ಬೆಂಗಳೂರು: ಕಿಸಾನ್ ಸಮ್ಮಾನ್ ಯೋಜನೆ ಅನುಷ್ಠಾನ ಹಾಗೂ ಕೃಷಿ ಕರ್ಮಣ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಗುರುವಾರ ಆಗಮಿಸಲಿರುವ ಪ್ರಧಾನಿ ಮೋದಿಗೆ ತುಮಕೂರಿನಲ್ಲಿ ರೈತರ ವಿರೋಧದ ಬಿಸಿ ತಟ್ಟಲಿದೆ.
ಡಾ ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ಮೋದಿ ಸರ್ಕಾರದ ನಡೆ ಖಂಡಿಸಿ ನಾಳೆಯ ಪ್ರಧಾನಿ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
Advertisement
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೋಡಿಹಳ್ಳಿ, ಪ್ರಧಾನಿ ಮೋದಿ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿದಂತೆ ರೈತ ಪರ ಕಾರ್ಯಕ್ರಮವನ್ನು ಮಾಡಿಲ್ಲ. ಕಾರ್ಪೋರೇಟ್ ಕುಳಗಳ ಪರಮಿಡಿಯುವ ಮೋದಿ ಮನಸು ರೈತರಿಗಾಗಿ ಎಂದೂ ಮಿಡಿದಿಲ್ಲ. ರೈತ ಪರ ಕಾರ್ಯಕ್ರಮ, ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯ ಭರವಸೆ ಯಾವುದು ಅನುಷ್ಠಾನವಾಗಿಲ್ಲ ಅಂತ ಕಿಡಿಕಾರಿದ್ರು.
Advertisement
ನಾಳೆ ಮೋದಿ ಕಾರ್ಯಕ್ರಮದಲ್ಲಿ ಜೈಕಾರವಾಗಲಿ ದಿಕ್ಕಾರವಾಗಲಿ ನಾವು ಕೂಗಲ್ಲ. ಸುಮಾರು 500 ಮಂದಿ ರೈತರು ಡಿಸಿ ಕಚೇರಿಯಿಂದ ಜಾಥಾ ಹೊರಟು ಕಪ್ಪು ಬಟ್ಟೆ ಧರಿಸಿ ನಮ್ಮ ಮನವಿಯನ್ನು ಶಾಂತಿಯುತವಾಗಿ ಪ್ರಧಾನಿಗೆ ತಲುಪಿಸುತ್ತೇವೆ. ಪೊಲೀಸರು ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ರು ನಾವು ಧೃತಿಗೆಡಲ್ಲ ಎಂದು ತಿಳಿಸಿದರು.