ಕೀವ್: ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧವನ್ನು ತಡೆಯಲು ವಿದೇಶಿ ಮಾಡೆಲ್ ಒಬ್ಬರು ರಷ್ಯಾದ ಅಧ್ಯಕ್ಷ ಪುಟಿನ್ ಅವರ ಆದೇಶಗಳನ್ನು ನಿರಾಕರಿಸಿ ಉಕ್ರೇನ್ನಿಂದ ಹಿಂದಿರುಗಿದರೆ ಅವರ ಪ್ರತಿಯೊಬ್ಬ ಸೈನಿಕರೊಂದಿಗೆ ಸಂಭೋಗಿಸಲು ಸಿದ್ಧಳಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ.
Advertisement
ಮಾಡೆಲ್, ಟ್ವಿಟ್ಟರ್ನಲ್ಲಿ ಅಭಿಮಾನಿಗಳಿಗೋಸ್ಕರ ಫೋನ್ಸ್ ವೆಬ್ಸೈಟ್ವೊಂದನ್ನು ಹೊಂದಿದ್ದು, ಇನ್ಸ್ಟಾಗ್ರಾಮ್ನಲ್ಲಿ ಲಿಲ್ಲಿ ಸಮ್ಮರ್ಸ್ ಎಂಬ ಖಾತೆಯೊಂದನ್ನು ಹೊಂದಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಬರೆಯುತ್ತಿದ್ದಾರೆ. ಈಗ ಅವರು ಉಕ್ರೇನ್ನಲ್ಲಿ ನಡೆಯುತ್ತಿರುವ ರಕ್ತಪಾತವನ್ನು ತಡೆಯಲು ರಷ್ಯಾದ ಸೈನಿಕರಿಗೆ ಲೈಂಗಿಕತೆಯ ಆಯ್ಕೆಯೊಂದನ್ನು ನೀಡಿದ್ದಾರೆ. ‘ಉಕ್ರೇನ್ಗಾಗಿ ತನ್ನ ಶಸ್ತ್ರಾಸ್ತ್ರಗಳನ್ನು ಮತ್ತು ದ್ವೇಷವನ್ನು ತ್ಯಜಿಸಲು ಸಿದ್ಧವಾಗಿರುವ ಪ್ರತಿಯೊಬ್ಬ ರಷ್ಯಾದ ಸೈನಿಕನೊಂದಿಗೆ ನಾನು ಲೈಂಗಿಕತೆ ಹೊಂದಲು ಸಿದ್ಧಳಿದ್ದೇನೆ’ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಡಬ್ಲ್ಯುಹೆಚ್ಒನಿಂದ ಎಚ್ಚರಿಕೆ- ಯುದ್ಧ ಬಿಕ್ಕಟ್ಟಿನ ಮಧ್ಯೆ ಉಕ್ರೇನ್ಗೆ ಮತ್ತೊಂದು ಆತಂಕ
Advertisement
Advertisement
ಕೇವಲ ರಷ್ಯಾ ಅಲ್ಲದೇ ಪ್ರತಿಯೊಬ್ಬ ಸೈನಿಕನಿಗೂ ಒಂದು ಕೊಡುಗೆ ಇದೆ. ಲಿಲ್ಲಿ ಸಮ್ಮರ್ಸ್ ಮೊದಲಿನಿಂದಲೂ ಉಕ್ರೇನ್ ಅನ್ನು ಬೆಂಬಲಿಸುತ್ತಿದ್ದಾರೆ. ಉಕ್ರೇನಿಯನ್ ಧ್ವಜದೊಂದಿಗೆ ಅನೇಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಶಾಂತಿಗಾಗಿ ಮನವಿ ಮಾಡಿದ್ದಾರೆ. ರಷ್ಯಾದ ಪಡೆಗಳು ತಮ್ಮ ಅಧ್ಯಕ್ಷರ ಆದೇಶಗಳನ್ನು ಪಾಲಿಸಲು ನಿರಾಕರಿಸಬೇಕು ಮತ್ತು ಉಕ್ರೇನ್ ಬಿಟ್ಟು ಹಿಂದಿರುಗಬೇಕು ಎಂದಿದ್ದರು. ಹಾಗೇನಾದರೂ ಮಾಡಿದರೆ, ನಾನು ಅವರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಲು ಸಿದ್ಧಳಿದ್ದೇನೆ. ನನ್ನ ಕೊಡುಗೆ ಪ್ರತಿ ರಷ್ಯಾದ ಸೈನಿಕನಿಗೆ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ
Advertisement
ಟ್ವೀಟ್ನಲ್ಲಿ ಏನಿದೆ?
‘ಯಾರಾದರೂ ಒಬ್ಬ ರಷ್ಯನ್ ಸತ್ತರೆ, ನಾನು ನಗ್ನ ಫೋಟೋವನ್ನು ಹಂಚಿಕೊಳ್ಳುತ್ತೇನೆ. ಅದೇ ರೀತಿ, ರಷ್ಯಾದ ಟ್ಯಾಂಕ್ ನಾಶವಾದಾಗ, ಅನುಯಾಯಿಗಳು ನನ್ನ ಮಾದಕ ವೀಡಿಯೋವನ್ನು ಪಡೆಯುತ್ತಾರೆ. ಯಾರಾದರೂ ರಷ್ಯಾದ ವಿಮಾನವನ್ನು ಹೊಡೆದುರುಳಿಸಿದರೆ, ನಾನು ಅವನಿಗೆ ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಅವಕಾಶವನ್ನು ನೀಡುತ್ತೇನೆ ಎಂದಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರ ಉಕ್ರೇನ್ ವಿರುದ್ಧದ ಯುದ್ಧದ ನಿರ್ಧಾರಕ್ಕೆ ಸಾಕಷ್ಟು ವಿರೋಧವಿದೆ. ರಷ್ಯಾದ ಅನೇಕ ಸೆಲೆಬ್ರಿಟಿಗಳು ಕೂಡ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.