗೆ ದೂರು ನೀಡಿ. ಡಿಜಿಟಲ್ ಅರೆಸ್ಟ್ ಎನ್ನುವುದು ಕಾನೂನಿನ ವ್ಯವಸ್ಥೆಯಲ್ಲಿಯೇ ಇಲ್ಲ. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರದ ಸಂಸ್ಥೆಗಳ ತನಿಖೆ ಮಾಡುತ್ತಿವೆ. ಇಂತಹ ಕಾಲ್ ಮಾಡುವುವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಹಾಗೂ ಅಂತವರ ಐಡಿ ಮತ್ತು ಸಿಮ್ ಬಂದ್ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.
ಭಾರತವು ಪ್ರತಿ ಯುಗದಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಧೈರ್ಯ ಮತ್ತು ದೂರದೃಷ್ಟಿ ಹೊಂದಿರುವ ಇಬ್ಬರು ಮಹಾನ್ ವೀರರ ಬಗ್ಗೆ ಚರ್ಚಿಸುತ್ತಿದ್ದೇನೆ. ಸರ್ದಾರ್ ಪಟೇಲ್ 150ನೇ ಜನ್ಮ ವರ್ಷಾಚರಣೆಯು ಅ.31 ರಿಂದ ಹಾಗೂ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವರ್ಷಾಚರಣೆಯು ನ.15 ರಿಂದ ಪ್ರಾರಂಭವಾಗುತ್ತದೆ. ಈ ಇಬ್ಬರೂ ಮಹಾನ್ ವ್ಯಕ್ತಿಗಳು ವಿಭಿನ್ನ ಸವಾಲುಗಳನ್ನು ಹೊಂದಿದ್ದರು. ಆದರೆ ಅವರ ದೃಷ್ಟಿ ಒಂದೇ ಆಗಿತ್ತು ಅದು ದೇಶದ ಏಕತೆ ಎಂದರು.
Tune in for a special #MannKiBaat episode as we discuss various topics. https://t.co/4BspxgaLfw
— Narendra Modi (@narendramodi) October 27, 2024
ಛೋಟಾ ಭೀಮ್‌ನಂತೆ ನಮ್ಮ ಇತರ ಅನಿಮೇಟೆಡ್ ಸರಣಿ ಕೃಷ್ಣ, ಮೋಟು-ಪಟ್ಲು, ಬಾಲ ಹನುಮಾನ್ ಕೂಡ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಭಾರತದ ಅನಿಮೇಟೆಡ್ ಪಾತ್ರಗಳು ಮತ್ತು ಚಲನಚಿತ್ರಗಳು ತಮ್ಮ ಕಂಟೆಂಟ್ ಮತ್ತು ಸೃಜನಾತ್ಮಕತೆಯಿಂದಾಗಿ ಪ್ರಪಂಚದಾದ್ಯಂತ ಇಷ್ಟವಾಗುತ್ತಿವೆ. ಭಾರತವು ಅನಿಮೇಷನ್ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಕ್ರಾಂತಿಯನ್ನು ತರುವ ಹಾದಿಯಲ್ಲಿದೆ. ಭಾರತದ ಗೇಮಿಂಗ್ ಸ್ಪೇಸ್ ಕೂಡ ಪ್ರಪಂಚದಾದ್ಯಂತ ಫೇಮಸ್ ಆಗುತ್ತಿದೆ. ದೇಶದಲ್ಲಿ ಸೃಜನಾತ್ಮಕತೆಯ ಅಲೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕೆಲವು ತಿಂಗಳ ಹಿಂದೆ ನಾನು ಸಹ ಆಟಗಾರರನ್ನು ಭೇಟಿಯಾಗಿದ್ದೆ. ನಮ್ಮ ಯುವಕರು ಒರಿಜಿನಲ್ ಯೂತ್ ಕಂಟೆಂಟ್‌ನ್ನು ರಚಿಸುತ್ತಿದ್ದು, ಇದು ಪ್ರಪಂಚದಲ್ಲಿ ಕಾಣುತ್ತಿದೆ ಎಂದು ಹೇಳಿದರು.
