ವಂಚನೆಯ ಆರೋಪ ಎದುರಿಸುತ್ತಿರುವ ಮಾಡೆಲ್ (Model) ನಿಶಾ ನರಸಪ್ಪ 2 ಕೋಟಿಗೂ ಅಧಿಕ ಹಣವನ್ನು ವಂಚನೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ನಿಶಾ ನ್ಯಾಯಾಂಗ ಬಂಧನದಲ್ಲಿದ್ದರೆ, ಇತ್ತ ನಿಶಾ ಮನೆಯ ಮುಂದೆ ಹಣ ಕಳೆದುಕೊಂಡವರು ಗಲಾಟೆ ಮಾಡುತ್ತಿದ್ದಾರೆ. ತಮ್ಮ ಹಣವನ್ನು ಮರಳಿಸುವಂತೆ ಮನೆಯಲ್ಲಿದ್ದವರನ್ನು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ವಿವಿಧ ಠಾಣೆಗಳಿಗೂ ತೆರಳಿ ನಿಶಾ ವಿರುದ್ಧ ದೂರು ದಾಖಲಿಸುತ್ತಿದ್ದಾರೆ.
ನಟ ಮಾಸ್ಟರ್ ಆನಂದ್ (Master Anand) ಪುತ್ರಿ, ಬಾಲನಟಿ ವಂಶಿಕಾ (Vamshika) ಹೆಸರಿನಲ್ಲಿ ವಂಚನೆ ಮಾಡಿದ್ದ ಆರೋಪಿ ನಿಶಾ ನರಸಪ್ಪ (Nisha Narasappa) 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ನಿಶಾ ಕುರಿತು ಬಗೆದಷ್ಟು ಕರ್ಮಕಾಂಡ ಬಯಲಾಗುತ್ತಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ಬಳಿಕ ಒಂದೊಂದು ಕೇಸ್ ಬೆಳಕಿಗೆ ಬರುತ್ತಿವೆ. ನಿಶಾ ಅಂದರ್ ಆಗಿ ಮೂರನೇ ದಿನವೂ ಆಕೆಯ ವಿರುದ್ಧ ದೂರು ದಾಖಲಾಗುತ್ತಿದೆ. ಜೈಲಿನಲ್ಲಿ ದೂರು ದಾಖಲಿಸಿದ ಪೋಷಕರು ನಿಶಾ ಬಳಿ ಮಾತಾನಾಡುವಾಗ ತಪ್ಪೇ ಮಾಡಿಲ್ಲ ಅಂತಾ ವಾದ ಮಾಡಿದ್ದಾರೆ. ವೀಡಿಯೋ ಮಾಡಲು ಹೋದಾಗ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ.
ವಂಶಿಕಾ (Vamshika) ಸೇರಿದಂತೆ ಹಲವು ಸೆಲೆಬ್ರಿಟಿಗಳ ಹೆಸರಲ್ಲಿ ವಂಚನೆ ಮಾಡುತ್ತಿದ್ದ ನಿಶಾ ಈಗ 14 ದಿನಗಳ ನ್ಯಾಯಾಂಗ (Jail) ಬಂಧನದಲ್ಲಿದ್ದಾರೆ. ಮೋಸ ಹೋದ ಪೋಷಕರೊಂದಿಗೆ ಆರೋಪಿ ನಿಶಾ ಮಾತುಕತೆ ಮಾಡಿದ್ದಾರೆ. ಕೊಟ್ಟ ಹಣವನ್ನ ವಾಪಸ್ ಕೇಳಲು ಹೋದಾಗ ವೀಡಿಯೋ ಮಾಡಲು ಯತ್ನಿಸಿದ್ದಾರೆ. ನಿಶಾ ಅವರ ಫೋನ್ ಅನ್ನ ಕಸಿದುಕೊಳ್ಳಲು ಹೋಗಿರುವ ಘಟನೆ ನಡೆದಿದೆ.
