ಬೆಂಗಳೂರು: ಮೊಬೈಲ್ ಗ್ರಾಹಕರೆ ನಿಮ್ಮ ಮೊಬೈಲ್ ಫೋನ್ ಎಷ್ಟೇ ಅತ್ಯಾಧುನಿಕವಾಗಿರಲಿ, ಅದರಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿ, ಪರಿಣಾಮಕಾರಿ ಬಳಕೆ ಸಾಧ್ಯವಾಗಬೇಕೆಂದರೆ ಅದರಲ್ಲೊಂದು ಸಿಮ್ ಇರಲೇಬೇಕು. ಸೈಬರ್ ವಂಚಕರು ಸಿಮ್ ಸ್ವಾಪ್ ಮೂಲಕ ನಿಮ್ಮೆಲ್ಲಾ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಎಗರಿಸುತ್ತಾರೆ ಎಚ್ಚರ.
ಸೈಬರ್ ವಂಚಕರು ಇದೀಗ್ ಸಿಮ್ ಸ್ವಾಪ್ ಮುಖಾಂತರ ಗ್ರಾಹಕರ ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸುತ್ತಿರುವುದಲ್ಲದೇ, ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಸಿಮ್ ಸ್ವಾಪ್ ಜಾಲಕ್ಕೆ ಸಿಲುಕಿದ ಗ್ರಾಹಕರು ಪೊಲೀಸ್ ಠಾಣೆಯನ್ನು ಅಲೆಯುವುದು ಇಂದು ಸಾಮಾನ್ಯವಾಗಿದೆ. ಸೈಬರ್ ವಂಚಕರು ಬಳಸುವ ಸಿಮ್ ಸ್ವಾಪ್ ಯಾವ ರೀತಿ ನಡೆಯುತ್ತದೆ ಎಂದು ಈ ಕೆಳಗೆ ನೀಡಲಾಗಿದೆ.
Advertisement
Advertisement
ಏನಿದು ಸಿಮ್ ಸ್ವಾಪ್?
ಸೈಬರ್ ವಂಚಕರು ಹಣ ಕಬಳಿಸಲು ಬಳಸಿರುವ ನೂತನ ದಾರಿಯೇ ಸಿಮ್ ಸ್ವಾಪ್ ಆಗಿದೆ. ಹೆಸರಾಂತ ಕಂಪೆನಿಗಳ ಮೂಲಕ ಗ್ರಾಹಕರಿಗೆ ಕರೆ ಮಾಡುವ ವಂಚಕರು ಕ್ಷಣಮಾತ್ರದಲ್ಲಿ ನಮ್ಮ ಸಿಮ್‍ನ ಮಾಹಿತಿಯನ್ನು ತಮ್ಮ ಸರ್ವರ್‍ಗಳಲ್ಲಿ ಸೇವ್ ಮಾಡಿಕೊಳ್ಳುತ್ತಾರೆ. ನಂತರ ಗ್ರಾಹಕರು ಸಿಮ್ ಕಾರ್ಡ್‍ಗಳನ್ನು ಹ್ಯಾಕ್ ಮಾಡಿ ಹಣದೋಚುವ ಹಾಗೂ ಕಾನೂನು ಬಾಹಿರ ಕೃತ್ಯಕ್ಕೆ ಬಳಸುವುದೇ ಸಿಮ್ ಸ್ವಾಪ್ ಆಗಿದೆ.
Advertisement
1. ಫೋನಲ್ಲಿ ಟ್ರ್ಯಾಪ್:
ಸೈಬರ್ ವಂಚಕರು ಗ್ರಾಹಕರ ಕರೆ ಮಾಡಿ ಫೋನ್ ಸಂಖ್ಯೆಯೊಂದಿಗೆ ಬಂದಿರುವ ಓಟಿಪಿಯನ್ನು ಹಂಚಿಕೊಳ್ಳಲು ವಿನಂತಿಸಿಕೊಳ್ಳುತ್ತಾರೆ. ಆಗ ನೀವು ಒಟಿಪಿಯನ್ನು ಅವರೊಂದಿಗೆ ಹಂಚಿಕೊಂಡರೆ ನಿಮ್ಮ ಸಿಮ್‍ನ ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ ಕಲೆಹಾಕುತ್ತಾರೆ.
