ರೈಲು ಅಪಘಾತ – ಪ್ರಯಾಣಿಕರ ರಕ್ಷಣೆ ಬಗ್ಗೆ ಅಣುಕು ಪ್ರದರ್ಶನ

Public TV
1 Min Read
YASHWANTHAPURA RAILWAY STATION

ಬೆಂಗಳೂರು: ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ರೈಲು ದುರಂತದ ಸಂದರ್ಭದಲ್ಲಿ ನಿರ್ವಹಣೆ ಮಾಡುವ ಬಗ್ಗೆ ರಾಷ್ಟ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳಗಳು ಅಣುಕು ಕಾರ್ಯಾಚರಣೆ ಮಾಡಿದೆ.

railway

ಅಣುಕು ಪ್ರದರ್ಶನದಲ್ಲಿ ಎರಡು ಕೋಚ್‍ಗಳನ್ನು ಸ್ಥಾನಪಲ್ಲಟಗೊಳಿಸಿ, ದುರ್ಘಟನೆ ಸನ್ನಿವೇಶವನ್ನು ಕೃತಕವಾಗಿ ಸೃಷ್ಟಿಸಲಾಯಿತು. ನಂತರ ಸೈರನ್ ಮೂಲಕ ಸುದ್ದಿಹಬ್ಬಿಸಿ, ಸ್ಥಳಕ್ಕೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಧಾವಿಸಿತು. ಹಾನಿಯಾಗಿದ್ದ ಕೋಚ್‍ಗಳಲ್ಲಿದ್ದ ಗಾಯಾಳುಗಳನ್ನು ರಕ್ಷಿಸಿ ತಂಡವು ವಿವಿಧ ಉಪಕರಣಗಳಿಂದ ರೈಲಿನ ಸರಳುಗಳನ್ನು ಕತ್ತರಿಸುವುದು, ಗಾಯಾಳುಗಳನ್ನು ಹೊರಗೆ ತರುವುದು, ಹೊರಗೆ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ರೈಲ್ವೇ ಸುರಕ್ಷತಾ ದಳ ನೋಡಿಕೊಳ್ಳುವುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಇದನ್ನೂ ಓದಿ: ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

railways

ಗಾಯಾಳುಗಳನ್ನು ಸ್ಟ್ರೆಚರ್ ಮೂಲಕ ವೈದ್ಯಕೀಯ ಕ್ಯಾಂಪ್‍ಗಳಿಗೆ ಕೊಂಡೊಯ್ಯುವುದು, ಕೆಲವರನ್ನು ಅಂಬುಲೆನ್ಸ್‌ ಮೂಲಕ ಹತ್ತಿರದ ಆಸ್ಪತ್ರೆಗೆ ಸಾಗಿಸುವ ಬಗ್ಗೆ ಕಾರ್ಯಚರಣೆ ನಡೆಸಲಾಯಿತು. ಸುಮಾರು 45 ನಿಮಿಷಗಳ ಕಾಲ ಈ ಅಣಕು ರಕ್ಷಣಾ ಕಾರ್ಯ ನಡೆಯಿತು. ಬಳಿಕ ಕೋಚ್‍ಗಳನ್ನು ಪುನಃ ಹಳಿಯ ಮೇಲಿರಿಸಲಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಉಪ ಕಮಾಂಡರ್ ಸೆಂಥಿಲ್ ಕುಮಾರ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳದ ನಿರೀಕ್ಷಕ ಪ್ರಶಾಂತ್ ತಮ್ಮ ತಂಡದೊಂದಿಗೆ ಅಣುಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಗುದನಾಳದಲ್ಲಿ 42 ಲಕ್ಷ ಬೆಲೆ ಬಾಳುವ ಚಿನ್ನದ ಪೇಸ್ಟ್- ವ್ಯಕ್ತಿ ವಶಕ್ಕೆ

Share This Article
Leave a Comment

Leave a Reply

Your email address will not be published. Required fields are marked *