ಕೋಲಾರ: ಗ್ರಾಮೀಣ ಪ್ರದೇಶದಲ್ಲಿ ಎದುರಾದ ಎತ್ತುಗಳ ಕೊರತೆ ನೀಗಿಸಲು ಕೋಲಾರದ ರೈತರು ಕಾಳು ಬಿತ್ತನೆಗೆ ತಮ್ಮ ದ್ವಿಚಕ್ರ ವಾಹನಗಳನ್ನೆ ಬಳಸಿಕೊಂಡು ಹೊಸ ಆವಿಷ್ಕಾರಕ್ಕೆ ಮುಂದಾಗಿದ್ದಾರೆ.
ತಂತ್ರಜ್ಞಾನ ಬಳಸಿ ಕೃಷಿಯಲ್ಲಿನ ವೆಚ್ಚ ತಗ್ಗಿಸಲು ಕೋಲಾರ ತಾಲೂಕು ತೊಟ್ಲಿ ರೈತ ರಮೇಶ್ ಎಂಬವರು ತನ್ನ ದ್ವಿಚಕ್ರ ವಾಹನ ಬಳಸಿ ಮಾಡಿರುವ ಬಿತ್ತನೆ ಹಾಗೂ ಕೃಷಿ ಚಟುವಟಿಕೆ ಅವರ ಶ್ರಮ ಹಾಗೂ ಹೋರಾಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಹಾಗೂ ಬಿತ್ತನೆ ನಂತರದ ಚಟುವಟಿಕೆಗಳಿಗೆ ತನ್ನ ಹೀರೋ ಸ್ಪ್ಲೆಂಡರ್ ಬೈಕ್‍ನ್ನು ಬಳಕೆ ಮಾಡಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
Advertisement
Advertisement
ಕಡಿಮೆ ಸಮಯ, ಕಡಿಮೆ ಖರ್ಚು ಹಿನ್ನೆಲೆ ಹೊಸ ಪ್ರಯೋಗಕ್ಕೆ ಮುಂದಾಗಿ ಯಶಸ್ವಿಯಾಗಿರುವ ಕೋಲಾರದ ರೈತ ರಮೇಶ್ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಾಳು ಬಿತ್ತನೆ ಹಾಗೂ ಬಿತ್ತನೆ ನಂತರ ಮಣ್ಣು ಹಸನು ಮಾಡಲು ತನ್ನ ದ್ವಿಚಕ್ರ ವಾಹನ ಬಳಸಿಕೊಂಡು ಯಶಸ್ವಿಯಾಗಿದ್ದಾರೆ.
Advertisement
ಕೇವಲ 100 ರೂಪಾಯಿಗೆ ಎರಡು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡುವ ಸುಲಭ ವಿಧಾನವನ್ನ ಕಂಡುಕೊಂಡಿದ್ದಾರೆ. ತೀವ್ರ ಮಳೆ ಕೊರತೆ, ಸತತ ಬರಗಾಲ, ಜಾನುವಾರುಗಳ ಪಾಲನೆ ಕಷ್ಟವಾಗಿರುವುದರಿಂದ ರೈತರು ಈ ನೂತನ ಆವಿಷ್ಕಾರಕ್ಕೆ ಮುಂದಾಗಿದ್ದಾರೆ. ದ್ವಿದಳ ಧಾನ್ಯಗಳಾದ ರಾಗಿ, ಜೋಳ, ಅವರೆ ತೊಗರಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವ ಜಿಲ್ಲೆಯ ರೈತರು ಕೂಡ ಇದೆ ವಿಧಾನವನ್ನ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.
Advertisement
ಒಟ್ಟಿನಲ್ಲಿ ಸತತ ಬರಗಾಲ, ಮಳೆ ಕೊರತೆಯಿಂದ ಕೃಷಿಯನ್ನೇ ಬಿಡುವ ಹಂತಕ್ಕೆ ತಲುಪಿರುವ ಜಿಲ್ಲೆಯ ರೈತರಿಗೆ ರೈತ ರಮೇಶ್ ಮಾಡಿರುವ ಬೈಕ್ ಉಳುಮೆ ಕಾರ್ಯ ಉತ್ತೇಜನ ನೀಡಿದೆ. ಈ ಹೊಸ ಪ್ರಯೋಗಕ್ಕೆ ಸದ್ಯ ಜಿಲ್ಲೆಯ ರೈತರು ಫಿದಾ ಆಗಿದ್ದಾರೆ.