Advertisement
2. ಕಂಪೆನಿ ಪ್ರತಿನಿಧಿ ಹೆಸರಲ್ಲಿ ಕರೆ:
ನಿಮ್ಮ ಸೇವಾ ಪೂರೈಕೆದಾರ ಕಂಪೆನಿಯ ಗ್ರಾಹಕಪ್ರತಿನಿಧಿಗಳೆಂದು ಕರೆಮಾಡುವ ಅವರು, ಮೊಬೈಲ್ ಡೇಟಾವನ್ನು ಪಡೆಯಲು ಅಥವಾ ಮೊಬೈಲ್ ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಹಾಗೂ 4 ಜಿ ಸಿಮ್ ಕಾರ್ಡ್ ಗೆ ಬದಲಾಯಿಸುವ ಸಂಬಂಧ ಕೃತ್ಯ ಎಸಗುತ್ತಾರೆ.
3. 20 ನಂಬರ್ ಗೆ ಬೇಡಿಕೆ:
ಪ್ರತಿಯೊಂದು ಸಿಮ್ ಕಾರ್ಡ್ ನ ಹಿಂಭಾಗದಲ್ಲಿ ಈ 20-ಅಂಕಿಯ ಸಂಖ್ಯೆ ಇರುತ್ತದೆ. ಈ ಸಂಖ್ಯೆಗೆಇಂಟಿಗ್ರೇಟೆಡ್ ಸಕ್ರ್ಯೂಟ್ ಕಾರ್ಡ್ ಐಡೆಂಟಿಫೈಯರ್ (ಐಸಿಸಿಐಡಿ) ಎಂದು ಕರೆಯಲಾಗುತ್ತದೆ. ನಿಮ್ಮ ಸಿಮ್ ನ 20-ಅಂಕಿಯ ಸಂಖ್ಯೆಯನ್ನು ಪಡೆಯಲು ವಂಚಕರು ಪ್ರಯತ್ನಿಸಿರುತ್ತಾರೆ. ಇದರ ಮೂಲಕ ಸಿಮ್ ಸ್ವಾಪ್ ಮಾಡಲು ಪ್ರಯತ್ನಿಸುತ್ತಾರೆ.
4. ದೃಢೀಕರಿಸುವಂತೆ ಮನವಿ:
ಒಂದು ವೇಳೆ ನೀವು ಸೈಬರ್ ವಂಚಕರಿಗೆ ನಿಮ್ಮ ಸಿಮ್ ನ 20 ಅಂಕಿಗಳ ನಂಬರ್ ನೀಡಿದ್ದರೆ, ಅವರು ಪುನಃ ನಿಮ್ಮ ಸಿಮ್ ನಂಬರ್ ಗೆ ಕರೆ ಮಾಡಿ ದೃಢೀಕರಿಸಲು ತಿಳಿಸುತ್ತಾರೆ. ಈ ವೇಳೆ ನೀವು ಅವರ ಕರೆ ಸ್ವೀಕರಿಸಿ 1ನ್ನು ಒತ್ತಿದರೆ ನೀವು ಸಿಮ್ ಸ್ವಾಪ್ ಜಾಲಕ್ಕೆ ಬೀಳುವುದು ಖಚಿತ.
5. ಸಿಮ್ ಕಾರ್ಡ್ ನಿಷ್ಕ್ರಿಯ:
ಒಮ್ಮೆ ನೀವು ಸಿಮ್ ಸ್ವಾಪ್ ಗೆ ಒಳಗಾದರೇ, ಕೂಡಲೇ ವಂಚಕರು ನಿಮ್ಮ ಸಿಮ್ ಕಾರ್ಡಿನ ನೆಟ್‍ವರ್ಕ್ ಅನ್ನು ನಿಷ್ಕ್ರಿಯಗೊಳಿಸುತ್ತಾರೆ. ಅಲ್ಲದೇ ನಿಮ್ಮ ಸಿಮ್ ನ ಮಾಹಿತಿಗಳನ್ನು ಮತ್ತೊಂದು ಹೊಸ ಸಿಮ್ ಕಾರ್ಡ್‍ಗೆ ವರ್ಗಾಯಿಸಿಕೊಳ್ಳುತ್ತಾರೆ.
