ಮಾಡೆಲ್ ಮರ್ಡರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಸೆಕ್ಸ್ ನಿರಾಕರಿಸಿದ್ದಕ್ಕೆ ಕೊಲೆ!

Public TV
2 Min Read
model murder twist collage

ಮುಂಬೈ: ಮಾಡೆಲ್‍ನನ್ನು ವಿದ್ಯಾರ್ಥಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಸೂಟ್‍ಕೇಸ್‍ನಲ್ಲಿ ತೆಗೆದುಕೊಂಡು ಹೋದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸೆಕ್ಸ್ ನಿರಾಕರಿಸಿದ್ದಕ್ಕೆ ಯುವತಿಯನ್ನು ಕೊಲೆ ಮಾಡಿದ್ದಾನೆ ಎಂಬ ಸತ್ಯ ಹೊರ ಬಂದಿದೆ.

ಮಾನ್ಸಿ ದೀಕ್ಷಿತ್(20) ಸೆಕ್ಸ್ ನಿರಾಕರಿಸಿದ್ದಕ್ಕೆ 19 ವರ್ಷದ ವಿದ್ಯಾರ್ಥಿ ಮುಜಾಮಿಲ್ ಸೈಯಿದ್ ಕೊಲೆ ಮಾಡಿ ಅಂಧೇರಿಯಿಂದ ಮಲಾಡ್‍ಗೆ ಶವವನ್ನು ಸೂಟ್‍ಕೇಸ್‍ನಲ್ಲಿ ತೆಗೆದುಕೊಂಡು ಹೋಗಿ ಬಿಸಾಕಿದ್ದಾನೆ.

model murder twist 3

ಘಟನೆ ವಿವರ:
ಮಾನ್ಸಿ ದೀಕ್ಷಿತ್ ಮಾಡೆಲ್ ಆಗಲು ರಾಜಸ್ಥಾನದಿಂದ ಮುಂಬೈಗೆ ಬಂದಿದ್ದಳು. ಮಾನ್ಸಿ ಹಾಗೂ ಸೈಯಿದ್ ಇಂಟರ್ ನೆಟ್‍ನಲ್ಲಿ ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ. ಮಾನ್ಸಿ ಅಂಧೇರಿಯಲ್ಲಿರುವ ಸೈಯಿದ್ ಅಪಾರ್ಟ್ ಮೆಂಟ್‍ನಲ್ಲಿ ಭೇಟಿಯಾಗಿದ್ದಳು. ಈ ವೇಳೆ ಸೈಯಿದ್ ದೈಹಿಕ ಸಂಪರ್ಕ ಬೆಳೆಸಲು ಮಾನ್ಸಿ ಹತ್ತಿರ ಕೇಳಿಕೊಂಡಿದ್ದಾನೆ. ಆದರೆ ಮಾನ್ಸಿ ಇದನ್ನು ನಿರಾಕರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಸೈಯಿದ್ ಸ್ಟೂಲ್‍ನಿಂದ ಮಾನ್ಸಿ ಮೇಲೆ ಹಲ್ಲೆ ಮಾಡಿದ್ದಾನೆ.

model murder twist

ರಹಸ್ಯ ಬಿಚ್ಚಿಟ್ಟ ಆರೋಪಿ:
ಘಟನೆಯ ಬಳಿಕ ಆರೋಪಿ ಸೈಯಿದ್ ಪೊಲೀಸರ ಬಳಿ ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತಿದ್ದನು. ಪೊಲೀಸರು ಸತತವಾಗಿ ಆತನನ್ನು ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಮಾನ್ಸಿ ಸೆಕ್ಸ್‍ಗೆ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿದೆ. ಇದರಿಂದ ಆಕೆ ಪ್ರಜ್ಞೆ ತಪ್ಪಿದ್ದಳು. ನಾನು ಆಕೆಯನ್ನು ಎಚ್ಚರಗೊಳಿಸಲು ಪ್ರಯತ್ನಿಸಿದ್ದೆ. ಮಾನ್ಸಿಗೆ ಎಚ್ಚರವಾಗುತ್ತಿತ್ತು. ಆದರೆ ಆ ಸಮಯದಲ್ಲಿ ನನ್ನ ತಾಯಿ ಅಲ್ಲಿಗೆ ಬರುತ್ತಾರೆಂಬ ಭಯದಿಂದ ನಾನು ಅಲ್ಲಿದ್ದ ಹಗ್ಗದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ಸೈಯಿದ್ ಹೇಳಿದ್ದಾನೆ.

model murder twist 5

ಪೊಲೀಸರಿಗೆ ಮಾಹಿತಿ ನೀಡಿದ ಕ್ಯಾಬ್ ಡ್ರೈವರ್:
ಮಾನ್ಸಿ ದೀಕ್ಷಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದ ನಂತರ ಸೈಯಿದ್ ಕ್ಯಾಬ್‍ಗೆ ಫೋನ್ ಮಾಡಿದ್ದನು. ನಂತರ ಮಾನ್ಸಿಯ ಶವವನ್ನು ಸೂಟ್‍ಕೇಸ್‍ನಲ್ಲಿ ಹೊತ್ತು ಖಾಸಗಿ ಕ್ಯಾಬ್‍ನಲ್ಲಿ ಅಂಧೇರಿಯಿಂದ ಮಲಾಡ್‍ಗೆ ಸಾಗಿಸಿದ್ದನು. ಬಳಿಕ ಮಲಾಡ್‍ನ ನಿರ್ಜನ ಪ್ರದೇಶದಲ್ಲಿ ಶವ ಬಿಸಾಡಿ ಆಟೋ ರಿಕ್ಷಾದಲ್ಲಿ ಹೊರಟ ಸೈಯೀದ್‍ನನ್ನು ಗಮನಿಸಿದ ಕ್ಯಾಬ್ ಡ್ರೈವರ್ ಪೊಲೀಸರಿಗೆ ಮಾಹಿತಿ ನೀಡಿದ್ದನು. ಕ್ಷಣ ಮಾತ್ರದಲ್ಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಮಾಡೆಲ್ ಶವ ಪತ್ತೆಯಾಗಿತ್ತು.

model murder twist 6

ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಾನ್ಸಿ ದೀಕ್ಷಿತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಆರೋಪಿಯನ್ನು ಕೋರ್ಟ್‍ಗೆ ಹಾಜರು ಪಡಿಸಿದ್ದಾರೆ.

model murder twist 4

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *