ಮೋದಿ, ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು: ರಮಾನಾಥ್ ರೈ

Public TV
1 Min Read
ramanath rai 1

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು. ಇಬ್ಬರೂ ಅವರವರ ಲಾಭಕ್ಕಾಗಿ ದೇಶವನ್ನು ಬಯ್ಯುತ್ತಾರೆ ಎಂದು ಕಾಂಗ್ರೆಸ್ ನಾಯಕ ರಮಾನಾಥ್ ರೈ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಮೋದಿ ಹಾಗೂ ಇಮ್ರಾನ್ ಖಾನ್ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ರಮಾನಾಥ್ ರೈ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ಮುಗಿಸಿ ಹೋಗುತ್ತಿದ್ದ ವೇಳೆ, ಮೋದಿ ಹಾಗೂ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು ಎಂದು ರಮಾನಾಥ್ ರೈ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

modi imran

ಮೋದಿ ಹಾಗೂ ಇಮ್ರಾನ್ ಖಾನ್ ಇಬ್ಬರೂ ತಮ್ಮ ಲಾಭಕ್ಕಾಗಿ ದೇಶವನ್ನು ಬಯ್ಯುತ್ತಾರೆ. ಇಮ್ರಾನ್ ಖಾನ್ ವೋಟ್‍ಗಾಗಿ ಭಾರತವನ್ನು ಬಯ್ಯುತ್ತಾನೆ. ಮೋದಿ ವೋಟ್‍ಗಾಗಿ ಪಾಕಿಸ್ತಾನವನ್ನು ಬಯ್ಯುತ್ತಾರೆ. ಇಬ್ಬರು ಒಂದೇ ರೀತಿಯ ಜನ. ಅವನು ಹೇಗೋ ಸರಿಯಿಲ್ಲ, ಇವರು ಅದೇ ದಾರಿಯಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.

Share This Article