6. ಹಣ ಹೋಗುತ್ತೆ:
ವಂಚಕರು ಮೇಲಿನ ಎರಡು ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ನಿಮ್ಮ ಸಿಮ್ ಕಾರ್ಡ್ ಜೊತೆ ಲಿಂಕ್ ಆಗಿರುವ ಬ್ಯಾಂಕಿಂಗ್ ಸೇವೆಗಳ ಮಾಹಿತಿಗಳನ್ನು ಪಡೆದು, ನಿಮ್ಮ ಹಣವನ್ನು ಕ್ಷಣಮಾತ್ರದಲ್ಲಿ ನಿಮಗೆ ಅರಿವಿಲ್ಲದಂತೆಯೇ ಎಗರಿಸುತ್ತಾರೆ.
7. ಬ್ಯಾಂಕ್ ಖಾತೆಗೆ ಕನ್ನ:
ಸಿಮ್ ಸ್ವಾಪಿಂಗ್ ಮೂಲಕ ನಿಮ್ಮ ಯಾವುದೇ ಬ್ಯಾಂಕಿನ ವಹಿವಾಟುಗಳನ್ನು ಪತ್ತೆಹಚ್ಚಿ, ನಕಲಿ ಖಾತೆಯನ್ನು ತೆರೆದು ನಿಮ್ಮ ಆಧಾರ್ ಸಂಖ್ಯೆಯನ್ನು ಕಂಡುಕೊಂಡು ಆನ್‍ಲೈನ್ ವಂಚನೆ ಮಾಡುತ್ತಾರೆ. ಆದ್ದರಿಂದ ಯಾವುದೇ ಅನುಮಾನಾಸ್ಪದ ಕರೆಗಳಿಗೆ ನಿಮ್ಮ ಆಧಾರ್ ನಂಬರುಗಳನ್ನು ನೀಡಬಾರದು.
8. ಅನುಮಾನ ಪಡಿ:
ಹೆಚ್ಚಿನ ಸಂದರ್ಭಗಳಲ್ಲಿ ಸಿಮ್ ಸ್ವಾಪ್ ಆದ ನಂತರ, ಬೇಕಂತಲೇ ವಂಚಕರು ನಿಮಗೆ ಕರೆ ಮಾಡಿ ತೊಂದರೆ ಕೊಡುತ್ತಾರೆ. ಆಗ ನೀವು ಯಾವುದೇ ಕಾರಣಕ್ಕೂ ಮೊಬೈಲನ್ನು ಸ್ವಿಚ್ ಆಫ್ ಹಾಗೂ ಸೈಲಂಟ್ ಮಾಡಬೇಡಿ. ಇದರಿಂದಾಗಿ ವಂಚಕರು ನಿಮ್ಮ ಸಿಮ್ ಕಾರ್ಡಿನ ಬದಲಾವಣೆಯನ್ನು ಸಲೀಸಾಗಿ ಮಾಡುತ್ತಾರೆ. ಯಾವುದೇ ಸಿಮ್ ಕಾರ್ಡ್ ಮಾಹಿತಿ ಬದಲಾವಣೆಗೆ ಕಂಪೆನಿಗಳು ಕನಿಷ್ಠ 4 ತಾಸುಗಳನ್ನು ತೆಗೆದುಕೊಳ್ಳುತ್ತವೆ.
9. ಖಾತೆಗಳನ್ನು ಆಗಾಗ ಪರೀಕ್ಷಿಸಿ:
ನಿಮ್ಮ ಬ್ಯಾಂಕ್ ಖಾತೆಗಳನ್ನು ಆಗಾಗ್ಗೆ ಪರೀಕ್ಷಿಸುವುದು ಉತ್ತಮ ಅಭ್ಯಾಸವಾಗಿದ್ದು, ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‍ವರ್ಡ್‍ಗಳನ್ನು ಬದಲಾಯಿಸುತ್ತಿರಿ. ಇದರಿಂದಾಗಿ ವಂಚಕರಿಗೆ ನಿಮ್ಮ ಮಾಹಿತಿಯನ್ನು ಕದಿಯಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಖಾತೆಯಲ್ಲಿ ಯಾವುದೇ ಅನುಮಾನಾಸ್ಪದ ವಹಿವಾಟು ನಡೆದಾಗ ಕೂಡಲೇ ಬ್ಯಾಂಕುಗಳಿಗೆ ಸಂಪರ್ಕಿಸಿ.