ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಹೈದರಾಬಾದ್‌ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಬಿಜೆಪಿ ನಾಯಕರಿಗೆ ತೆಲಂಗಾಣ ಸಾಂಪ್ರದಾಯಿಕ ಶೈಲಿಯ ಅಡುಗೆ ರುಚಿ ತೋರಿಸಲು ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.
ಇಲ್ಲಿನ ಕರೀಂನಗರ ಜಿಲ್ಲೆಯ ಹುಸ್ನಾಬಾದ್ ಕ್ಷೇತ್ರದ ಗೌರವೆಲ್ಲಿ ಗುಡತಿಪಲ್ಲಿಯ ಯಾದಮ್ಮ, ಪ್ರಧಾನಿಗೆ ತೆಲಂಗಾಣದ ಅಡುಗೆಯ ರುಚಿ ತೋರಿಸಿದರು. ಸಂಪೂರ್ಣ ಸಸ್ಯಾಹಾರ ಖಾದ್ಯಗಳನ್ನೇ ಸವಿದು ಪ್ರಧಾನಿ ಮೋದಿ ಸಂತಸಪಟ್ಟರು. ಇದನ್ನೂ ಓದಿ: ದೇಶಕ್ಕೆ ಮಾತಾಡುವ ರಾಷ್ಟ್ರಪತಿ ಬೇಕು; ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡ್ತೀನಿ – ಯಶವಂತ್ ಸಿನ್ಹಾ
Advertisement
Advertisement
50 ಬಗೆಯ ಖಾದ್ಯ: ಪ್ರಧಾನಿ ಮೋದಿ ಸೇರಿದಂತೆ ಇತರ ನಾಯಕರಿಗಾಗಿ 50 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಸ್ವತಃ ಖಾದ್ಯಗಳ ರುಚಿ ಪರಿಶೀಲನೆ ಮಾಡಿದರು. ನಂತರ ಬಿಜೆಪಿ ಅತಿರಥರು ಯಾದಮ್ಮರ ಕೈರುಚಿ ಸವಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರು ನನ್ನ ಅಡುಗೆಯ ರುಚಿ ಸವಿದಿರುವುದು ನನ್ನ ಪಾಲಿನ ಪುಣ್ಯ. ನನಗೆ ಈ ಅವಕಾಶ ಕಲ್ಪಿಸಿದ ಬಂಡಿ ಸಂಜಯ್ ಅವರಿಗೆ ಋಣಿಯಾಗಿದ್ದೇನೆ ಎಂದು ಯಾದಮ್ಮ ಕೃತಜ್ಞತೆ ಅರ್ಪಿಸಿದ್ದಾರೆ. ಇದನ್ನೂ ಓದಿ: ಬ್ಯಾಟರಾಯನಪುರದಲ್ಲಿ ಕೇಸರಿ ಫೌಂಡೇಶನ್ ವತಿಯಿಂದ ಆಷಾಢ ಅಷ್ಟಲಕ್ಷ್ಮಿ ಪೂಜೆ
Advertisement
Advertisement
ಏನೆಲ್ಲಾ ಇತ್ತು ಊಟದ ಮೆನುವಿನಲ್ಲಿ?
ಚಿಕ್ಕುಡುಕಾಯಿ ಟೊಮ್ಯಾಟೊ, ಆಲೂ ಕೂರ್ಮಾ, ಬದನೆಕಾಯಿ ಮಸಾಲಾ, ತೊಂಡೇಕಾಯಿ ಹಸಿಕೊಬ್ಬರಿ ಫ್ರೈ, ಬೆಂಡೇಕಾಯಿ ಕಾಜು ಫ್ರೈ, ತೋಟಕೂರ ಟೊಮ್ಯಾಟೊ ಫ್ರೈ, ಬೀರೆಕಾಯಿ ಮೀಲ್ ಮೇಕರ್ ಫ್ರೈ, ಮೆಂತ್ಯೆ ಹೆಸರುಕಾಳು ಫ್ರೈ, ಮಾವಿನಕಾಯಿ ಪಪ್ಪು, ಸಾಂಬಾರ್, ಮುದ್ದಪಪ್ಪು, ಪಚ್ಚಿಪುಲುಸು, ಬಗಾರಾ, ಪುಲಿಹೋರಾ, ಪುದೀನಾ ರೈಸ್, ವೈಟ್ ರೈಸ್, ಮೊಸರನ್ನ, ಗೋಂಗೂರ ಪಚ್ಚಡಿ, ಸೌತೆಕಾಯಿ ಚಟ್ನಿ, ಟೊಮ್ಯಾಟೊ ಚಟ್ನಿ, ಸೋರೆಕಾಯಿ ಚಟ್ನಿ, ಕಡಲೆ ಬೀಜದ ಚಟ್ನಿ, ಹಸಿ ತೆಂಗಿನಕಾಯಿ ಚಟ್ನಿ, ಹಸಿ ಮೆಣಸಿನ ಕಾಯಿ ಫ್ರೈ.
ಸಿಹಿ ತಿನಿಸು: ಬೆಲ್ಲದ ಪರಮಾನ್ನ, ಶ್ಯಾವಿಗೆ ಪಾಯಸ, ಹೋಳಿಗೆ, ಬೂರೆಲು, ಕಜ್ಜಾಯ.
ಕುರುಕುಲು ತಿಂಡಿ: ಉದ್ದಿನ ವಡೆ, ಮಿರ್ಚಿ ಬಜ್ಜಿ, ಚಕ್ಕುಲಿ, ಖಾರ ಬೂಂದಿ, ನಿಪ್ಪಟ್ಟು.