ವರ್ಚುವಲ್ ಟೂರಿಸಂ ಪ್ರಸಿದ್ಧವಾಗುತ್ತಿದೆ. ವಿಆರ್ ಸಹಾಯದಿಂದ ಜನರು ಈಗ ವರ್ಚುವಲ್ ಪ್ರವಾಸೋದ್ಯಮವನ್ನು ಮಾಡಬಹುದು. ಎಲ್ಲೋರಾದ ಗುಹೆಗಳನ್ನು ಜನರು ಮನೆಯಲ್ಲಿ ಕುಳಿತು ನೋಡಬಹುದು. ಅವರು ವಾರಣಾಸಿಯ ಘಾಟ್‌ಗಳನ್ನು ಅನ್ವೇಷಿಸಬಹುದು. ಇದರಿಂದಾಗಿ ಅವರು ನಿಜ ಜೀವನದಲ್ಲಿ ಈ ಸ್ಥಳಗಳನ್ನು ನೋಡಲು ಸ್ಫೂರ್ತಿ ಪಡೆಯುತ್ತಾರೆ ಎಂದು ತಿಳಿಸಿದರು.
Beware of Digital Arrest frauds!
No investigative agency will ever contact you by phone or video call for enquiries.
Follow these 3 steps to stay safe: Stop, Think, Take Action.#MannKiBaat #SafeDigitalIndia pic.twitter.com/KTuw7rlRDK
— PMO India (@PMOIndia) October 27, 2024
ಭಾರತದಲ್ಲಿ ಫಿಟ್‌ನೆಸ್ ಬಗ್ಗೆ ಹೆಚ್ಚು ಜಾಗೃತಿ ಬಂದಿದೆ. ಪಾರ್ಕ್ಗಳಲ್ಲಿ ಹೆಚ್ಚಿನ ಜನರು ವ್ಯಾಯಮ ಮಾಡುವುದು ಕಂಡು ಬರುತ್ತಿದೆ. ಯೋಗ ದಿನದಲ್ಲೂ ಜನರ ಈ ಜಾಗೃತಿ ನನಗೆ ಕಂಡು ಬಂದಿದೆ. ಶಾಲೆಗಳಲ್ಲಿ ಮೊದಲ ಕ್ಲಾಸ್‌ನಲ್ಲಿಯೇ ಬೇರೆ ಬೇರೆ ಫಿಟ್‌ನೆಸ್ ವ್ಯಾಯಾಮ ಹೇಳಿಕೊಡ್ತಿದ್ದಾರೆ. ಇದರಿಂದ ಮಕ್ಕಳ ಹಾಜರಾತಿ ಹೆಚ್ಚುತ್ತಿದೆ, ವಿದ್ಯಾರ್ಥಿಗಳ ಜ್ಞಾನ ಕೇಂದ್ರೀಕೃತವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಪಾರಂಪರಿಕ ಆಟಗಳನ್ನು ಕಲಿಸುತ್ತಿದ್ದಾರೆ. ಅ.31 ಸರ್ದಾರ್ ಪಟೇಲ್ ಜನ್ಮದಿನವಿದೆ. ರನ್ ಫಾರ್ ಯೂನಿಟ್ ಆಯೋಜನೆ ಮಾಡಲಾಗಿದೆ. ದೇಶದ ಏಕತೆ ಮಂತ್ರದ ಜೊತೆಗೆ ಫಿಟ್ನೆಸ್ ಮಂತ್ರವನ್ನು ಜಪಿಸಿ ಎಂದು ಹುರುದುಂಬಿಸಿದರು.
ಓಕಲ್ ಫಾರ್ ಲೋಕಲ್ ಮಂತ್ರವನ್ನು ನೆನಪಿಡಿ, ಸ್ಥಳೀಯ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸಿ. ಎಲ್ಲರಿಗೂ ಚತ್ ಪೂಜಾ, ದೀಪಾವಳಿಯ ಶುಭಾಶಯಗಳು ಎಂದು ಶುಭ ಹಾರೈಸಿದರು.
ಕರ್ನಾಟಕದ ಪ್ರಕರಣ ಏನು?
ವಿಜಯಪುರ ಜಿಲ್ಲೆಯ ಸಂತೋಷ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ, ನಾವು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಎಂದು ಹೆದರಿಸಿ ಬ್ಲಾಕ್‌ಮೇಲ್‌ಗೆ ಯತ್ನಿಸಿದ್ದರು. ಇದರ ಸಂಪೂರ್ಣ ದೃಶ್ಯವನ್ನ ಸಂತೋಷ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ಪ್ರಕರಣವನ್ನು ಉಲ್ಲೇಖಿಸಿ ಮೋದಿ ಜಾಗೃತಿ ಮೂಡಿಸಿದ್ದಾರೆ.ಇದನ್ನೂ ಓದಿ: ಶಾಸಕ ಸತೀಶ್ ಸೈಲ್‌ಗೆ ಕಾಡುತ್ತಿದ್ಯಾ ಗುರುಮಠದ ಶಾಪ?