ಕಾಲ್ ಯಾಕೆ ಪಿಕ್ ಮಾಡುತ್ತಿಲ್ಲ ಎಂದು ಪೋಷಕರು ಈ ವೇಳೆ ಪ್ರಶ್ನಿಸಿದ್ದಾರೆ. ಅದಕ್ಕೆ ನಿಶಾ ಉತ್ತರವೇ ಕೊಟ್ಟಿಲ್ಲ. ಆಗ ನಾನು ತಪ್ಪೇ ಮಾಡಿಲ್ಲ ಎಂದು ನಿಶಾ ವಾದ ಮಾಡಿದ್ದಾರೆ. ಹಣ ಕೇಳಲು ಹೋದಾಗ ಬಾಗಿಲಲ್ಲೇ ನಿಂತು ವಾದ ಮಾಡಿದ್ದಾರೆ. ಇದಾದ ಬಳಿಕ ಮಾಧ್ಯಮದ ಮುಂದೆ ಈ ಬಗ್ಗೆ ಹೇಳಿಕೆ ನೀಡಲು ಪೋಷಕರು ನಿರಾಕರಿಸಿದ್ದಾರೆ. ಇದನ್ನೂ ಓದಿ:ತಮಿಳು ನಟ ಸೂರ್ಯ ಜೊತೆಗಿನ ಫೋಟೋ ಶೇರ್ ಮಾಡಿದ ರಮ್ಯಾ
ಕಳೆದ ತಿಂಗಳು ದಾಖಲಾದ ದೂರುಗಳ ಬೆನ್ನಲ್ಲೇ ಇದೀಗ ಸಾಕಷ್ಟು ಮಂದಿಯಿಂದ ದೂರುಗಳು ದಾಖಲೆಯಾಗುತ್ತಿವೆ. ಈ ಹಿಂದೆ ತಾರಾ ಎಂಬುವರಿಗೆ ನಿಶಾ ಇಪ್ಪತ್ತು ಲಕ್ಷ ರೂಪಾಯಿ ವಂಚನೆ ಮಾಡಿದ್ದರು ಎನ್ನುವ ಆರೋಪ ಕೂಡ ಇದೆ. ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ನಿಶಾ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾರಂತೆ. ಈ ಬಗ್ಗೆ ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಲ್ಲದೇ, ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲಿ ನಿಶಾ ವಿರುದ್ದ ವಂಚನೆ ದೂರುಗಳು ದಾಖಲಾಗಿವೆ. ಸದಾಶಿವನಗರ ಠಾಣೆಯಲ್ಲಿ ದಾಖಲಾದ ಕೇಸ್ ನಲ್ಲಿ ಬರೋಬ್ಬರಿ 35 ಲಕ್ಷ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಸಾಲದ ರೂಪದಲ್ಲಿ ಹಾಗೂ ಇನ್ವೆಸ್ಟ್ ಮಾಡಿದ್ರೆ ಲಾಭಾಂಶ ನೀಡುವುದಾಗಿ ನಿಶಾ ವಂಚನೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಮೊದ ಮೊದಲು ಲಾಭಾಂಶದ ಹಣ ಕೊಟ್ಟು ಎರಡರಷ್ಟು ಹಣ ಪಡೆದು ವಂಚನೆ ಮಾಡಿದ್ದಾರಂತೆ ನಿಶಾ. ಬೆಂಗಳೂರು ದೊಡ್ಡ ಮಾಲ್ ಗಳಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಮಾಡ್ತಿದ್ದ ರಾಮನಗರ ಮೂಲದ ನಿಶಾ, ಬೆಂಗಳೂರು ಹೊರಹೊಲಯದಲ್ಲಿನ ರೆಸಾರ್ಟ್ ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸದಾಶಿವನಗರ ಠಾಣೆಗೆ ಬರುತ್ತಿರುವ ದೂರುಗಳನ್ನು ತಮ್ಮ ಮನೆ ವ್ಯಾಪ್ತಿಯ ಠಾಣೆಯಲ್ಲಿ ನೀಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Web Stories